ಕದನ ಕಲಿ ಚೀರಂಜಿವಿಗಳ ಕಣ ಸಿದ್ಧತೆ

20230408_162956
Published on

ಶಿವಾನಂದ ಹಿರೇಮಠ ಗದಗ,
ಮುಂಬರುವ ಚುನಾವಣೆಗೆ ತಮ್ಮ ಸುಪುತ್ರರನ್ನು ಸಿದ್ಧಗೊಳಿಸುತ್ತಿರುವ ಜಿಲ್ಲೆಯ ರಾಷ್ಟ್ರೀಯ ಪಕ್ಷದ ನಾಯಕರು, ಮಕ್ಕಳು ರಾಜಕೀಯ ಪಕ್ವತೆ ಹೊಂದಲು 2023ರ ಚುನಾವಣೆಯಿಂದಲೇ ಕ್ಷೇತ್ರದಲ್ಲಿ ಮುಂದಡಿ ಬಿಟ್ಟಿದ್ದಾರೆ. ರಾಜಕೀಯ ಅನುಭವ, ಜಾತಿ ಸಮೀಕರಣ, ನಿಯಂತ್ರಣ, ಸಂಪನ್ಮೂಲ ಕ್ರೂಢಿಕರಣ, ಬಳಕೆ, ಪಕ್ಷ ಸಂಟನೆ ಹಾಗೂ 2028ರ ಚುನಾವಣೆಯಲ್ಲಿ ತಮ್ಮ ಸ್ಥಾನವನ್ನು ಮಕ್ಕಳಿಂದಲೇ ಭತಿರ್ಗೊಳಿಸುವ ಹಿನ್ನೆಲೆ ಜಿಲ್ಲೆಯ ಹಿರಿಯ ರಾಜಕಾರಣಿಗಳು ತಮ್ಮ ಚಿರಂಜೀವಿಗಳಿಗೆ ಕ್ಷೇತ್ರದಲ್ಲಿ ಸಂಟನಾತ್ಮಕ ನಾಯಕತ್ವ ನೀಡಿದ್ದಾರೆ.
ಸಚಿವ ಸಿ.ಸಿ. ಪಾಟೀಲ ಪುತ್ರ ಉಮೇಶಗೌಡ ಪಾಟೀಲ, ಮಾಜಿ ಶಾಸಕ ಜಿ.ಎಸ್. ಪಾಟೀಲ ಪುತ್ರ ಮಿಥುನ್ ಪಾಟೀಲ, ಎಚ್.ಕೆ. ಪಾಟೀಲ ಅವರ ಪುತ್ರ ಕೃಷ್ಣೇಗೌಡ ಪಾಟೀಲ ಹಾಗೂ ಬಿ.ಆರ್. ಯಾವಗಲ್ ಪುತ್ರ ವಿವೇಕ ಯಾವಗಲ್ ತಂದೆಯ ಉಸ್ತುವಾರಿಗೆ ಸಿದ್ಧತೆ ನಡೆಸಿದ ನಾಯಕರು.

ಉಮೇಶಗೌಡ ಪಾಟೀಲ:
2013 ಮತ್ತು 2018ರಲ್ಲಿ ತಂದೆಯ ಜತೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಇದೇ ಪ್ರಥಮಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕ್ಷೇತ್ರದಲ್ಲಿ ಸಿ.ಸಿ. ಪಾಟೀಲರ ಚುನಾವಣಾ ಜವಾಬ್ದಾರಿ ಹೊತ್ತಿದ್ದಾರೆ. ಸಿ.ಸಿ. ಪಾಟೀಲರು ಪ್ರಮುಖ ಖಾತೆ ನಿಭಾಯಿಸುತ್ತಿರುವ ಹಿನ್ನೆಲೆ ಕ್ಷೇತ್ರದಲ್ಲಿ ಉಮೇಶಗೌಡ ಪಾಟೀಲ ಸಕ್ರೀಯ ರಾಜಕಾರಣದಲ್ಲಿ ತೋಡಗಿದ್ದಾರೆ. ನರಗುಂದಲ್ಲಿ ನಡೆದ ರಾಷ್ಟ್ರಮಟ್ಟದ ಕಬ್ಬಡ್ಡಿ ಟೋನಿರ್, ಲಕ್ಕುಂಡಿ ಉತ್ಸವ, ಕ್ಷೇತ್ರದಲ್ಲಿ ವಿಜಯಸಂಕಲ್ಪ ಯಾತ್ರೆ ನಿಭಾಯಿಸುವುದರಲ್ಲಿ ಯಶಸ್ವಿ. ಸ್ಪರ್ಧಾತ್ಮಕ ಪರೀಕ್ಷಗೆ ಉಚಿತ ಕೊಚಿಂಗ್ ಶಿಬಿರ, ಪಂಚಮಸಾಲಿ ಮೂತಿರ್ ಪ್ರತಿಷ್ಠಾಪನೆ ಹಾಗೂ ಕಿತ್ತೂರು ಚೆನ್ನಮ್ಮ ನಾಟಕೋತ್ಸವ ಹೀಗೆ ಸಂನಾತ್ಮಕ ಕಾರ್ಯದಲ್ಲಿ ಸಚಿವರಿಗೆ ಹೆಗಲು ಕೊಡುತ್ತಿದ್ದಾರೆ. ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಹಿನ್ನಡೆಯ ಸೂಕ್ಷ$್ಮತೆ ಅರಿತಿದ್ದ ಉಮೇಶಗೌಡ ಪಾಟೀಲರು ಸಿ.ಸಿ. ಪಾಟೀಲ ಮಾರ್ಗದರ್ಶನದಲ್ಲಿ ಕ್ಷೇತ್ರದ ಪಂಚಮಸಾಲಿ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ಸಮಾರಂಭ ಮಾಡಿದರು.
====
ವಿವೇಕ್ ಯಾವಗಲ್:
ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದಶಿರ್ ಆಗಿರುವ ವಿವೇಕ ಯಾವಗಲ್ 2018ರಲ್ಲಿ ತಂದೆಯ ಜತೆಗಿದ್ದರು. ಪ್ರಸ್ತುತ ಸಕ್ರೀಯ ರಾಜಕಾರಣದಲ್ಲಿ ತೋಡಗಿದ್ದಾರೆ. ವಯಸ್ಸಿನ ಕಾರಣದಿಂದ ಬಿ.ಆರ್. ಯಾವಗಲ್ ಅವರಿಗೆ ಟಿಕೆಟ್ ತಪ್ಪಿದ್ದಲ್ಲಿ ಮಗ ವಿವೇಕ ಯಾವಗಲ್ ಗೆ ಟಿಕೆಟ್ ನೀಡಿ ಎಂದು ಬಿ.ಆರ್. ಯಾವಗಲ್ ಹೈಕಮಾಂಡ್ ಗೆ ಪ್ರಸ್ತಾಪಿಸಿದ್ದಾರೆ. ಆದರೆ ಪಕ್ಷದ ಕಾರ್ಯಕರ್ತರನ್ನು ಹೊರತುಪಡಿಸಿದರೆ ವಿವೇಕ್ ಅವರಿಗೆ ವೈಯಕ್ತಿಕ ವರ್ಚಸ್ಸು ಕಡಿಮೆ. ಯುವ ಕ್ರಾಂತಿ ಸಮಾವೇಶ, ಪ್ರಜಾಧ್ವನಿ ಕಾರ್ಯಕ್ರಮ ಹಿನ್ನೆಲೆ ಕ್ಷೇತ್ರದಲ್ಲಿ ಬೈಕ್ ರ್ಯಾಲಿ, ರಕ್ತದಾನ ಶಿಬಿರ ಮೂಲಕ ಕಾಂಗ್ರೆಸ್ ಪಕ್ಷ ಸಂಟನೆಯಲ್ಲಿ ತೋಡಗಿದ್ದಾರೆ. ಭವಿಷ್ಯದ ರಾಜಕಾರಣದಲ್ಲಿ ವಿವೇಕ್ ಗೆ ಪ್ರಬಲ ಪೈಪೊಟಿ ಈಗಿನಿಂದಲೇ ಘೋಚರಿಸುತ್ತಿದೆ.
=====
ಕೃಷ್ಣೇಗೌಡ ಪಾಟೀಲ:
ರಾಜಕೀಯ ಜೀವನದ ಮಧುಚಂದ್ರ ಕಾಲದಲ್ಲಿ ಇರುವ ಕೃಷ್ಣೇಗೌಡ ಪಾಟೀಲರು ಕಳೆದೊಂದು ವರ್ಷದಿಂದ ಅವರ ಕ್ಷೇತ್ರ ಸಂಚಾರ ಜಾರಿಯಲ್ಲಿದೆ. ಗದಗ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದಶಿರ್ ಕಾರ್ಯನಿರ್ವಹಿಸುತ್ತಿರುವ ಕೃಷ್ಣೇಗೌಡ ಪಾಟೀಲ 29 ವರ್ಷದ ಯುವಕ.  ಅಜ್ಜ ಕೆ.ಎಚ್. ಪಾಟೀಲ ಹೆಸರೇ ಇಟ್ಟಿರುವುರಿಂದ ಎಲ್ಲರೂ ಪುಟ್ಟುಗೌಡ ಪಾಟೀಲ ಎಂದು ಸಂಬೋಧಿಸುತ್ತಾರೆ. ಮೂಲಗಳ ಪ್ರಕಾರ 2033ರ ವಿಧಾನಸಭೆ ಚುನಾವಣೆಗೆ ಇವರೇ ಕಾಂಗ್ರೆಸ್ಸಿನಿಂದ ಹುರಿಯಾಳು. ಗದಗ ಕ್ಷೇತ್ರವನ್ನು ಅರಿತುಕೊಳ್ಳ ಸಮಯಾವಕಾಶ ಬೇಕಿರುವುದರಿಂದ ಕ್ಷೇತ್ರದಲ್ಲಿ ನಿರಂತರ ಸಂಚಾರ ನಡೆಸುತ್ತ ಯುವ ಸಮಾವೇಶ, ಸ್ಪೋಟ್ಸ್, ಗ್ರಾಮಿಣ ಭಾಗದಲ್ಲಿ ಸಂಟನೆ, ಮುನಿಸುಕೊಂಡ ಕಾರ್ಯಕರ್ತರಿಗೆ ತೀವ್ರ ಸ್ಪಂಧನೆ, ಸಣ್ಣಪುಟ್ಟ ಭಿನ್ನಾಭಿಪ್ರಾಯ ಶಮನಗಳಂತ ಕಾರ್ಯ ನಿರ್ವಹಿಸುತ್ತಿದ್ದಾರೆ.
====
ಮಿಥುನ್ ಪಾಟೀಲ:
ಜಿ.ಎಸ್. ಪಾಟೀಲ ಪುತ್ರ ಮಿಥುನ್ ಪಾಟೀಲ 2018ರಿಂದ ಸಕ್ರೀಯ ರಾಜಕಾರಣಿ. ಪ್ರಸ್ತುತ ರೋಣ ಪುರಸಭೆ ಉಪಾಧ್ಯಕ್ಷರು. ತಮ್ಮ ಮಗನನ್ನೇ ಭವಿಷ್ಯದ ಚುನಾವಣೆಗೆ ಸಿದ್ದಗೊಳಿಸಬೇಕು ಎಂಬ ಬೇಲಿಯನ್ನು ಜಿ.ಎಸ್. ಪಾಟೀಲ ಹೊಂದಿಲ್ಲ. ಪ್ರಜಾಪ್ರಭುತ್ವ ಮತ್ತು ಜ್ಯಾತ್ಯಾತಿತ ವ್ಯವಸ್ಥೆಯಲ್ಲಿ ಯಾರು ಬೇಕಾದರು ಮುಂದಿನ ಸ್ಪಧಿರ್ ಆಗಬಹುದು ಎಂಬುದನ್ನು ಆಪ್ತರಬಳಿ ಹೇಳಿಕೊಂಡಿದ್ದಾರೆ. ಹಿರಿಯ ಮತ್ತು ಪಕ್ವತೆ ರಾಜಕಾರಣಿ ಆಗಿರುವ ಇವರ ವಯಸ್ಸಿನ ಕಾರಣದಿಂದ ದೂರದ ನಾನಾ ಕಾರ್ಯಕ್ರಮಗಳಿಗೆ ಮಿಥುನ್ ಪಾಟೀಲ ಹಾಜರಾಗುತ್ತಾರೆ. ರೋಣ ಪಟ್ಟಣದಲ್ಲಿ ತಮ್ಮದೇ ಆಪ್ತ ಬಳಗ, ಕಾರ್ಯಕರ್ತರ ಪಡೆ ನಿಮಿರ್ಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net