ಗದಗ-ಬೆಟಗೇರಿ ಅವಳಿ ನಗರದ ಸೇರಿದಂತೆ ಜಿಲ್ಲಾಯಾದ್ಯಂತ ಸೋಮವಾರ ಎಳ್ಳು ಅಮಾವಾಸ್ಯೆಯನ್ನು ರೈತಪಿ ವರ್ಗದ ಜನ ಸಂಭ್ರಮದಿAದ ಆಚರಣೆ ಮಾಡಿದರು. ಅಮಾವಾಸ್ಯೆ ಅಂಗವಾಗಿ ಜಿಲ್ಲಾದ್ಯಂತ ರೈತರು ವಿಶೇಷ ಸಿಹಿ ತಿಂಡಿ, ತಿನಿಸುಗಳನ್ನು ಮಾಡಿಕೊಂಡು, ಬುತ್ತಿ ಕಟ್ಟಿಕೊಂಡು ತಮ್ಮ ತಮ್ಮ ಹೊಲಗಳಿಗೆ ಹೋಗಿ ಚರಗ ಚಲ್ಲಿ ಸಂಭ್ರಮಿಸಿದರು.
ಅವಳಿ ನಗರ ಹಾಗೂ ಗ್ರಾಮೀಣ ಭಾಗ ಸೇರಿದಂತೆ ಎಲ್ಲ ಕಡೆಗಳಲ್ಲೂ ಚರಗದ ಸಂಭ್ರಮ ಮನೆ ಮಾಡಿದೆ. ತಾವೇ ಸಿದ್ಧ ಪಡಿಸಿರುವ ಅಡುಗೆಯನ್ನು ಭೂ ತಾಯಿಗೆ ನೈವೇದ್ಯ ನೀಡುವ ಮೂಲಕ ಚರಗ ಚೆಲ್ಲಿ ಖುಷಿಪಟ್ಟರು.
ರೈತರು ತಮ್ಮ ತಮ್ಮ ಕುಟುಂಬ ಸಮೇತ ಟ್ರಾö್ಯಕ್ಟರ್, ಚಕ್ಕಡಿ ಕಟ್ಟಿಕೊಂಡು ಹೊಲಗಳಿಗೆ ತೆರಳುವ ದೃಶ್ಯ ಸಾಮಾನ್ಯವಾಗಿತ್ತು. ಜತೆಗೆ ಊರಿಗೆ ಸಮೀಪದಲ್ಲಿರುವ ರೈತರು ತಮ್ಮ ಹೊಲಕ್ಕೆ ಬುತ್ತಿ ಗಂಟು ಕಟ್ಟಿ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ಹಬ್ಬಕ್ಕೆ ಕಳೆ ಕಟ್ಟುವಂತಿತ್ತು.
ಬೆಳಗಿನ ಜಾವ ಅಡುಗೆ ತಯಾರಿ:
ಗ್ರಾಮೀಣ ಭಾಗದ ಮಹಿಳೆಯರು ಹಬ್ಬಕ್ಕೆ ಎರಡೂ ದಿನ ಮೂಚಿತವಾಗಿ ಹಬ್ಬಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡಿರುತ್ತಾರೆ. ಅಮಾವಾಸ್ಯೆ ಬೆಳಗಿನ ಜಾವವೇ ಎದ್ದು ಎಳ್ಳು ಹೊಳಿಗೆ ಸೇರಿದಂತೆ ವಿವಿಧ ಆಹಾರ ಸಿದ್ಧ ಮಾಡಿಕೊಂಡು, ಅದನ್ನೇಲ್ಲವನ್ನು ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೋಗಿ ಹೊಲದ ತುಂಬೆಲ್ಲ ಹಾಕಿ ಶ್ರದ್ಧಾ ಭಕ್ತಿಯಿಂದ ನೈವೇದ್ಯ ಮಾಡಲಾಗುತ್ತದೆ. ನಂತರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಸೇರಿ ಸಂಭ್ರಮದಿAದ ಊಟ ಮಾಡುವುದು ಎಳ್ಳು ಅಮಾವಾಸ್ಯೆಯ ವಿಶೇಷವಾಗಿದೆ.
ರೈತನ ಜೀವಾನಾಡಿಗೆ ವಿಶೇಷ ಅಲಂಕಾರ:
ರೈತರಿಗೆ ಎಳ್ಳು ಅಮಾವಾಸ್ಯೆ ಬಂದರೆ ಸಾಕು ಬೆಳ್ಳಂಬೆಳಗ್ಗೆ ರೈತರು ಎತ್ತುಗಳಿಗೆ ಅಲಂಕರಿಸಿ ಚಕ್ಕಡಿ ಹೂಡಿದುಕೊಂಡು ಸಾಲು ಸಾಲಾಗಿ ಹೊರಟ್ಟಿದ್ದ ಬಗೆ ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿತ್ತು. ಮನೆಯ ಸಂಬAಕರೆಲ್ಲಾ ಬಗೆ ಬಗೆಯ ಅಡುಗೆ ಮಾಡಿಕೊಂಡು ತಮ್ಮ ತಮ್ಮ ಹೊಲಗಳಿಗೆ ಹೋಗುತ್ತಾರೆ. ಬನ್ನಿ ಮರಕ್ಕೆ ಸೀರೆ ತೊಡಿಸಿ ಉಡಿತುಂಬಿ, ಕೈಗೆ ಕಂಕಣ ಕಟ್ಟಿ ಹಾಗೂ ಐದು ಕಲ್ಲುಗಳನಿಟ್ಟು ಪಂಚಪಾAಡವರೆAದು ಪೂಜೆ ಮಾಡುತ್ತಾರೆ. ದೂರದ ಊರಿನ ಸಂಬAಕರನ್ನು ಈ ಹಬ್ಬಕ್ಕೆ ಕರೆಯುತ್ತಾರೆ.
ವಿಶೇಷ ಭೋಜನೆ
ಹಬ್ಬದ ಅಂಗವಾಗಿ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಕರಿಗಡಬು, ಕರ್ಚಿಕಾಯಿ, ಬಜ್ಜಿ, ವಿವಿಧ ಬಗೆಯ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಲೆ ಹೀಗೆ ವಿವಿಧ ಬಗೆಯ ಅಡುಗೆ ತಂದು ಎಲ್ಲರು ಒಟ್ಟಿಗೆ ಪೂಜೆಮಾಡಿ ಒಟ್ಟಿಗೆ ಊಟಮಾಡಿ ಸಂಭ್ರಮಿಸುತ್ತಿದ್ದಾರೆ ರೈತ ಮಹಿಳೆಯರು.
ಜನಪದ ಹಾಡುಗಳ ಸಂಭ್ರಮ:
ಗ್ರಾಮದ ಮಹಿಳೆಯರು ಆರತಿ ಬೆಳಗುವ ಮೂಲಕ ಜನಪದ ಹಾಡುಗಳನ್ನು ಹಾಡಿ ಜನಮನ ರಂಜಿಸಿದರು. ಹೊಲದ ಅಂಚಿನಲ್ಲಿದ್ದ ಬೇವು ಹಾಗೂ ಮಾವಿನ ಕೆಳಗೆ ಕುಳಿತು ಕುಟುಂಬದ ಸದಸ್ಯರೊಂದಿಗೆ ಭೋಜನ ಮಾಡಿದರು. ನಂತರ ಮರದ ಕೆಳಗೆ ಚಾಪೆ ಹಾಸಿಕೊಂಡು ಹಿರಿಯರು ವಿಶ್ರಾಂತಿ ಪಡೆದರೆ, ಮಕ್ಕಳು ಮರಕ್ಕೆ ಕಟ್ಟಲಾಗಿದ್ದ ಹಗ್ಗದ ಮೇಲೆ ಜೋಕಾಲಿ ಆಡಿ ಸಂಭ್ರಮಿಸಿದರು. ಯುವಕರಲ್ಲಿ ಅಲ್ಲಲ್ಲಿ ಬೆಳೆದಿದ್ದ ಹಸಿ ಕಡಲೆ ಗಿಡಗಳನ್ನು ಕಿತ್ತುಕೊಂಡು ಬಂದು ಗುಂಪಿನಲ್ಲಿ ಕುಳಿತು ಕಡಲೆ ಸವಿದರು.