ಭಕ್ತಿ ಎಂದರೆ ಉತ್ಕೃಷ್ಟವಾದ ಪ್ರೀತಿಯೇ ಭಕ್ತಿ, ಶುದ್ಧ ಅಂತಕರಣದ ಕಲುಷಿತವಲ್ಲದ ಕರಾರುರಹಿತವಾದ ಪ್ರೀತಿಯೇ ಭಕ್ತಿ, ನನಗೆ ಬಂಗಾರ ಕೊಡು, ಅಧಿಕಾರ ಕೊಡು ಎನ್ನುವುದು ಭಕ್ತಿಯಲ್ಲ. ಅದು ವ್ಯವಹಾರ, ಯಾವುದೇ ಬೇಡಿಕೆ ಇಲ್ಲದೇ ಇರುವುದು ಭಕ್ತಿ, ಭಕ್ತಿ ಎಂದರೆ ಗುರುವಿನಲ್ಲಿ ಕರಗುವುದು. ಕರಗಿ ಲೀನವಾಗುವುದು. ನಿನ್ನ ಅಸ್ತಿತ್ವವನ್ನು ಕರಗಿಸಿ, ವ್ಯಕ್ತಿತ್ವ ಕರಗಿಸಿ ಗುರುವಿನಲ್ಲಿ ಲೀನವಾಗುವುದೇ ನಿಜವಾದ ಭಕ್ತಿ. ಅಂತಹ ಭಕ್ತಿಯ ಸಂಬಂಧವೇ ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳದ್ದು ಎಂದರು.