ದೇಶದ ರಕ್ಷಣೆಗೆ ಮೋದಿಯೇ ಗ್ಯಾರಂಟಿ - ರಾಘವೇಂದ್ರ ಯಳವತ್ತಿ.

IMG-20240423-WA0038
Published on

ಗದಗ: ವಾರ್ಡ ನಂ 7 ರ ವ್ಯಾಪ್ತಿಯಲ್ಲಿ ಬೆಲೇರಿ ಓಣಿ ಹೆಳವಿ ಓಣಿ ಹಾಗೂ ಕುಲಕರ್ಣಿ ಗಲ್ಲಿ ಭಾಗಗಳಲ್ಲಿ ನಿಕಟ ಪೂರ್ವ ಮುಖ್ಯಮಂತ್ರಿಗಳು ಹಾವೇರಿ - ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಬಸವರಾಜ ಬೊಮ್ಮಾಯಿಯವರ ಪರವಾಗಿ ಮನೆ ಮನೆ ಸಂಪರ್ಕ ಮಾಡಿ ಮತ ನೀಡಲು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಯಳವತ್ತಿ ನೇತೃತ್ವದಲ್ಲಿ ಮಾಡಲಾಯಿತು.

ದೇಶದ ರಕ್ಷಣೆ ಗಡಿ ಸುರಕ್ಷಿತವಾಗಿ ಇರಬೇಕಾದರೆ ಪ್ರಧಾನಿ ಮೋದಿ ಜೀ ಯವರೇ ಕಾರಣ ಹತ್ತು ವರ್ಷದಲ್ಲಿ ಮೋದಿಯವರು ದೇಶದಲ್ಲಿ ಉಗ್ರರನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಜೊತೆಗೆ ಭಾರತೀಯರು ನೆಮ್ಮದಿ ಜೀವನ ಸಾಗಿಸಲು ಕಾರಣರಾಗಿದ್ದಾರೆ. ಅದಕ್ಕಾಗಿ ಮತ್ತೊಮ್ಮೆ ದೇಶದ ಪ್ರಧಾನಿ ಮೋದಿ ಯಾಗಲು ತಾವುಗಳು ಭಾರತೀಯ ಜನತಾ ಪಾರ್ಟಿಯ ಕಮಲದ ಚಿನ್ನೆಗೆ ಮತ ನೀಡಲು ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮೋಹನ್ ಶ್ಯಾಗಾವಿ ಬೂತ್ ಅಧ್ಯಕ್ಷರಾದ ಕೃಷ್ಣಾ ಲಕ್ಕುಂಡಿ ಮೈಲಾರಿ ತುರಕಾಣಿ ಅಣ್ಣಪ್ಪ ಸೂಳಿಕೇರಿ ಸುರೇಶ್ ಕೋಳಿ ವಿರೇಶ ಬೆಲೇರಿ ಸಿದ್ದು ಪಿಂಡಕೂರ ಈರಣ್ಣಾ ಬ್ಯಾಹಟ್ಟಿ ಮುಂತಾದವರು ಪ್ರಚಾರದಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net