ಗದಗ 26ನೇ ವಾರ್ಡನಲ್ಲಿ ವಿವಿದ ಕಾಮಗಾರಿಗೆ ಭೂಮಿಪೂಜೆ

21GDG02
Published on

ಬಿಜೆಪಿಯಿಂದ ಅಭಿವೃದ್ಧಿಪರ ಕಾರ್ಯ: ಸಂಕನೂರ

ವಿಜಯವಾಣಿ ಸುದ್ದಿಜಾಲ ಗದಗ
ರಾಜ್ಯದಲ್ಲಿ ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಆಡಳಿತವಿದ್ದಾಗ ಗದಗ ಬೆಟಗೇರಿ ನಗರಸಭೆಗೆ ಸಾಕಷ್ಟು ಅನುದಾನ ಮಂಜೂರು ಮಾಡಲಾಗಿದೆ. ಹಲವು ಅಭಿವೃದ್ಧಿಪರ ಕಾರ್ಯಗಳಾಗಿವೆ ಎಂದು ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರ ಹೇಳಿದರು.
ನಗರದ 26ನೇ ವಾರ್ಡನಲ್ಲಿ ಬುಧವಾರ ಅರಸಿದ್ಧಿ ಅಂಗಡಿಯಿಂದ ಜನತಾ ಬಜಾರವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಸೇರಿದಂತೆ ವಾರ್ಡನ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಸಂದರ್ಭದಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲರು ವಿಶೇಷ ಕಾಳಜಿ ವಹಿಸಿ ಗದಗ ಬೆಟಗೇರಿ ಅವಳಿ ನಗರಕ್ಕೆ ನಗರೋತ್ಥಾನ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಿಸಿದ್ದರು. ಕಾರಣಾಂತರದಿಂದ ಯೋಜನೆಗಳು ಅನುಷ್ಠಾನಗೊಂಡಿರಲಿಲ್ಲ. ಇದೀಗ ಈ ವಾರ್ಡನ ನಗರಸಭೆ ಸದಸ್ಯೆ ಹುಲಿಗೆಮ್ಮ ಹಬೀಬ ಅವರು ಆಸಕ್ತಿ ವಹಿಸಿ ಈ ಪ್ರದೇಶದ ರಸ್ತೆ, ಚರಂಡಿ ಕೆಲಸ ಆಗುವಂತೆ ಮಾಡಿದ್ದಾರೆ ಎಂದರು.
ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಯನ್ನು ಕಾಲಮಿತಿಯೊಳಗೆ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಬೇಕು. ಯಾವುದೇ ವಿಷಯದಲ್ಲಿ ರಾಜೀ ಬೇಡ. ಈ ಭಾಗದಲ್ಲಿ ಕಾಮಗಾರಿ ನಡೆದಾಗ ಸಾರ್ವಜನಿಕರು, ಗ್ರೇನ್​ ಮಾರ್ಕೆಟ್​ ವ್ಯಾಪಾರಸ್ಥರು ಗುತ್ತಿಗೆದಾರರಿಗೆ ಸಹಕಾರ ನೀಡಿ ಕಾಮಗಾರಿ ತೀವ್ರವಾಗಿ ಮುಗಿಯುವಂತೆ ಸಹಕಾರ ನೀಡಬೇಕು.ಅಭಿವೃದ್ಧಿ ಕಾರ್ಯಕ್ಕೆ ಅಗತ್ಯಬಿದ್ದರೆ ಶಾಸಕರ ನಿಧಿಯಿಂದ ಆಥಿರ್ಕ ನೆರವು ನೀಡುವ ಭರವಸೆ ನೀಡಿದರು.
ವಾರ್ಡ ಸದಸ್ಯೆ ಹುಲಿಗೆಮ್ಮ ಹಬೀಬ ಮಾತನಾಡಿ, ವಾಡಿರ್ನಲ್ಲಿ ವಿವಿದೆಡೆ ರಸ್ತೆ, ಚರಂಡಿ ನಿರ್ಮಾಣಕ್ಕಾಗಿ ನಗರೋತ್ಥಾನ 4ನೇ ಹಂತದಿಂದ 48 ಲ ರೂ. ಸಾಮಾನ್ಯ ನಿಧಿಯಿಂದ 28 ಲ ರೂ. 15ನೇ ಹಣಕಾಸು ಅನುದಾನದಿಂದ 7 ಲ ರೂ. ಹಾಗೂ ಎಸ್​ಎ್​ಸಿ ಅನುದಾನದಿಂದ 9 ಲ ರೂ.ಗಳ ಕಾಮಗಾರಿಗಳನ್ನು ಹಂತಹಂತವಾಗಿ ಮಾಡಲಾಗುತ್ತಿದೆ. ಅಭಿವೃದ್ಧಿ ಕಾರ್ಯಕ್ಕೆ ವಾರ್ಡ ಜನರು ಸಹಕಾರ ನೀಡಬೇಕು ಎಂದರು.
ರಾವೇಂದ್ರ ಹಬೀಬ, ಭೀಮಸಿಂಗ್​ ರಾಠೋಡ, ಬಸವರಾಜ ಕುರಗೋಡ, ವಿಜಯ ಸೋಳಂಕಿ, ಸಿದ್ದು ಪವಾರ, ಕೀತಿರ್ ಕಾಂಬಳೇಕರ, ವಿಜಯ ಬನಹಟ್ಟಿ, ಗೋಪಾಲ ಪವಾರ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net