

ಬಾಲ್ಯಾವಸ್ಥೆಯ ಯೋಗಾಭ್ಯಾಸ ಭಾವಿ ಜೀವನಕ್ಕೆ ಆಧಾರ: ಪ್ರಭುಸ್ವಾಮಿಗಳು
ವಿಜಯವಾಣಿ ಸುದ್ದಿಜಾಲ ಗದಗ
ಬಾಲ್ಯದಲ್ಲಿ ಕಲಿತ ವಿಷಯಗಳನ್ನು ಮರೆಯದೆ ನೆನಪಿಟ್ಟುಕೊಂಡು ಜೀವನದಲ್ಲಿ ಅವುಗಳ ಉಪಯೋಗ ಪಡೆಯುತ್ತೇವೆ. ಅಂತಹ ವಿಷಯಗಳಲ್ಲಿ ಈಜು, ಸೈಕಲ್, ಆಟೋಟಗಳು ಮುಖ್ಯವಾಗಿರುವಂತೆ ಯೋಗಾಭ್ಯಾಸವು ಪ್ರಮುಖವಾಗಿದೆ ಎಂದು ಸಂಡೂರಿನ ಪ್ರಭುದೇವರ ಮಠದ ಪ್ರಭು ಮಹಾಸ್ವಾಮಿಗಳು ತಿಳಿಸಿದರು.
ನಗರದ ಎಸ್ವೈಬಿಎಂಎಸ್ ಯೋಗಪಾಠಶಾಲೆಯ ಸುವರ್ಣ ಮಹೋತ್ಸವ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯೋಗಾಭ್ಯಾಸವು ಪರಿರ್ಪೂಣ ಆರೋಗ್ಯದ ನಿಧಿ ಆಗಿದೆ. ನಾವು ಸದೃಢರಾಗಿರುವಾಗ ಆರೋಗ್ಯದ ಅರಿವು ನಮಗಾಗುವುದಿಲ್ಲ. ಇಳಿವಯಸ್ಸಿನಲ್ಲಿ ಅಶಕ್ತರಾದಾಗ, ರೋಗ ಪೀಡಿತರಾದಾಗ, ವೈದ್ಯರ ಬಳಿ ಹೋದಾಗ ವೈದ್ಯರು ಚಿಕಿತ್ಸೆಯೊಂದಿಗೆ ಯೋಗ ಮಾಡಲು ಸೂಚಿಸಿದರು. ಆವಾಗ ನಮಗೆ ಯಾವ ಯೋಗ, ಹೇಗೆ ಮಾಡಬೇಕು ಎಂಬುದು ತೋಚುವುದಿಲ್ಲ. ಒಂದು ವೇಳೆ ನಾವು ಬಾಲ್ಯಾವಸ್ಥೆಯಲ್ಲಿಯೇ ಯೋಗಾಭ್ಯಾಸ ಮಾಡಿದ್ದರೆ ಇಳಿ ವಯಸ್ಸಿನಲ್ಲೂ ಸಾಧ್ಯಾವಾದಷ್ಟು ಯೋಗ ಮಾಡಿ ನಮ್ಮ ಆರೋಗ್ಯವನ್ನು ಸುಧಾರಿಸಿಕೊಂಡು ಸುಖವಾಗಿ ಇರಬಹುದು. ಈ ಹಿನ್ನಲೆಯಲ್ಲಿ ಬಾಲ್ಯಾವಸ್ಥೆಯ ಯೋಗಾಭ್ಯಾಸ ಭಾವಿ ಜೀವನಕ್ಕೆ ಆಧಾರ ಆಗಿದೆ ಎಂದರು.
ಇಂದಿನ ಮಕ್ಕಳು ಮೊಬೈಲ್ ವೀಕ್ಷಣೆಗೆ ಮೀಸಲಾಗಿರುವರೆಂಬ ಊಹೆ ನಮ್ಮದಾಗಿತ್ತು. ಆದರೆ ಗದಗ ಜಿಲ್ಲೆಯ ಮಕ್ಕಳು ಅದ್ಭುತವಾದ ಯೋಗ ಪ್ರದರ್ಶನ ನೀಡಿದ್ದಾರೆ. ನಮ್ಮ ಊಹೆ ತಪ್ಪಾಯಿತು. ಇಂಥ ಮಕ್ಕಳೇ ಉತ್ತಮ ಪ್ರಜೆಗಳಾಗಿ ನಮ್ಮ ನಾಡಿನ ಆಸ್ತಿ ಆಗಬೇಕು. ಗದಗ ಜಿಲ್ಲೆಯಲ್ಲಿನ ಯೋಗ ಸಂಟನೆಗಳು ಹಿರಿಯರ ಹೊತೆಗೆ ಕಿರಿಯರಿಗೂ ಯೋಗ ಶಿಕ್ಷಣ ಪರಿಚಯಿಸಿ ತರಬೇತಿ ನೀಡುತ್ತಿರುವುದು ಶ್ಲಾನೀಯ. ಯೋಗ ಪಾಠಶಾಲೆ ಈ ನಿಟ್ಟಿನಲ್ಲಿ ಮಕ್ಕಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿ ಅವರಲ್ಲಿ ಯೋಗಾಸಕ್ತಿಯನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪದ್ಮಾಸನ, ವೃಾಸನ, ಪರ್ವತಾಸನ, ಭುಜಂಗಾಸನ, ವಕ್ರಾಸನ, ಭಾಮರಿ ಪ್ರಾಣಾಯಾಮ, ಧ್ಯಾನಗಳನ್ನು ಪ್ರದಶಿರ್ಸಲಾಯಿತು. ತೋಂಟದಾರ್ಯ ಶ್ರೀಗಳು, ಅರಿಸಿಕೇರಿ ಕೋಲುಶಾಂತೇಶ್ವರ ಶ್ರೀಗಳು, ಶ್ರೀಕೃಷ್ಣ ದೇವರಾಯರು, ಕೆ. ಎಸ್. ಪಲ್ಲೇದ ಇತರರು ಇದ್ದರು.