ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮ

12GDG10
Published on

ಮಹಿಳೆಯರು ಉದ್ಯಮಶೀಲತೆಯಿಂದ ಆಥಿರ್ಕ ಸಬಲತೆ ಸಾಧಿಸುತ್ತಾಳೆ: ಮಂಗಳಾ ನೀಲಗುಂದ

ವಿಜಯವಾಣಿ ಸುದ್ದಿಜಾಲ ಗದಗ

ಮಹಿಳೆಯರು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳದೆ ಲಾಭ ತರುವ ಉದ್ಯಮಗಳನ್ನು ಪ್ರಾರಂಭಿಸಿ, ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಆಥಿರ್ಕವಾಗಿ ಸ್ವಾವಲಂಭಿಗಳಾಗಿ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ಕೃಷಿ ಸಾಧಕಿ ಮಂಗಳ ನೀಲಗುಂದ ಹೇಳಿದರು.

ನಗರದ ಜೆ.ಟಿ. ಮಹಾವಿದ್ಯಾಲಯದಲ್ಲಿ ಮಹಿಳಾ ವಸತಿ ನಿಲಯದ ವತಿಯಿಂದ ಆಯೋಜಿಸಿದ್ದ ಮಹಿಳೆಯರಲ್ಲಿ ಉದ್ಯಮಶೀಲತೆಯ ಬೆಳವಣಿಗೆ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಉದ್ಯಮಶೀಲತೆಯಿಂದ ಮಹಿಳೆಯರು ಸಾಮಾಜಿಕವಾಗಿ, ಆಥಿರ್ಕವಾಗಿ ಸಬಲತೆಯನ್ನು ಹೊಂದುತ್ತಾಳೆ. ಕುಟುಂಬವನ್ನು ಆಥಿರ್ಕ ಸಂಕಟದಿಂದ ಪಾರು ಮಾಡುತ್ತಾಳೆ. ಮಹಿಳೆಯರು ತಮ್ಮ ಆಥಿರ್ಕ ಸಾಮಾರ್ಥ್ಯವನ್ನು ಅರಿತು ಉದ್ಯಮವನ್ನು ಪ್ರಾರಂಭಿಸಬೇಕು. ಪ್ರಾರಂಭದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯಮಗಳನ್ನು ಆರಂಭಿಸಿ ಆಥಿರ್ಕ ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳಬಾರದು ಎಮದರು.

ಕೃಷಿಯ ಜೊತೆಗೆ ಹೈನೋದ್ಯಮ, ಕುರಿ ಸಾಕಣಿಕೆ, ಕೋಳಿ ಸಾಕಾಣಿಕೆ ಪ್ರಾರಂಭಿಸಬೇಕು. ಕೃಷಿಯಿಂದ ಹೆಚ್ಚು ಆದಾಯಗಳಿಸಬಹುದು. ಹಾಲಿನಿಂದ ತುಪ್ಪ, ಪನ್ನೀರು ತಯಾರಿಸಿದರೆ ಇದಕ್ಕೆ ಉತ್ತಮ ಮಾರುಕಟ್ಟೆ ಇದೆ. ಒಣ ಮೆಣಸಿನಕಾಯಿಯನ್ನು ಪುಡಿ ಮಾಡಿ ಪ್ಯಾಕೆಟ್​ನಲ್ಲಿ ಮಾರಟ ಮಾಡಬಹುದು. ಇವುಗಳು ಲಾಭ ಕೊಡುವ ಉದ್ಯಮಗಳಾಗಿವೆ. ತಮ್ಮ ಮನೆಯ ಸುತ್ತಮುತ್ತ ಹಣ್ಣು, ಹೂ, ಕಾಯಿಪಲ್ಯಗಳನ್ನು ಬೆಳೆದರೆ ಮನೆಯ ಬಳಕೆಗೆ ಮತ್ತು ಮಾರಟಕ್ಕೂ ನೆರವಾಗುತ್ತದೆ ಎಂದರು.

ಮಹಿಳೆಯರು ಮಾಡಬಹುದಾದ ಸಣ್ಣ ಪ್ರಮಾಣದ ಉದ್ಯಮಗಳಾದ ರೊಟ್ಟಿ, ಹಪ್ಪಳ, ಶ್ಯಾವಿಗೆ ಹೋಳಿಗೆ, ಉಪ್ಪಿನಕಾಯಿ, ಹಣ್ಣಿನಂಗಡಿ, ಹೋಲಿಗೆ ಮೂಲಕ ಆಥಿರ್ಕವಾಗಿ ಸದೃಢತೆಯನ್ನು ಹೊಂದಬಹು ಎಂದು ತಿಳಿಸಿದರು.

ಅಧ್ಯತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಪ್ರೊ. ಪಿ. ಜಿ.ಪಾಟೀಲ, ವಿದ್ಯಾಥಿರ್ನಿಯರು ಇಂಥ ಉಪಯುಕ್ತ ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

ಡಾ. ಕಿಲ್ಲೇದಾರ, ಡಾ. ವೀಣಾ, ಡಾ. ಜಿ. ಕೆ. ರಮೇಶ, ರಾಜಕುಮರ ಬಡಿಗೇರ, ಡಾ. ಮಂಜುಳಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net