

ವಿಜಯವಾಣಿ ಸುದ್ದಿಜಾಲ ಗದಗ
ಅಂದ ಅನಾಥರ ಆಶ್ರಯದಾತ, ಸಂಗೀತದಿಂದ ಜಗದ ಬೆಳಕಾದ, ಬೇಡವಾದ ಬದುಕನು ಬೆಳಗುವಂತೆ ಮಾಡಿದ ಸರಸ್ವತಿಯ ಪುತ್ರ ವಿರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಕವಿ ಗವಾಯಿಗಳಾಗಿದ್ದಾರೆ ಎಂದು ಬಂಜಾರ ಭಾಷಾ ಅಕಾಡೆಮಿ ಸದಸ್ಯೆ ಸಾವಿತ್ರಿ ಲಮಾಣಿ ಹೇಳಿದರು.
ನಗರದ ಸಂಗೀತ ಮಹಾವಿದ್ಯಾಲಯದಲ್ಲಿ ಶುಕ್ರವಾರ ವಿವಿಧ ಸಂಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಪುಟ್ಟರಾಜ ಗವಾಯಿಗಳ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಉದ್ದಕ್ಕೂ ಸಂಗಿತ ಕಲಾವಿದರನ್ನು ರೂಪಿಸಿ ಅವರ ಬಾಳನು ಬೆಳಗಿದ್ದಾರೆ. ಅಂದರಿಗೊಂದು ಆಶ್ರಮ ಮಾಡಿ ನಿತ್ಯ ಸಂಗೀತ ದಾಸೋಹ ಮಾಡಿ ಬದುಕೇ ಇಲ್ಲದೆ ಸೋತು ಹೋದವರ ಕತ್ತಲ ಬಾಳಿಗೆ ಬೆಳಕು ಚಲ್ಲಿದ ಗಾನಯೋಗಿ ಪುಟ್ಟರಾಜ ಗವಾಯಿಗಳು ನಿರಂತರ ಸ್ಮರಣೀಯರು. ದೇಶದ ಮುಕುಟವಾಗಿ ಸಂಗೀತ ಲೋಕವನ್ನು ಬೆಳಗಿಸಿದ ಮಹಾತ್ಮರು ಪುಟ್ಟರಾಜರು ಮತ್ತು ಪಂಚಾರ ಗವಾಯಿಗಳು. ಅವರ ಸ್ಮರಣೆ ನನಗೆ ಅಮೂಲ್ಯ ಅವಕಾಶ ಎಂದರು.
ಡಾ. ಅನ್ನದಾನಿ ಹಿರೇಮಠ ಮಾತನಾಡಿ ಸಂಗೀತ ಲೋಕದ ನತ್ರ ಅನಾಥರ ಬಾಳಿನ ಬೆಳಕಾಗಿ ತ್ರಿಭಾಷಾ ಪಂಡಿತರಾಗಿ ಸಾಹಿತ್ಯ ಲೋಕಕ್ಕೆ ಬೆಳಕು ಚಲ್ಲಿದರು. ನಾಟಕ ಕಂಪನಿಗಳನ್ನು ಆರಂಭಿಸಿ ಹಲವಾರು ಕಲಾವಿದರ ಬದುಕನ್ನು ಕಟ್ಟಿದರು ಹಲವಾರು ಪ್ರಶಸ್ತಿಗಳ ಪುರಸತರಾಗಿ ಗದುಗಿ ಕೀತಿರ್ಯನ್ನು ದೇಶ ವಿದೇಶಕ್ಕೆ ಬೆಳಗಿಸಿದ ಕೀತಿರ್ ಪುಟ್ಟರಾಜರಿಗೆ ಸಲ್ಲುತ್ತದೆ ಎಂದರು.
ಅಧ್ಯತೆ ವಹಿಸಿ ಮಾತನಾಡಿದ ನವಜ್ಯೋತಿ ಸೇವಾ ಸಂಸ್ಥೆಯ ಕಾರ್ಯದಶಿರ್ ಬಸವರಾಜ ಬೇವಿನಮರದ ಮಾತನಾಡಿ, ನಮ್ಮ ಆರಾಧ್ಯ ದೈವ ಪುಟ್ಟರಾಜರು. ನಮ್ಮ ನಾಡು ಕಂಡ ಶ್ರೇಷ್ಠ ದೇವರು. ಇವರು ನಡೆದಾಡಿದ ನೆಲ ಪಾವನ ಅಂತಹ ನೆಲದಲ್ಲಿ ನಾವು ಇದ್ದು ಅವರನ್ನು ನೋಡಿದ ಭಾಗ್ಯ ನಮ್ಮದಾಗಿದೆ. ಅಂತಹ ದೇವರು ಮತ್ತೊಮ್ಮ ಹುಟ್ಟಿ ಬರುವ ಸಾಧ್ಯತೆ ಅಸಾಧ್ಯವಾದದ್ದು. ಇವರ ಹೆಸರನ್ನು ಗದಗ ರೈಲ್ವೆ ಸ್ಟೇಷನ್ಗೆ ಇಡಬೇಕು ಎಂದರು.
ನಿರ್ಮಲಾ ತರವಾಡೆ, ಹನುಮಂತಗೌಡ ಪಾಟೀಲ, ಕಳಕಪ್ಪ ತಳವಾರ, ಶ್ವೇತಾ ಕೋಳೆಕರ, ಕಳಕೇಶ ಅರಿಕೇರಿ, ಪ್ರಕಾಶ ಕಮ್ಮಾರ, ಬಸವರಾಜ ನೆಲಜೇರಿ, ಮಂಜುನಾಥ ಡೋಣಿ, ಶಾರದಾ ಬಾಣದ, ಕೊಟ್ರೇಶ ಜವಳಿ, ಗಣೇಶಗೌಡ ಪಾಟೀಲ, ಗಣೇಶ ಬಡಿಗೇರ, ಎಸ್. ಬಿ. ಭಜಂತ್ರಿ ಹಲವರು ಇದ್ದರು.