ಇದೇ ಸಂದರ್ಭದಲ್ಲಿ ರಡ್ಡಿ ಸಮಾಜದ ಹಿರಿಯರಾದ ಲೀಲಾ.ಮುದರಡ್ಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿನ ಕಾರ್ಯದರ್ಶಿಗಳಾದ ಭಾಗ್ಯಶ್ರೀ ಶಿರೋಳವರು ಉಪಸ್ಥಿತರಿದ್ದರು. ರಾಜೇಶ್ವರಿ ಶಿರೋಳ್ ಅವರು ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕರಾದ ಶ್ರೀಮತಿ ಸುಧಾ ಹುಚ್ಚಣ್ಣವರ ಕಾರ್ಯಕ್ರಮವನ್ನು ನಿರೂಪಿಸಿದರು. ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ ಅದರಲ್ಲಿ ವಿಜೇತರಾದ ಸ್ಪರ್ಧಾರ್ಥಿಗಳಿಗೆ ಶ್ರೀಮತಿ ಮಧು ಪಾಟೀಲ್ ಹಾಗೂ ಶೈಲಜಾ ಕವಲೂರ ಅವರು ಬಹುಮಾನ ವಿತರಿಸಿದರು. ಶ್ರೀಮತಿ ಕವಿತಾ ಕೊಣ್ಣೂರ ಹಾಗೂ ಶೀಲಾ ಮುದರಡ್ಡಿ ಪ್ರಾರ್ಥನಾ ಗೀತೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅಕ್ಕಮ್ಮ ರಡ್ಡೆರ, ಪವಿತ್ರಾ ರಡ್ಡಿ, ಶೋಭಾ ಪಾಟೀಲ್, ಓದುಗೌಡರ, ಹಾಗೂ ಸಮಸ್ತ ರಡ್ಡಿ ಬಳಗದ ಮಹಿಳೆಯರು ಉಪಸ್ಥಿತರಿದ್ದರು.