ಗದಗ: ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂ.ಪಚಾಕ್ಷರಿ ಗವಾಯಿಗಳವರ ೮೧ ನೇ ಹಾಗೂ ಪಂ.ಪುಟ್ಟರಾಜ ಕವಿ ಗವಾಯಿಗಳವರ ೧೫ ನೇ ಪುಣ್ಯಸ್ಮರಣೆಯ ಅಂಗವಾಗಿ ಸೋಮವಾರ ಸಂಜೆ ಉಭಯ ಶ್ರೀಗಳ ಮಹಾರಥೋತ್ಸವ ಅದ್ಧೂರಿಯಾಗಿ ಜರುಗಿತು.
ಉಭಯ ಶ್ರೀಗಳ ಬೆಳ್ಳಿ ಮೂರ್ತಿಗಳನ್ನು ಗದ್ದುಗೆಯಿಂದ ಮಹಾತೇರಿನ ವರೆಗೆ ಮೆರವಣಿಗೆ ಮೂಲಕ ಸಾಗಿ ಬರುವಾಗ ಶ್ರೀಗುರು ಪಂಚಾಕ್ಷರಿ ಗವಾಯಿಗಳವರ ನಾಮಾವಳಿಗಳನ್ನು ಅಶ್ರಮದ ವಿದ್ಯಾರ್ಥಿಗಳು ಪಠಿಸಿದರು. ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ರಥೋತ್ಸವದ ಉದ್ದಗಲಕ್ಕೂ ಶ್ರೀಗುರು ಹಾನಗಲ್ ಕುಮಾರೇಶ್ವರ ಶ್ರೀಗಳು, ಪಂ.ಪAಚಾಕ್ಷರಿ ಗವಾಯಿಗಳು ಹಾಗೂ ಪಂ. ಪುಟ್ಟರಾಜ ಕವಿ ಗವಾಯಿಗಳವರಿಗೆ ಜಯಘೋಷಗಳನ್ನು ಹೇಳುತ್ತ ಮುಂದೆ ಸಾಗಿದರು.
ಈ ರಥೋತ್ಸವದಲ್ಲಿ ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ಅಡ್ನೂರ ದಾಸೋಹ ಶ್ರೀಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹಾಗೂ ಹರ-ಗುರು-ಛರ ಮೂರ್ತಿಗಳು ಸೇರಿದಂತೆ ಸಾವಿರಾರು ಭಕ್ತರು ಜಾತ್ರಾಮಹೋತ್ಸವಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಮೂರು ಸಾವಿರ ಮಠದ ಜ.ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ, ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಗಂಗಾವತಿ ಕಲ್ಮಠದ ಡಾ.ಕೊಟ್ಟೂರ ಸ್ವಾಮೀಜಿ, ಉಪ್ಪಿನ ಬೆಟಗೇರಿಯ ಮೂರುಸಾವಿರಮಠದ ಕುಮಾರ ವೀರುಪಾಕ್ಷ ಸ್ವಾಮೀಜಿ, ಬಳಗಾನೂರ ಶಿವಶಾಂತವೀರ ಶರಣರು, ಚನ್ನಮ್ಮ ಕಿತ್ತೂರಿನ ಪಂಚಾಕ್ಷರ ಸ್ವಾಮೀಜಿ, ಮುದ್ದೇಬಿಹಾಳದ ಡಾ. ಲಾಲಲಿಂಗೇಶ್ವರ ಶರಣರು, ಅಫಜಲಪೂರಿನ ವೀರುಪಾಕ್ಷಿ ದೇವರು, ಯಡ್ರಾಮಿಯ ಪ್ರಣವಲಿಂಗ ಸ್ವಾಮೀಜಿ, ಲಿಂಗಸೂರಿನ ಶಿವಶರಣೆ ನಂದೀಶ್ವರಿ ಅಮ್ಮನವರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತ ಸಮೂಹ ಮಹಾರಥೋತ್ಸವದ ಅದ್ದೂರಿ ಕ್ಷಣಗಳನ್ನು ಕಣ್ತುಂಬಿಕೊAಡರು.