32ನೇ ವಾಡಿರ್ನ ಶೌಚಾಲಯ ತೆರವುಗೊಳಿಸಿ ಸಮುದಾಯ ಭವನ ನಿಮಿರ್ಸಲು ಮನವಿ

29GDG06
ಗದಗ ನಗರದ ವಾರ್ಡ್​ 32ರ ಸಿಕ್ಕಿಲಿಗಾರ ಗಲ್ಲಿಯಲ್ಲಿ ಸಮುದಾಯ ಭವನ ನಿಮಿರ್ಸುವಂತೆ ನಗರಸಭೆಗೆ ಮನವಿ ಸಲ್ಲಿಸಲಾಯಿತು. ಪ್ರವಿಣ ಹಬೀಬ, ರಾಮಣ್ಣ ನವಲಗುಮದ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಚನ್ನಮ್ಮ ಸರ್ಕಲ್​ ಹತ್ತಿರದ 32ನೇ ವಾಡಿರ್ನಲ್ಲಿ ಇರುವಂತಹ ಸುಲಭ ಶೌಚಾಲಯ ತೆರವುಗೊಳಿಸಿ ಸಮುದಾಯ ಭವನ ನಿಮಿರ್ಸಬೇಕು ಎಂದು ಸ್ಥಳಿಯರು ಹಾಗೂ ಕ್ರಾಂತಿ ಸೇನಾ ಸಂಟನೆ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಸಂದ ಅಧ್ಯಕ್ಷ ಪ್ರವಿಣ ಹಬೀಬ ಮಾತನಾಡಿ, 32ನೇ ವಾಡಿರ್ನಲ್ಲಿ ಇರುವಂತ ಈ ಶೌಚಾಲಯದ ಸ್ಥಿತಿ ಸರಿಇಲ್ಲ. ದುರಸ್ತಿ ಮಾಡದಷ್ಟು ಕೆಟ್ಟುಹೋಗಿದೆ. ಸ್ವಚ್ಛತೆ ಇಲ್ಲದೆ ಹಾಳು ಬಿದ್ದು ವಾಸನೆ ಹರಡಿ ಜನರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಸೊಳ್ಳೆ ಕ್ರಿಮಿ ಕೀಟಗಳು ಹರಡುತ್ತಿದ್ದು ಜನರಿಗೆ ಚಿಕ್ಕ ಮಕ್ಕಳಿಗೆ ವೃದ್ಧರಿಗೆ ರೋಗಗಳು ಹರಡುತ್ತಿವೆ. ಈ ಸುಲಭ ಶೌಚಾಲಯ ತೆರವುಗೊಳಿಸಿ ಸಮುದಾಯ ಭವನ ನಿಮಿರ್ಸಬೇಕು ಎಂದು ಮನವಿ ಸಲ್ಲಿಸಿದ್ದರು.
ಸ್ಥಳಿಯ ರಾಮಣ್ಣ ನವಲಗುಂದ ಮಾತನಾಡಿ, 32ನೇ ವಾಡಿರ್ನ ಜನರಿಗೆ ಯಾವುದೇ ರೀತಿಯ ಸಮುದಾಯ ಭವನ ಇಲ್ಲದೆ ಮನೆಯಲ್ಲೇ ಶುಭಕಾರ್ಯಗಳನ್ನು ಮಾಡಲಾಗುತ್ತಿದೆ. ಮುಂದೆ ಜಾಗವು ಇಕ್ಕಟ್ಟಾಗಿವೆ. ಆದ ಕಾರಣ ಸಮುದಾಯ ಭವನ ನಿರ್ಮಾಣವಾದರೆ ತುಂಬಾ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ನಗರಸಭೆ ಇಂಜಿನಿಯರ್​ ಎಚ್​.ಬಂಡಿವಡ್ಡರ ಮನವಿ ಸ್ವೀಕರಿಸಿದರು. ವಾಡಿರ್ನ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net