

ಗದಗ : ತಮಿಳನಾಡು ಚೆನ್ನೆ$ನಲ್ಲಿ ಸೆಪ್ಟೆಂಬರ್ 20ರಿಂದ 23 ವರೆಗೆ ನಡೆಯಲಿರುವ 3ನೇ ನ್ಯಾಷನಲ್ ಸೆಟ್ಟಿಂಗ್ ಕ್ರಿಕೆಟ್ ಟೋರ್ನಾಮೆಂಟನಲ್ಲಿ ಕರ್ನಾಟಕ ತಂಡಕ್ಕೆ ಗದಗ ಜಿಲ್ಲೆಯಿಂದ ಖಾಜಾಹುಸೇನ ಕಾತರಕಿ, ಆನಂದ ಬೇಂದ್ರೆ, ಮಹಾಂತೇಶ ಬೇವೂರ, ಚೇತನಕುಮಾರ ಅಮ್ರದ, ಚಂದ್ರಪ್ಪ ಭರಮಣ್ಣವರ ಹಾಗೂ ನಾಶೀರುದ್ದಿನ್ ಷಾ ಮಕಾನದಾರ ಅವರು ಆಯ್ಕೆ ಆಗಿದ್ದಾರೆ. ಈ ಟೋರ್ನಾಮೆಂಟ್ನಲ್ಲಿ ತಮಿಳನಾಡು, ಪುದುಚೇರಿ, ಆಂದ್ರ ಪ್ರದೇಶ, ಓಡಿಸ್ಸಾ, ಉತ್ತರಪ್ರದೇಶ ಹಾಗೂ ಕರ್ನಾಟಕ ರಾಜ್ಯದ ವಿಕಲಚೇತನರ ತಂಡಗಳು ಪಾಲ್ಗೊಳ್ಳಲಿವೆ ಎಂದು ಪ್ರಕಟಣೆ ತಿಳಿಸಿದೆ.