

ಗದಗ: ನಗರದ ಬಳ್ಳಾರಿ ಅಂಡರ್ ಬ್ರಿಡ್ಜನಲ್ಲಿ ಹಲವು ವರ್ಷಗಳಿಂದ ಚರಂಡಿ ನಿರು ರಸ್ತೆ ಮೇಲೆ ಬಂದು ಜನರಿಗೆ ಅನಾನೂಕುಲ ಆಗುತ್ತಿದೆ. ಅದರಲ್ಲೂ ಮಳೆ ಬಂದ ಸಂದರ್ಭದಲ್ಲಿ ಅಂಡರ್ ಪಾಸ್ ಸಂಚಾರ ಸಂರ್ಪೂಣ ಸ್ಥಗಿತಗೊಳ್ಳುತ್ತದೆ. ಈ ಸಮಸ್ಯೆ ಪರಿಹರಿಸುವಂತೆ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಆದರೂ ನಗರಸಭೆ ಪರಿಹಾರ ಕಂಡುಕೊಂಡಿಲ್ಲ ಎಂದು ಗನೇಶ ಸಿಂಗ್ ಬ್ಯಾಳಿ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನಿಡಿರುವ ಅವರು, ಬಳ್ಳಾರಿ ಅಂಡರ್ ಬ್ರಿಡ್ಜನಲ್ಲಿ ನಗರಸಭೆಯಿಂದ ಅಳವಡಿಸಿದ್ದ ನಾಲ್ಕು ಅಡಿ ಸುತ್ತಳತೆಯ ಪೈಪುಗಳಲ್ಲಿ ಕಸ ಕಡ್ಡಿ ತುಂಬಿಕೊಂಡಿದೆ. ಕಸ ಕಡ್ಡಿ ತೆರವು ಗೊಳಿಸಿ ಮತ್ತು ನಿರಂತರ ನಿರ್ವಹಣೆ ನಡೆಸಿ ಇಲ್ಲಿನ ಜನರ ಸುಗಮ ಸಂಚಾರಕ್ಕೆ ನಗರಸಭೆ ಕ್ರಮ ಕೈಗೊಳ್ಳಬೇಕು. ಅದರೆ ನಗರಸಭೆ ನಿಷ್ಕಾಳಜಿಯಿಂದ ನಿಷ್ಕಾಳಜಿಯಿಂದ ನೀರು ಪೈಪ್ ಲೈನ್ ಮೂಲಕ ನಾಲಾಕ್ಕೆ ಹರಿದು ಹೋಗುತ್ತಿಲ್ಲ. ಮಳೆ ಬಂದಾಗ ಬ್ರಿಡ್ಜ್ ಕೆಳಭಾಗದಲ್ಲಿ ನೀರು ಸಂರ್ಪೂಣ ಶೇಖರಣೆ ಆಗುತ್ತದೆ. ಅಲ್ಲದೇ, ಈ ಭಾಗದಲ್ಲಿ ವಿಪರೀತ ಸಂಚಾರ ಇರುವದರಿಂದ ಟ್ರಾಫಿಕ್ ಜಾಮ ಆಗುತ್ತಿದೆ. ಜಿಲ್ಲಾಧಿಕಾರಿಗಳು, ನಗರಸಭಾ ಆಯುಕ್ತರು, ಅಧ್ಯಕ್ಷರು, ಅಭಿಯಂತರರು ಈ ವಿಷಯವನ್ನು ಗಂಭೀರವಾಗಿ ಪರಿಣಮಿಸಿ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಗಣೇಶ್ ಸಿಂಗ್ ಬ್ಯಾಳಿ ಆಗ್ರಹಿಸಿದ್ದಾರೆ.