

ಗದಗ: ನಗರದ ವಾರ್ಡ ನಂ. 33ರಲ್ಲಿ ಕೆಎಚ್ಬಿ ಕಾಲನಿಗೆ ಶಾಶ್ವತ ತುಂಗಭದ್ರಾ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಸೂರ್ಯ ನಗರ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಳೆದ 11 ವರ್ಷಗಳಿಂದ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಕೆಎಚ್ಬಿ ಬಡಾವಣೆಯನ್ನು 2014ರಲ್ಲಿ ನಗರಸಭೆಗೆ ಹಸ್ತಾಂತರ ಮಾಡಲಾಗಿದೆ. ಆದರೆ ಇಷ್ಟು ಕಳೆದರೂ ಇದುವರೆಗೂ ನಗರಸಭೆಯವರು ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಲ್ಲ. ಈ ಬಡವಾವಣೆಯಲ್ಲಿ ಒಟ್ಟು 830 ನಿವೇಶನಗಳಿದ್ದು, ಈಗಾಗಲೇ 200 ಮನೆಗಳು ನಿರ್ಮಾಣಗೊಂಡು ಜನರು ವಾಸವಾಗಿದ್ದಾರೆ. ಎಲ್ಲ ನಿವಾಸಿಗಳು ನಿಯಮಿತವಾಗಿ ನಗರಸಭೆಗೆ ಭೂಬಾಡಿಗೆ ಪಾವತಿಸುತ್ತಿದ್ದಾರೆ. ಆದರೆ ನಗರಸಭೆಯ ಅಧಿಕಾರಿಗಳು ಮಾತ್ರ ತಮ್ಮ ದಿವ್ಯ ನಿರ್ಲಕ್ಷ$್ಯವನ್ನು ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.
ಕುಡಿಯುವ ನೀರು ಪೂರೈಕೆ ವ್ಯವಸ್ಥೆಗಾಗಿ ಕರ್ನಾಟಕ ಗೃಹ ಮಂಡಳಿಯವರು ಈ ಹಿಂದೆಯೇ ಗದಗ ನಗರಸಭೆಗೆ ಭರಿಸಿದ ಒಟ್ಟು ಹಣದ ವಿವರವನ್ನೂ ಮನವಿಯಲ್ಲಿ ನಮೂದಿಸಿದ್ದೇವೆ ಬಡಾವಣೆ ನಿವಾಸಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಬಾಗಲಕೋಟ, ಮಹಾಂತೇಶ ಹೂಗಾರ, ಉಪಾಧ್ಯಕ್ಷ ಹನಮಂತಪ್ಪ ಸಿಂಗಾಡಿ, ಚನ್ನಬಸಪ್ಪ ನಾಗಾವಿ, ಸಿದ್ದಪ್ಪ ಪಲ್ಲೇದ, ಅಮೃತಾ ಹಬೀಬ ಹಾಗೂ ಇತರ ಸದಸ್ಯರು ಇದ್ದರು.