

ಗದಗ: ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ತಾಯಿಯಿಂದ ಪ್ರತಿ ಮಗು ಜೀವ ಪಡೆದುಕೊಳ್ಳುವ ಹಕ್ಕು ಮತು ಜೀವಿಸುವ ಹಕ್ಕು ಹೊಂದಿದೆ. ಬದುಕುವ ಹಕ್ಕು ಶಾಲಾ ಶಿಕ್ಷಣ ಅವಧಿಯಲ್ಲಿ ವಿಕಾಸ ಹೊಂದುವ ಹಕ್ಕು ಭಾಗವಹಿಸುವ ಹಕ್ಕು ಮಾನಸಿಕ, ಆರ್ಥಿಕ, ರಾಜಕೀಯ ಎಲ್ಲಾ ರಂಗಗಳಲ್ಲಿ ನಾವು ವಿಕಾಸ ಹೊಂದುತ್ತ ಹೋಗುವುದು ಸದೃಡತೆ ಹೊಂದುವುದು. ಭಾಗವಹಿಸುವ ಹಕ್ಕು ಪ್ರತಿ ಮಗುವಿನ ಹಕ್ಕುಗಳಾಗಿವೆ. ೧೯೮೯ ನವಂಬರ ೧೧ ರಂದು ವಿಶ್ವಸಂಸ್ಥೆಯು ಈ ಹಕ್ಕುಗಳನ್ನು ಜಾರಿಗೆ ತಂದಿತು ಎಂದು ಜಿಲ್ಲಾ ಮಕ್ಕಳ ಕಾನೂನು ಪರಿವೀಕ್ಷಣಾಧಿಕಾರಿ ಪರಶುರಾಮ ನೀಲಗುಂದ ನುಡಿದರು.
ಸರಕಾರಿ ಪ್ರೌಢಶಾಲೆ ರಾಜೀವಗಾಂಧಿ ನಗರ ಗದಗನಲ್ಲಿ ದಿ: ೨೦ ರಂದು ಮಕ್ಕಳ ಸಹಾಯವಾಣಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಂದುವರೆದು ಮಾತನಾಡುತ್ತ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ೧೦೯೮ ಮಕ್ಕಳ ಸಹಾಯವಾಣಿ ಇದನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ತಮಗೆ ಆಪತ್ತು ಎದುರಾದಾಗ ತಾವು ಬೇರೆಯವರಿಂದ ಶೋಷಣೆಗೊಳಗಾಗುತ್ತಿದ್ದೇವೆಂಬ ಚಿಂತೆ ಮೂಡಿದಾಗ ಸಹಾಯವಾಣಿಯನ್ನು ಬಳಸಿಕೊಂಡು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಬಹುದಾಗಿದೆ. ಅಲ್ಲದೇ ಮಕ್ಕಳ ವಿಶೇಷ ಪೋಲಿಸ್ ಘಟಕ ಪ್ರತಿ ಠಾಣೆಯಲ್ಲಿದೆ. ಇದಕ್ಕಾಗಿ ಮಕ್ಕಳಸ್ನೇಹಿ ಪೋಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದೆ. ೧೧೨ ಪೋಲಿಸ್ ಸಹಾಯವಾಣಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಇದೆಯೆಂದರು.
ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಶ್ರೀಮತಿ ರಫೀಕಾ ಹಳ್ಳೂರ ಮಾತನಾಡಿ ಜಿಲ್ಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮಕ್ಕಳ ರಕ್ಷಣೆ ಮತ್ತು ಪಾಲನೆ ಕಾರ್ಯವನ್ನು ಮಾಡುತ್ತದೆ. ವಿದ್ಯಾರ್ಥಿಗಳಿಗೆ ತಂದೆ ತೀರಿ ಹೋಗಿ ಇಲ್ಲವೇ ತಾಯಿ ತೀರಿಹೋಗಿ ಏಕಪೋಷಕರಿದ್ದಲ್ಲಿ ಅವರಿಗಾಗಿ ಶಿಕ್ಷಣ ನೀಡಲು ಅನೇಕ ಯೋಜನೆಗಳಿವೆ. ಅವುಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಮಕ್ಕಳ ರಕ್ಷಣಾ ಘಟಕವು ಕಾರ್ಯ ಪ್ರವೃತ್ತವಾಗಿದೆಯೆಂದರು. ಅದರಂತೆ ಬಾಲ ನ್ಯಾಯ ಮಂಡಳಿ ತಿಳಿಯದೇ ಮಾಡಿದ ತಪ್ಪುಗಳಿಗೆ ಕಾನೂನಿನ ಜೊತೆಗೆ ಸಂಘರ್ಷಕ್ಕಿಳಿದ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಿ ಅವರ ಭವಿಷ್ಯ ರೂಪಿಸುವಲ್ಲಿ ತೊಡಗಿದೆ.
ವಿದ್ಯಾರ್ಥಿನಿಯರು ಉಚಿತ ಹಾಗೂ ಕಡ್ಡಾಯದ ಶಿಕ್ಷಣವನ್ನು ಪಡೆಯಬೇಕೆಂಬುದು ಕಾನೂನಿದೆ. ಶಿಕ್ಷಣ ಮೊಟಕುಗೊಳಿಸುವುದು, ದೈಹಿಕ ಹಿಂಸೆ ನೀಡುವುದು ಮಾನಸಿಕ ಕಿರುಕಳ ನೀಡುವುದು, ಬಾಲ್ಯ ವಿವಾಹವಾಗುವಂತೆ ಪಾಲಕರು ಇಲ್ಲವೇ ಪೋಷಕರು ಮಕ್ಕಳನ್ನು ಒತ್ತಾಯಿಸುವುದು ಪ್ರೇರೇಪಿಸುವುದು ಅಪರಾಧವಾಗಿದೆ ಇದಕ್ಕೆ ಮಕ್ಕಳು ಒಪ್ಪಿಕೊಳ್ಳದೇ ಶಾಲೆಯಲ್ಲಿ ಶಿಕ್ಷಕರಿಗೆ ತಮ್ಮ ಅಸಹಾಯಕತೆಯನ್ನು ಹೇಳಬೇಕು ಪರಿಹಾರ ಪಡೆಯಬೇಕು ಇಲ್ಲವೇ ಸಹಾಯವಾಣಿಗೆ ಕರೆ ಮಾಡಿ ತಮಗಾಗುತ್ತಿರುವ ಅನ್ಯಾಯವನ್ನು ತಿಳಿಸಬಹುದಾಗಿದೆಯೆಂದು ಶ್ರೀಮತಿ ಹಳ್ಳೂರ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮುಖ್ಯಾದ್ಯಾಪಕ ಎಸ್.ಬಿ.ಬಾಗೇವಾಡಿ ಮಾತನಾಡಿ ಮಕ್ಕಳ ಜಾಗೃತಿ ಕಾರ್ಯಕ್ರಮವನ್ನು ಈ ಶಾಲೆಯಲ್ಲಿರುವ ಆಯೋಜನೆ ಮಾಡಿದ್ದಕ್ಕಾಗಿ ಕೃತಜ್ಞತೆ ತಿಳಿಸುತ್ತ ಇತ್ತೀಚಿನ ದಿನಗಳಲ್ಲಿ ಅನೇಕ ಘಟನೆಗಳು ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ತಮ್ಮನ್ನು ತಾವು ರಕ್ಷಸಿಕೊಳ್ಳದಷ್ಟು ಅಸಹಾಯಕರಾಗಿದ್ದೇವೆ. ವಿದ್ಯಾರ್ಥಿಗಳು ಪ್ರಚೋದನೆಗೊಳಗಾಗದೇ ಪ್ರತಿಕ್ರೀಯಿಸದೇ ಇರುವುದು ಅಪರಾಧವನ್ನು ಬೆಳೆಯದಂತೆ ನೋಡಿಕೊಳ್ಳುವ ರೀತಿಯಾಗಿದೆ. ನಮಗಿರುವ ಕಾನೂನುಗಳ ಬಗೆಗೆ ತಿಳಿದುಕೊಂಡು ಅದನ್ನು ಬಳಸಲು ಕಲಿಯಬೇಕೆಂದರು. ಅದರ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲಾ ರಕ್ಷಣಾ ಘಟಕವು ಶಾಲೆಯಲ್ಲಿ ಆಗಾಗ ಮುಂದುವರೆಸುವAತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿ ಸಮಾಲೋಚಕಿ ಶ್ರೀಮತಿ ಕಲಾವತಿ ಹಡಪದ ಹಾಗೂ ವಿಷಯ ನಿರ್ವಾಹಕಿ ಶ್ರೀಮತಿ ಗಿರಿಜಾ ಹಿರೇಮಠ ಶಿವಾನಂದ ಗಿಡ್ನಂದಿ ವಾಯ್.ಎಸ್. ಬಮ್ಮನಾಳ ಸಹಶಿಕ್ಷಕಿಯರಾದ ಶ್ರೀಮತಿ ಎಸ್ ಎಸ್ ಬಗರೆ ಪಿ ಎಸ್ ಕರೇಕುಲದ ಎಂ ಎಸ್ ಕುಚಬಾಳ ಪಾಲ್ಗೊಂಡಿದ್ದರು.
ಪ್ರಾರAಭದಲ್ಲಿ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯಾಯಿತು. ಶ್ರೀಮತಿ ಪಿ ಎಸ್ ಕರೇಕುಲದ ಶಿಕ್ಷಕಿ ಸ್ವಾಗತಿಸಿದರು. ವಾಯ್.ಎಸ್. ಬಮ್ಮನಾಳ ವಂದಿಸಿದರು.