

ವಿಜಯವಾಣಿ ಸುದ್ದಿಜಾಲ ಗದಗ
ಎಲ್ಲ ಕ್ಷೇತ್ರದಂತೆ ಕೃಷಿ ಚಟುವಟಿಕೆಯಲ್ಲೂ ಮಹಿಳೆ ಪುರುಷರಿಗೆ ಸಮಾನವಾಗಿ ಜವಾಬ್ದಾರಿ ವಹಿಸುತ್ತಿದ್ದಾರೆ. ಕೃಷಿಯಲ್ಲಿ ಜ್ಞಾನ ಹೊಂದಿ ಕೃಷಿಯನ್ನು ಉದ್ಯಮವನ್ನಾಗಿ ಹಲವು ಮಹಿಳೆಯರು ರೂಪಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಅನೇಕ ಮಹಿಳೆಯರು ರಾಜ್ಯ ಮತ್ತು ರಾಷ್ಟ್ರೀಯ ಕೃಷಿ ಸಾಧಕಿ ಪ್ರಶಸ್ತಿ ಪಡೆದಿದ್ದಾರೆ. ಅನುಭವಿ ಕೃಷಿ ಸಾಧಕಿ ಮಹಿಳೆಯರಿಂದ ಎಲ್ಲ ರೈತ ಮಹಿಳೆಯರು ತರಬೇಟಿ ಪಡೆಯುವುದು ಇಂದಿನ ಕಾಲದಲ್ಲಿ ಅಗತ್ಯವಾಗಿದೆ ಎಂದು ಉಪ ಕೃಷಿ ನಿರ್ದೇಶಕಿ ಸ್ಪೂತಿರ್ ಜಿ.ಎಸ್. ಹೇಳಿದರು.
ತಾಲೂಕಿನ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ರೈತರ ಮತ್ತು ವಿಜ್ಞಾನಿಗಳ ಚರ್ಚಾಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕುಟುಂಬ ಮತ್ತು ಕೃಷಿಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ. ಗ್ರಾಮೀಣಭಾಗದ ರೈತ ಮಹಿಳೆಯರು ಈ ಚಟುವಟಿಕೆಯನ್ನು ನಿಭಾಯಿಸುತ್ತಿದ್ದಾರೆ. ಕೃಷಿಯಲ್ಲಿ ಅಧಿಕ ಲಾಭ ಮತ್ತು ವಿವಿಧ ಕೃಷಿ ಚಟುವಟಿಕೆಯಲ್ಲಿ ಯಶಸ್ವಿ ಆಗಬೇಕಾದರೆ ಕೃಷಿ ಮಹಿಳಾ ಸಾಧಕಿಯಿಂದ ತರಬೇತಿ ಪಡೆಯುವುದು ಅವಶ್ಯವಾಗಿದೆ. ನವೀನ ತಾಂತ್ರಿಕತೆಗಳನ್ನು, ಇಲಾಖೆಯಲ್ಲಿರುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಆಥಿರ್ಕ, ಸಾಮಾಜಿಕವಾಗಿ ರೈತ ಮಹಿಳೆಯರು ಅಭಿವೃದ್ಧಿಗೊಳ್ಳಬಹುದು. ಶಿಣ, ಆರೋಗ್ಯ ಮತ್ತು ಪೌಷ್ಠಿಕತೆಯ ಕುರಿತು ಮಹಿಳೆಯರು ಗಮನ ಹರಿಸಬೇಕು. ಇಂದಿನ ಜೈವನ ಶೈಲಿಗೆ ಅನೇಕ ರೋಗಗಳು ಕಾಡುತ್ತಿವೆ. ಆರೋಗ್ಉ ಹೊಂದಲು ಸಿರಿಧಾನ್ಯಗಳನ್ನು ಬಳಸಬೇಕು. ಸ್ವ ಸಹಾಯ ಸಂಗಳ ಮೂಲಕ ಮಹಿಳೆಯರು ಆದಾಯ ತರುವ ಚಟುವಟಿಕೆಗಳನ್ನು ಮಾಡುತ್ತ ಆಥಿರ್ಕವಾಗಿ ಸಬಲರಾಗಬೇಕು ಎಂದರು.
ಹಿರಿಯ ವಿಜ್ಞಾನಿ ಡಾ. ಸುಧಾ ಮಂಕಣಿ ಮಾತನಾಡಿ, ಮಣ್ಣಿನ ಸಂರಣೆ ಕಾಪಾಡಿಕೊಳ್ಳಲು ಸಾವಯವ, ಜೈವಿಕ ಗೊಬ್ಬರಗಳನ್ನು ಕೃಷಿಯಲ್ಲಿ ಬಳಕೆ ಮಾಡಬೇಕು. ಕೃಷಿ ಸಂಸ್ಕರಣೆಗಳಂತಹ ಗುಡಿ ಕೈಗಾರಿಕೆಗಳನ್ನು ಮಾಡಿ, ಮೌಲ್ಯವರ್ಧನೆಗೆ ಒತ್ತು ನೀಡಬೇಕು. ಸಿರಿಧಾನ್ಯಗಳನ್ನು ಬೆಳೆಸಿ ಮತ್ತು ಬಳಸಬೇಕು. ಕೃಷಿಯಿಂದ ಹಳ್ಳಿಗಳ ಅಭಿವೃದ್ಧಿ, ಹಳ್ಳಿಗಳ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿ ಆಗುತ್ತದೆ ಎಂದರು.
ಪ್ರಗತಿಪರ ರೈತ ಮಹಿಲೆ ಶಿಲ್ಪಾ ಕುರಿ ಮಾತನಾಡಿ, ಸಾವಯವ ಕೃಷಿಗೆ ಒತ್ತು ಕೊಟ್ಟು, ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಹಿಳೆಯರು ಮಾಹಿತಿ ಪಡೆದುಕೊಂಡರೆ ಕೃಷಿಯಲ್ಲಿ ಯಶಸ್ಸು ಸಾಧಿಸಬಹುದು. ಗ್ರಾಮೀಣ ಭಾಗದಲ್ಲಿ ಕೃಷಿ ಅಭಿವೃದ್ಧಿ ಮತ್ತು ಆಹಾರ ಭದ್ರತೆಯಲ್ಲಿ ಮಹಿಳೆಯ ಪಾತ್ರ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಹಾಗೂ ಸಮಗ್ರ ಬೇಸಾಯ ಪದ್ಧತಿಯನ್ನು ಅಳವಡಿಸಿ ಯಶಸ್ವಿಯಾದ ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು. ಅನಿತಾ ಕುರ್ತಕೋಟಿ, ಹೇಮಾವತಿ ಹಿರೇಗೌಡರ, ಡಾ. ವಿನಾಯಕ ನಿರಂಜನ್ ಇತರರು ಇದ್ದರು.