

ವಿಜಯವಾಣಿ ಸುದ್ದಿಜಾಲ ಗದಗ
ದೇಹವನ್ನು ರೋಗಮುಕ್ತಗೊಳಿಸಿ, ಮನಸ್ಸನ್ನು ಶಾಂತಗೊಳಿಸಿ ಜೀವನದ ಔನ್ನತ್ಯವನ್ನು ಸಾಧಿಸಲು ಭಾರತೀಯರು ಕಂಡು ಹಿಡಿದ ಅಧ್ಭುತ ಕಲೆ ಯೋಗವಾಗಿದೆ ಎಂದು ಆಯುರ್ವೇದ ತ ಡಾ. ಉಮೇಶ ಪುರದ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬಸವಯೋಗ ಮಂದಿರದ ಬಸವೇಶ್ವರ ಪ್ರೌಢಶಾಲೆಯಲ್ಲಿ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಹಿಸಿ ಮಾತನಾಡಿದ ಅವರು, ಪತಂಜಲಿ ಮಹಷಿರ್ಗಳು ಸಂಶೋಧನೆಯ ಮೂಲಕ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಹಲವು ಸೂತ್ರಗಳನ್ನು ತಿಳಿಸಿದ್ದಾರೆ. ಅವುಗಳನ್ನು ಅರಿತು ಆಚರಿಸುವುದರ ಮೂಲಕ ಸ್ವಸ್ಥ ಸಮಾಜವನ್ನು ರೂಪಿಸಬಹುದು. ಒತ್ತಡ ಮುಕ್ತ ಬದುಕಿಗೆ ಯೋಗ ದಿವ್ಯ ಔಷಧವಾಗಿದೆ. ಆಹಾರವೇ ಔಷಧಿಯಾಗಿದ್ದು, ವಾತ ಪಿತ್ತ ಕ ದೋಷದಿಂದ ಉಂಟಾಗುವ ರೋಗರುಜಿನಗಳನ್ನು ಪ್ರಕೃತಿಯಲ್ಲಿ ಸಿಗುವ ಸಸ್ಯಗಳಿಂದಲೇ ನಿವಾರಿಸಬಹುದಾಗಿದೆ. ಆದಾಯದ ಬಹುಪಾಲು ಆಸ್ಪತ್ರೆಗೆ ವ್ಯಯ ಮಾಡದೇ ನಿತ್ಯ ಕರ್ಮವಾಗಿ ಯೋಗಾಸನ ಮತ್ತು ಪ್ರಾಣಾಯಾಮಗಳನ್ನು ರೂಢಿಸಿಕೊಳ್ಳುವುದು ಇಂದಿನ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಡಾ. ಶರಣಬಸಪ್ಪ ಪಲ್ಲೇದ ಅವರ ಜೀವನ ಸಾಧನೆ ಕುರಿತು ಡಾ. ದತ್ತಪ್ರಸನ್ನ ಪಾಟೀಲ ಮಾತನಾಡಿದರು. ವಿವೇಕಾನಂದ ಪಾಟೀಲ, ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಯೋಗಾಚಾರ್ಯ ಕೆ.ಎಸ್.ಪಲ್ಲೇದ, ಶಾರದಾ ಕಾತರಕಿ, ಡಿ. ಎಸ್. ಬಾಪುರಿ, ಕೆ. ಎಚ್. ಬೇಲೂರ, ಕಲ್ಲೇಶ ಮೂರಶಿಳ್ಳಿನ, ರಾಜಶೇಖರ ದಾನರಡ್ಡಿ, ವೀರಪ್ಪ ಸವಡಿ, ಅಶೋಕ ಮತ್ತಿಗಟ್ಟಿ, ಬಸವರಾಜ ವಾರಿ, ಎಂ. ಬಿ. ಕಿತ್ತೂರ, ಬಸವರಾಜ ಹಳ್ಳಿ, ದ್ಯಾಮಣ್ಣ ನರೇಗಲ, ಪ್ರಕಾಶ ಮದ್ದಿನ, ರವಿ ಉಮಚಗಿ, ಸಂದೀಪ ನಡಗೇರಿ ಇತರರು ಇದ್ದರು.