ಔಷಧಿ ರಹಿತ ಜೀವನಕ್ಕಾಗಿ ಯೋಗಾಭ್ಯಾಸ ಅಗತ್ಯ: ಡಾ. ಸತೀಶ ಹೊಂಬಾಳಿ

14GDG10
Published on

ವಿಜಯವಾಣಿ ಸುದ್ದಿಜಾಲ ಗದಗ

ವಿಶ್ವದದಲ್ಲಿ ಬಹುತೇಕ ಜನರು ಅನೇಕ ರೋಗಗಳಿಂದ ಬಳಲುತ್ತಿದ್ದಾರೆ. ವಿವಿಧ ಆಹಾರ ಪದ್ದತಿಗಳಿಂದ ರೋಗ ಮುಕ್ತ ಜೀವನ ಸಾಧ್ಯವೇ ಇಲ್ಲ ಎಂಬ ಇಂದಿನ ಯುಗದಲ್ಲಿ ಪ್ರತಿಯೊಬ್ಬರೂ ನಿಯಮಿತವಾಗಿ ಯೋಗ ಮಾಡುವುದನ್ನು ರೂಢಿಸಿಕೊಡರೆ ಶಾಂತಿಯುತ, ಆರೋಗ್ಯಯುತ ಜೀವನ ನಡೆಸಲು ಸಾಧ್ಯ ಎಂದು ಯೋಗ ತರಬೇತುದಾರರು ಹಾಗೂ ನಿಸರ್ಗ ಚಿಕಿತ್ಸಾ ತ ಡಾ. ಸತೀಶ ಹೊಂಬಾಳಿ ಹೇಳಿದರು.

ನಗರದ ಸಂಭಾಪುರ ರಸ್ತೆಯಲ್ಲಿರುವ ಶಂಕರಮಠದಲ್ಲಿ ಅದ್ವೆ$ೈತ ಪ್ರಸಾರ ಪರಿಷತ್​ ಸಂಸ್ಥೆ ಶನಿವಾರ ಏರ್ಪಡಿಸಿದ್ದ ಅದ್ವೆ$ೈತಾನುಭವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯೋಗವೆಂದರೆ ಪರಿಸರದ ನಾಡಿ ಮಿಡಿತದೊಂದಿಗೆ ಮಾನವ ತನ್ನನ್ನು ತಾನು ಮೇಳೈಸಿಕೊಳ್ಳುವುದು. ಜೀವನ ಕ್ರಮವನ್ನು ಸುಧಾರಿಸಿ ಕೊಳ್ಳುವುದು. ಯೋಗದ ಎಂಟು ಅಂಗಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಹಾಗೂ ಸಮಾಧಿಗಳ ಕುರಿತು ಮನುಷ್ಯನು ಅರ್ಥ ಮಾಡಿಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿ ಮಾತನಾಡಿ ರತ್ನಾಕರಭಟ್ಟ ಜೋಷಿ, ಬ್ರಾಹ್ಮಣರು ನಡೆಸುವ ದಿನಚರಿಯೇ ಒಂದು ಯೋಗ. ನಿತ್ಯ ಕರ್ಮಗಳಾದ ತ್ರಿಕಾಲ ಸಂಧ್ಯಾವಂದನೆ, ಉಪವಾಸ, ಎಕಾದಶಿಯ ಆಚರಣೆ ಹಾಗೂ ಪೂಜೆಯ ಎಲ್ಲ ಕ್ರಿಯೇಗಳೂ ಯೋಗದ ಭಾಗಗಳಾಗಿವೆ. ಆದ್ದರಿಂದ ಎಲ್ಲ ಪಾಲಕರೂ ತಮ್ಮ ಮಕ್ಕಳಿಗೆ ಈ ವಿಷಯವನ್ನು ತಿಳಿಸಿ ಹಾಗೂ ಬ್ರಾಹ್ಮಣರ ಆಚರಣೆಗಳು ವೈಜ್ಞಾನಿಕ ಆಧಾರವಾಗಿವೆ ಎಂಬುದನ್ನು ಮನದಟ್ಟು ಮಾಡಿಸಬೇಕು ಎಂದು ಹೇಳಿದರು.

ನಿವೃತ್ತ ಶಿಕಿ ರಮಾದೇವಿ ಮ್ಯಾಗೇರಿ ಅವರು ಯೋಗಾಸನಗಳನ್ನು ಪ್ರಾತ್ಯಕೆಯೊಂದಿಗೆ ವಿವರಣೆ ನೀಡಿದರು. ರಾಮಚಂದ್ರ ಮೋನೆ, ಗಣಪತಿ ಕೌಜಲಗಿ, ಜ್ಯೋತಿ ಇನಾಮದಾರ, ಗುರು ದೇಶಪಾಂಡೆ, ಹೇಮಂತ ಕುಲಕಣಿರ್, ಗಣೇಶಭಟ್ಟ ಪುರಾಣಿಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net