ಯೋಗ ಪ್ರಪಂಚಕ್ಕೆ ನೀಡಿದ ಭಾರತದ ಅದ್ಭುತ ಕೊಡುಗೆ: ಜಿಲ್ಲಾ ನ್ಯಾಯಾಧೀಶೆ ನಾಗವೇಣಿ

21GDG07
Published on

ವಿಜಯವಾಣಿ ಸುದ್ದಿಜಾಲ ಗದಗ

ಪ್ರಪಂಚಕ್ಕೆ ಯೋಗದ ಮಹತ್ವದ ಬಗ್ಗೆ ತಿಳಿಸಿಕೊಟ್ಟ ಭಾರತದ ಕೊಡುಗೆ ಅದ್ಭುತ. ಎಲ್ಲ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳಿಗೆ ಯೋಗ ರಾಮಬಾಣವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅದ್ಯೆ ನಾಗವೇಣಿ ಹೇಳಿದರು.

ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ 11ನೇ ಅಂತರಾಷ್ಟ್ರೀಯ ೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಹಣವಿಲ್ಲದೆ ರೋಗ ಗುಣಪಡಿಸುವ ಶಕ್ತಿ ಯೋಗಕ್ಕಿದೆ. ಯೋಗ ಮಾಡುವುದರಿಂದ ಜ್ಞಾಪಕಶಕ್ತಿ ವೃದ್ಧಿಸುತ್ತದೆ. ಮಾನಸಿಕ ಮತ್ತು ದೈಹಿಕ ಸಮತೋಲನ ಕಾಪಾಡಲು ಯೋಗ ಸಹಕಾರಿ. ಕೆಲಸದ ಮದ್ಯೆಯು ಪ್ರತಿದಿನ ಯೋಗ ಪ್ರಾಣಾಯಾಮ ಮಾಡುವುದರಿಂದ ಮನುಷ್ಯ ಮತ್ತು ಮನಸ್ಸು ಲವಲವಿಕೆಯಿಂದ ಉಲ್ಲಾಸದಿಂದ ಇರಲು ಸಾದ್ಯ. ಆರೋಗ್ಯದ ಕಡೆಗೆ ಎಲ್ಲರೂ ಗಮನಹರಿಸಬೇಕು. ೋಗ ದಿನಾಚರಣೆ ನಿಮಿತ್ಯವಾಗಿ ಜರುಗಿದ ಯೋಗಾಸನದ ಕಾರ್ಯಕ್ರಮದಿಂದ ಪ್ರೇರಿತರಾಗಿ ಎಲ್ಲರೂ ಪ್ರತಿದಿನ ಯೋಗಾಸನ ಮಾಡುವುದರ ಮೂಲಕ ತಮ್ಮ ಆರೋಗ್ಯದ ಜೊತೆಗೆ ಸದೃಡ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಖು ಎಂದು ನಾಗವೇಣಿ ಹೇಳಿದರು.

ಜಿಲ್ಲಾ ವಕೀಲರ ಸಂದ ಅದ್ಯ ಆರ್​. ಜಿ. ಕಲ್ಲೂರ, ಗಂಗಾಧರ ಸಿ. ಎಂ, ಸಿ. ಎಸ್​. ಶಿವನಗೌಡ್ರ, ಜಿ. ಆರ್​. ಶೆಟ್ಟರ, ದೀಪ್ತಿ ನಾಡಗೌಡ, ಶಿಲ್ಪಾ ತಿಮ್ಮಾಪೂರ, ಬೀರಪ್ಪ ಕಾಂಬಳೆ, ಎಂ. ಎ. ನಾಯ್ಕರ, ಎಂ. ಎ. ಸಂಗನಾಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net