

ವಿಜಯವಾಣಿ ಸುದ್ದಿಜಾಲ ಗದಗ
ಗುರು ಹಾನಗಲ್ ಕುಮಾರೇಶ್ವರ ಗುರುಗಳ ಶ್ರೀರೆ ನೀಡದಿದ್ದರೆ ವಿರೇಶ್ವರ ಪುಣ್ಯಾಶ್ರಮ ನಿರ್ಮಾಣ ಆಗುತ್ತಿರಲಿಲ್ಲ ಎಂದು ಮುಂಡರಗಿ ಸಂಸ್ಥಾನಮಠದ ನಾಡೋಜ ಡಾ. ಅನ್ನದಾನೀಶ್ವರ ಶಿವಯೋಗಿಗಳು ಹೇಳಿದರು.
ನಗರದ ವಿರೇಶ್ವರ ಪುಣ್ಯಾಶ್ರಮದಲ್ಲಿ ಮಂಗಳವಾರ ಜರುಗಿದ ಗಾನಯೋಗಿ ಶಿವಯೋಗಿ ಲಿಂ. ಪಂ. ಪಂಚಾರ ಗವಾಯಿಗಳವರ 80ನೇ ಪುಣ್ಯಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಕೀರ್ತನ ಸಮ್ಮೇಳನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮುಂಡರಗಿಯ ಮಠಕ್ಕೆ ಮತ್ತು ವಿರೇಶ್ವರ ಪುಣ್ಯಾಶ್ರಮಕ್ಕೆ ಬಹಳ ನಂಟು ಇದೆ. ಈ ಹಿಂದೆ ಪುಣ್ಯಾಶ್ರಮವು ಆಥಿರ್ಕ ಸಂಕಷ್ಟದಲ್ಲಿದ್ದಾಗ ಹೇಮರಡ್ಡಿ ಮಲ್ಲಮ್ಮ ನಾಟಕ ಒಂದು ವರ್ಷ ಪ್ರದರ್ಶನ ಕಂಡು ಸಂಕಷ್ಟದಿಂದ ಪಾರು ಮಾಡಿತು. ಆಶ್ರಮವು ಉತ್ತರೋತ್ತರವಾಗಿ ಬೆಳೆಯಲು 1,11,111 ರೂ.ಗಳನ್ನು ಮಠದಿಂದ ನೀಡಿದ್ದೆವು. ಸಂಗೀತಕ್ಕೆ ಯಾವುದೇ ಜಾತಿ, ಧರ್ಮವಿಲ್ಲ. ಸಂಗೀತಕ್ಕೆ ಮನಸೋಲದವರು ಯಾರು ಇಲ್ಲ. ಇಲ್ಲಿ ಸಂಗೀತ ವಿದ್ಯೆ ಕಲಿತ ವಿದ್ಯಾಥಿರ್ಗಳು ಇಡಿ ವಿಶ್ವದಾದ್ಯಂತ ಪುಣ್ಯಾಶ್ರಮದ ಕೀತಿರ್ಯನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದರು.
ಹೊಸಳ್ಳಿಯ ಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಶ್ರೀಗಳು ಅಧ್ಯತೆ ವಹಿಸಿ ಮಾತನಾಡಿ, ಶಿವಯೋಗ ಮಂದಿರ ಮಠಾದೀಶರನ್ನು ನಿರ್ಮಾಣ ಮಾಡಿದರೆ, ಉಭಯ ಶ್ರೀಗಳು ಅಂಧ& ಅನಾಥರ ಬದುಕನ್ನು ಬೆಳಗಿದ್ದಾರೆ. ದೇವರನ್ನು ಹುಡುಕಿಕೊಂಡು ಹೋಗುವದರಿಂದ ದೇವರು ಸಿಗುವದಿಲ್ಲ. ಕಣ್ಣಿಗೆ ಕಾಣುವ ಗುರುವಿನ ಪಾದವನ್ನು ಗಟ್ಟಿಯಾಗಿ ಹಿಡಿದರೆ ಕಾಣದ ದೇವರು ಕೈಯನ್ನು ಹಿಡಿಯುತ್ತಾನೆ. ಕಲ್ಲಯ್ಯಜ್ಜನವರು ಎಲ್ಲ ಗುರು ಬಂಧುಗಳನ್ನು ಕಟ್ಟಿಕೊಂಡು ಉಭಯ ಗುರುಗಳ ಮಾರ್ಗದರ್ಶನದಂತೆ ಪುಣ್ಯಾಶ್ರಮವನ್ನು ಉತ್ತರೋತ್ತರವಾಗಿ ಬೆಳೆಸುತ್ತಿದ್ದಾರೆ. ಪುಣ್ಯಾಶ್ರಮವು ಮುಗಿಲೆತ್ತರಕ್ಕೆ ಬೆಳೆಯಬೇಕು. ಅದು ಬೆಳೆದರೆ ಸಾವಿರಾರು ಅಂಧ&ಅನಾಥರಿಗೆ ಆಶ್ರಯ ಸಿಗುತ್ತದೆ ಎಂದು ಹೇಳಿದರು.
ಕಪೋತಗಿರಿ ನಂದಿವೇರಿ ಸಂಸ್ಥಾನ ಮಠದ ಶಿವಕುಮಾರ ಶ್ರೀಗಳು ಮಾತನಾಡಿ, ಉಭಯ ಗುರುಗಳ ಸಂಗೀತ, ಸಾಹಿತ್ಯ ಶಿಣ ಹಾಗೂ ಗುರು ಪರಂಪರೆಯನ್ನು ಇಂದಿನ ಗುರುಗಳಾದ ಕಲ್ಲಯ್ಯಜ್ಜನವರು ಮುಂದುರೆಸಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪಂ.ಪುಟ್ಟರಾಜ ಕವಿಗವಾಯಿಗಳು ರಚಿಸಿದ ಗಾನಸುಧಾ ಭಾಗ&1 ಗ್ರಂಥ ಹಾಗೂ ಆರೋಡ ಸಿರಿಧ್ವನಿ ಸುರುಳಿ ಬಿಡುಗಡೆಯಾದವು. ಪಂ.ಶಿವಾನಂದೀಶ್ವರ ಶಾಸ್ತ್ರಿಗಳು ಹಾಗೂ ತಾವರಗೇರೆಯ ಪಂ. ಶಿವರಾಜಶಾಸ್ತ್ರಿಗಳು ಪಂ. ಪುಟ್ಟರಾಜ ಗವಾಯಿಗಳವರ ಕೀರ್ತನ ಮಾಡಿದರು. ರಾತ್ರಿ ಸ್ವರ ಸಮಾರಾಧನಾ ಸಂಗೀತ ಕಾರ್ಯಕ್ರಮ ಜರುಗಿತು.
ಕನಕಗಿರಿ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಡಾ. ಚನ್ನಮಲ್ಲ ಶ್ರೀಗಳು, ಯಲಬುರ್ಗಾ ಮುರುಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯ ಶ್ರೀಗಳು, ಗುಳೇದಗುಡ್ಡದ ಒಪ್ಪತ್ತೇಶ್ವರ ಸಂಸ್ಥಾನಮಠದ ಅಭಿನವ ಒಪ್ಪತ್ತೇಶ್ವರ ಮಹಾ ಸ್ವಾಮಿಗಳು, ಹೂವಿನಹಡಗಲಿ ಗವಿಸಿದ್ದೇಶ್ವರ ಶಾಖಾ ಮಠದ ಡಾ. ಹಿರಿಯ ಶಾಂತವೀರ ಶ್ರಿಗಳು, ಅಣ್ಣಿಗೇರಿ ದಾಸೋಹ ಮಠದ ಶಿವಕುಮಾರ ಶ್ರೀಗಳು, ಅಡ್ನೂರ ದಾಸೋಹ ಮಠದ ಅಭಿನವ ಪಂಚಾರ ಶಿವಾಚಾರ್ಯ ಶ್ರೀಗಳು, ಓಂಕಾರೇಶ್ವರ ಹಿರೇಮಠದ ಕೀರೇಶ್ವರ ಪಟ್ಟಾಧ್ಯರು, ಅಸುಂಡಿ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ಮೈತ್ರಾದೇವಿ ತಾಯಿಯವರು, ಸಂಭಾಪುರದ ಈರಮ್ಮ ತಾಯಿ ಆಶ್ರಮದ ಅಭಿನವ ರುದ್ರಮ್ಮ ತಾಯಿಯವರು ಇದ್ದರು.