

ವಿಜಯವಾಣಿ ಸುದ್ದಿಜಾಲ ಗದಗ
ನಗರದಲ್ಲಿ ನಿಷೇಧಿತ ಪಿಎ್ಐ ಸಂಟನೆಯ ರಾಜಕೀಯ ಪವಾಗಿರುವ ಎಸ್ಡಿಪಿಐ ಪದ ಪ್ರಮುಖರ ಕುಮ್ಮಕ್ಕಿನಿಂದ ಹಿಂದೂಗಳ ಮೇಲೆ ಹಲ್ಲೆ, ಗೋಹತ್ಯೆ, ಮತಾಂತರ, ಲವ್ಜಿಹಾದ್ಗೆ ಪ್ರಚೋದನೆ ನೀಡುತ್ತಿರುವುದನ್ನು ಖಂಡಿಸಿ ವಿಶ್ವ ಹಿಂದೂಪರಿಷತ್ ಮತ್ತು ಭಜರಂಗದಳ ಸದಸ್ಯರು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಗದಗ ನಗರದ ಜೋಡು ಮಾರುತಿ ದೇವಸ್ಥಾನದ ಸಮೀಪ ಇತ್ತೀಚೆಗೆ ುಲಕ ಕಾರಣಕ್ಕೆ 4 ಜನ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಕೃತ್ಯ ಮಾಸುವ ಮುನ್ನವೇ ಮತ್ತೊಂದು ಹಿಂದೂಗಳ ಮೇಲೆ ಹಲ್ಲೆ ಪ್ರಕರಣವನ್ನು ವಿಶ್ವಹಿಂದೂ ಪರಿಷತ, ಭಜರಂಗದಳ ಉಗ್ರವಾಗಿ ಖಂಡಿಸುತ್ತದೆ. ಡೊ. 26 ರಂದು ನಗರದ ಅನಿಲ ಮುಳ್ಳಾಳ ಹಾಗೂ ಸಹೋದರರು ತಮ್ಮ ಸಹೋದರಿಯನ್ನು ಮುಸ್ಲಿಂ ಗುಂಡಾ ಯುವಕರು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದನ್ನೇ ನೆಪ ಮಾಡಿಕೊಂಡು ಮುಸ್ಲಿಂ ಮತಾಂಧರು ಒಟ್ಟಾಗಿ ಹಿಂದೂಗಳ ಮೇಲೆ ದಾಳಿ ಮಾಡಿದ್ದಲ್ಲದೆ, ಅನಿಲ ಅವರನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಜಗಳ ಬಿಡಿಸಲು ಬಂದ ದಲಿತ ಯುವಕ ಮಂಜುನಾಥ ಬಂಡಿವಡ್ಡರಿಗೆ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ ಆರೋಪಿಸಿ ಮನವಿ ಸಲ್ಲಿಸಿತು.
ಎಸ್ಡಿಪಿಐ ಪ್ರಮುಖರನ್ನು ಬಂಧಿಸಿ ಉಗ್ರಕ್ರಮ ಕೈಗೊಳ್ಳಬೇಕು. ಹಿಂದೂಗಳ ಮಠ, ಮಂದಿರಗಳಿಗೆ, ಹಿಂದೂ ಯುವತಿಯರಿಗೆ ಇಂಥ ಮತಾಂಧ ಶಕ್ತಿಗಳಿಂದ ರಣೆ ನೀಡಬೇಕು. ಈ ತರಹದ ಟನೆಗಳು ಮುಂದುವರೆದಲ್ಲಿ ಜಾಗೃತ ಹಿಂದೂ ಸಮಾಜ ತಕ್ಕ ಉತ್ತರ ನೀಡುತ್ತದೆ ಎಂದು ವಿಶ್ವಹಿಂದೂ ಪರಿಷತ್ ಜಿಲ್ಲಾ ಉಪಾಧ್ಯ ವೀರಣ್ಣ ಹೇಮಾದ್ರಿ ಹೇಳಿದರು.
ರಾಣಿ ಚಂದಾವರಿ, ಸಂಜೀವ ಜೋಶಿ, ಮಾರುತಿ ಪವಾರ, ವಿರೇಶ ಮಡಿವಾಳರ, ಪರಶುರಾಮ ಬಾವಿಕಟ್ಟಿ, ಪ್ರಸಾದ ಬಡಿಗೇರ, ಪ್ರಮೋದ ಚವಾಣ, ಅಶೋಕ ಜಕ್ಕಲಿ ಇತರರು ಇದ್ದರು.