

ವಿಜಯವಾಣಿ ಸುದ್ದಿಜಾಲ ಗದಗ
ಕಲೆ ಎಂಬ ಶಕ್ತಿಯನ್ನು ಸಿದ್ದಿಸಿಕೊಳ್ಳುವದು ಮಹಾ ಕಠಿಣ ತಪಸ್ಸಿನಿಂದ ಮಾತ್ರ ಸಾಧ್ಯ. ಅಂತಹ ಕಲೆಗಳನ್ನು ಆರಾಧಿಸುತ್ತ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಕೊಳ್ಳಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ. ಬಿ. ಅಸೂಟಿ ಹೇಳಿದರು.
ನಗರದ ವಿಜಯ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಟಿ.ಪಿ. ಅಕ್ಕಿ ಬೆಳ್ಳಿ ಪದಕ ಪ್ರಶಸ್ತಿ, ಕಲಾ ಪ್ರದರ್ಶನ ಹಾಗೂ ಕಲಾವಿದ ಎಸ್. ಕೆ ಪತ್ತಾರವರ ಕಲಾ ಪ್ರಾತ್ಯತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಟಿ. ಪಿ ಅಕ್ಕಿಯವರ ಶ್ರಮದ ಲವಾಗಿ ಕಲಾ ಮಂದಿರ ಅಪಾರವಾಗಿ ಬೆಳೆದಿದೆ. ಕಲಾ ೇತ್ರದಲ್ಲಿ ಸರ್ಕಾರ ಹಲವು ವರ್ಷಗಳಿಂದ ಶಿಕರ ನೇಮಕಾತಿ ಮಾಡಿಲ್ಲ. ಈ ವಿಷಯವಾಗಿ ಸರ್ಕಾರದ ಗಮನಕ್ಕೆ ತರಲಾಗುವುದು. ಶ್ರೀದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಸಕಾರ ಕೈಗೊಳ್ಳಲಿದೆ ಎಂದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಶಹಜಾನ ಮುದಕವಿ ಮಾತನಾಡಿ, ಕಲೆ ಮಾನವನ ಮೂಲ ಭಾಷೆ. ಮಕ್ಕಳ ಶಿಣ ಚಿತ್ರಕಲೆಯಿಂದ ಪ್ರಾರಂಭವಾಗುತ್ತದೆ. ಅರವತ್ನಾಲ್ಕು ಕಲೆಗಳಲ್ಲಿ ಏಳು ಲಲಿತಕಲೆಗಳು ಆತ್ಮಾನಂದ ನೀಡುವ ಕಲೆಗಳಾಗಿವೆ. ಕಲೆ ಕೇವಲ ಮನರಂಜನೆಗೆ ಸೀಮಿತವಾಗದೆ ಇಂದು ಎಲ್ಲ ೇತ್ರದಲ್ಲಿ ಕಲೆ ತನ್ನ ಅಸ್ತಿತ್ವ ಮತ್ತು ವಿಸ್ತಾರತೆಯನ್ನು ಹೆಚ್ಚಿಸಿಕೊಂಡಿದೆ. ಆಧುನಿಕ ದಿನಗಳಲ್ಲಿ ಕಲೆ ಮತ್ತು ಕಲಾವಿದರಿಗೆ ಅಮೋ ಅವಕಾಶಗಳು ಇವೆ. ಕಲಾ ಪದವಿ ನಂತರದಲ್ಲಿ ನಿರಂತರ ಅಧ್ಯಯನ ಮತ್ತು ಹೋರಾಟದಿಂದ ಹಲವಾರು ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಟಿ.ಪಿ ಅಕ್ಕಿ ಬೆಳ್ಳಿ ಪದಕ ಪ್ರಶಸ್ತಿ, ಮೆರೀಟ್ ಅವಾರ್ಡ ಪ್ರಶಸ್ತಿಗಳನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ವಿಜಯ ಕಲಾಮಂದಿರ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾಥಿರ್ಗಳ ಕಲಾಪ್ರದರ್ಶನ ಮತ್ತು ಕಲಾವಿದ ಎಸ್. ಕೆ ಪತ್ತಾರವರ ಕಲಾ ಪ್ರಾತ್ಯತೆ ಜರುಗಿತು. ಹಿರಿಯ ತೆರಿಗೆ ಸಲಹೆಗಾರ ಮುಕುಂದ ಪ್ರೋತ್ನಿಸ್, ಲಲಿತಕಲಾ ಅಕಾಡೆಮಿ ಸದಸ್ಯ ಡಾ. ಬಸವರಾಜ ಕಲೆಗಾರ, ಸಂಸ್ಥೆಯ ಕಾರ್ಯದಶಿರ್ ಪ್ರಕಾಶ ಅಕ್ಕಿ, ಪ್ರೊ. ಶರಣಪ್ಪ ಎಚ್, ಪ್ರೊ. ಬಸವರಾಜ ನೆಲಜೇರಿ ಇತರರು ಇದ್ದರು.