ವೀರೇಶ್ವರ ಪುಣ್ಯಾಶ್ರಮದಲ್ಲಿ ರಡ್ಡಿ ಸಮಾಜದಿಂದ ದೀಪೋತ್ಸವ

23GDG05
Published on

ವಿಜಯವಾಣಿ ಸುದ್ದಿಜಾಲ ಗದಗ

ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಾಕಷ್ಟು ಕಷ್ಟ ಬಂದರೂ ದೃತಿಗೆಡದೇ ಕಠೋರ ತಪಸ್ಸು ಮಾಡುವ ಮೂಲಕ ಶಿವನೊಲುಮೆಯನ್ನು ಪಡೆದು ಸಮಾಜದ ಉದ್ಧಾರಕ್ಕಾಗಿ ಬಾಳಿ ಬದುಕಿ ಇಡೀ ವಿಶ್ವದ ಮಾನವ ಕುಲಕ್ಕೆ ಮತ್ತು ಸರ್ವ ಸಮಾಜದ ಮಹಿಳೆಯರಿಗೆ ಮಾದರಿಯಾಗಿದ್ದಾಳೆ ಎಂದು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.

ವೀರೇಶ್ವರ ಪುಣ್ಯಾಶ್ರಮದಲ್ಲಿ ಜಿಲ್ಲಾ ಶಿವಶರಣೆ ಹೇಮರಡ್ಡಿ ಮಲ್ಲಮ್ಮ, ಮಹಾಯೋಗಿ ವೇಮನ ರಡ್ಡಿ ಸಮಾಜ ಸಂ ಆಶ್ರಯದಲ್ಲಿ ಏರ್ಪಡಿಸಿದ್ದ ಕಾತಿರ್ಕ ಮಾಸದ ದೀಪೋತ್ಸವವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ತತ್ವಾದರ್ಶಗಳು ಸಾರ್ವಕಾಲಿಕ ಶ್ರೇಷ್ಠವಾಗಿವೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೇ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಮಲ್ಲಮ್ಮನವರು ತಾಳ್ಮೆಯ ಪ್ರತಿರೂಪ, ಸ್ತ್ರೀಯರು ತಾಳ್ಮೆಯಿಂದ ಇದ್ದರೆ ಸಾಧನೆ ಮಾಡಬಹದು ಎನ್ನುವುದಕ್ಕೆ ಹೇಮರೆಡ್ಡಿ ಮಲ್ಲಮ್ಮ ಸಾ. ತಾಳ್ಮೆ ಜೀವನದಲ್ಲಿ ಅತೀ ಪ್ರಮುಖ, ದುಡುಕಿನ ನಿರ್ಧಾರ ಯಾವುದೇ ಕಾರಣಕ್ಕೂ ತೆಗೆದುಕೊಳ್ಳಬಾರದು. ಮಹಿಳೆಯರಿಗೆ ತಾಳ್ಮೆ ಇದ್ದರೆ ಅವರು ಇಡೀ ಕುಟುಂಬವನ್ನೇ ಚೆನ್ನಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದರು.

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಮಾಜಕ್ಕೆ ಆಗಾಧವಾದ ಕೊಡುಗೆ ನೀಡಿದ್ದಾರೆ. ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮಲ್ಲಮ್ಮನ ಕಾಯಕನಿಷ್ಠೆ, ದೈವಭಕ್ತಿ ಮತ್ತು ಆದರ್ಶಮಯ ಜೀವನದ ಬಲದಿಂದ ಇಂದು ನಾವು ನೀವೆಲ್ಲರೂ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಸಂಟನೆಯ ಪದಾಧಿಕಾರಿಗಳು, ಹಿರಿಯರು, ಮಹಿಳೆಯರು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net