ಜಾತಿಗಣತಿಯಲ್ಲಿ ಹಿಂದು ಮತ್ತು ವೀರಶೈವ ಲಿಂಗಾಯತ ಒಳಪಂಗಡ ಕಾಲಂ ಸೃಷ್ಟಿಸುವಂತೆ ಕೇಂದ್ರಕ್ಕೆ ಮನವಿ

1019A6C
Published on
ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿ ಮಂದಿರದಲ್ಲಿ ಪಂಚಪೀಠಾಧೀಶರ ಸಾನ್ನಿಧ್ಯದಲ್ಲಿ ಸರ್ಕಾರದ ಜಾತಿಗಣತಿಯನ್ನು ವಿರೋಧಿಸಲಾಯಿತು. ಸರ್ಕಾರಕ್ಕೆ ಎಚ್ವರಿಕೆ ಸಂದೇಶ ನೀಡುವ ಮೂಲಕ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಿ ಅಂತಿಮ ನಿರ್ಣಯಕ್ಕೆ ಬರಲು ತೀರ್ಮಾನಿಸಲಾಯಿತು. ಜತೆಗೆ ಜಾತಿಗಣತಿಯಲ್ಲಿ ಹಿಂದು ಧರ್ಮದ ಜತೆಗೆ ಜಾತಿ ಕಾಲಂ ನಲ್ಲಿ ವೀರಶೈವ ಲಿಂಗಾಯತ ಒಳಪಂಗಡಗಳ ಹೆಸರನ್ನೂ ಸ್ಪಷ್ಟವಾಗಿ ನಮೂದಿಸುವಂತೆ ಸಮಾಜಕ್ಕೆ ಸಂದೇಶ ನೀಡಲಾಯಿತು. ಈ ಬಗ್ಗೆ ಹೊಸ ಕಾಲಂ ಸೃಷ್ಟಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಯಿತು.
ಗಣತಿಯಲ್ಲಿನ ಗೊಂದಲಗಳು, ತಪ್ಪು ಮಾಹಿತಿಗಳನ್ನು, ಸುಪ್ರೀಂ ಕೋರ್ಟ್ ಆದೇಶಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಂಕರ ಬಿದರಿ ಅವರು ಸಂಸ್ಥೆಯಿಂದ ಪ್ರತ್ಯೇಕ ಗಣತಿ ಮಾಡುವುದಾಗಿ ತಿಳಿಸಿದರು.
ಸಭೆಯಲ್ಲಿ ಪ್ರಮುಖವಾಗಿ ಚಿನ್ನಪ್ಪರೆಡ್ಡಿ, ಹಾವನೂರು ಮತ್ತು ಕಾಂತರಾಜು ವರದಿಯಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಆದ ಅನ್ಯಾಯವನ್ನು ಖಂಡಿಸಲಾಯಿತು. ಹಿಂದಿನ ಗಣತಿಗಳಲ್ಲಿ ಹಿಂದು ಲಿಂಗಾಯತ, ಲಿಂಗಾಯತ ಎಂಬ ಪದಗಳ ಬಳಕೆಯಿಂದ ಗಣಿತಿಗಳ ಸಂಖ್ಯೆಯಲ್ಲಿ ಕಡಿಮೆ ಆಗಿದೆ. ಹಿಂದು ಗಾಣಿಗ, ಲಿಂಗಾಯತ ಗಾಣಿಗ ಎಂಬಂತೆ ಎಲ್ಲ ಒಳಪಂಗಡಗಳಲ್ಲಿ ಇದೇ ಗೊಂದಲ ಏರ್ಪಟ್ಟಿದೆ ಎಂಬ ವಿಷಯಗಳ ಕುರಿತು ವಿಷಯ ಮಂಡಿಸಲಾಯಿತು.
ಗಣತಿಗೆ ಸಂಬಂಧಿಸಿದಂತೆ ವಿವಿಧ ಪದಗಳ ಬಳಕೆ ಬದಲಾಗಿ ಒಂದೇ ಪದ ಬಳಸಲು ವೀರಶೈವ ಲಿಂಗಾಯತ ಮಹಾಸಭಾ ಸದಸ್ಯರು ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಸಭೆಯಲ್ಲಿ ಸುಪ್ರೀಂ, ಹೈಕೋರ್ಟ್ ಆದೇಶ ಗಳಲ್ಲಿ ಸಮುದಾಯಕ್ಕೆ ಆದ ಅನ್ಯಾಯ ಕುರಿತು ಉದಾಹರಣೆ ಸಹಿತಿ ವಿಷಯಗಳನ್ನು ಪ್ರಸ್ತಾಪಿಸಲಾಯಿತು.
ಸಂವಿಧಾನಾತ್ಮಕವಾಗಿ ರಾಜ್ಯ ಸರ್ಕಾರಕ್ಕೆ ಜಾತಿಗಣತಿ ಮಾಡಲು ಅಧಿಕಾರ ಇಲ್ಲ. ಕೇಂದ್ರ ಸರ್ಕಾರ ಜಾತಿ ಗಣತಿ ಮಾಡಲು ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ. ರಾಜ್ಯ ಸರ್ಕಾರ ಹಲವು ಗೊಂದಲಗಳನ್ನು ಸೃಷ್ಟಿಸುವ ಮೂಲಕ ವೀರಶೈವ ಲಿಂಗಾಯತರನ್ನು ಇಬ್ಬಾಗ ಮಾಡಲಾಗುತ್ತಿದೆ. ಕಾಂತರಾಜು ವರದಿಯಲ್ಲಿ ಕೇವಲ 4.5 ಕೋಟಿ ಜನರನ್ನು ಸಂಪರ್ಕಿಸಲಾಗಿದೆ ಎಂದು ಹೇಳಲಾಗಿದೆ. ಹಾಗಿದ್ದರೆ ಇನ್ನೂ 2.5 ಕೋಟಿ ಜನರ ಸಮೀಕ್ಷೆ ನಡೆದಿಲ್ಲ. ಒಳಮೀಸಲಾತಿ ನೀಡಲು ಪರಿಶಿಷ್ಟ ಜಾತಿ  ಒಳಮೀಸಲು ಸಮೀಕ್ಷೆ ನಡೆಸಲಾಗುತ್ತಿದೆ. ಆದರೆ, ಕಾಂತರಾಜು ವರದಿಯಲ್ಲಿ ಈಗಾಗಲೇ ಜಾತಿಗಣತಿ ಮಾಡಿದ್ದರಿಂದ ಪ್ರತ್ಯೇಕ ಒಳಮೀಸಲು ಗಣತಿ ಏಕೆ ಎಂದು ಪ್ರಶ್ನಿಸಿದರು. ಸರ್ಕಾರ ಜಾತಿಗಣತಿ ವರದಿಯನ್ನು ಸ್ವೀಕರಿಸಬಾರದು ಎಂದು ಆಗ್ರಹಿಸಿದರು.
ಚಿನ್ನಪ್ಪರೆಡ್ಡಿ ಅವರು ಜಾತಿ ಸಮೀಕ್ಷೆ ಮಾಡಿದ್ದರು. ಜಾತಿಗಣತಿಯಲ್ಲಿ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗ ಎಂದು ವಿಂಗಡಿಸಲಾಗಿದೆ. ಸಮೀಕ್ಷೆ ಮೀಸಲಿನಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಹಿಂದು ಹೆಳವ, ಲಿಂಗಾಯತ ಹೆಳವ ಎಂದು ಎರಡರಲ್ಲೂ ವ್ಯತ್ಯಾಸ ಇದೆ. ಲಿಂಗಾಯತ ಮಚಿಗಾರ 3B ನಲ್ಲಿ ಬರುತ್ತಾರೆ. ಆದರೆ ಕೇವಲ ಮಚಿಗಾರ ಎಂದರೆ ಚಪಲ್ಲಿ ಕೆಲಸ ಮಾಡುವನೆಂದು ಗಣತಿಯಲ್ಲಿ ವ್ಯತ್ಯಾಸ ಮಾಡಲಾಗಿದೆ. ಇದೇ ರೀತಿ ಲಿಂಗಾಯತ ಕ್ಷೌರಿಕ, ಲಿಂಗಾಯತ ಸಮಗಾರ, ಲಿಂಗಾಯತ, ಲಿಂಗಾಯತ ಮಡಿವಾಳ, ಹಿಂದು ಮಡಿವಾಳ ಎಂದು ಹಲವರಲ್ಲಿ ವ್ಯತ್ಯಾಸ ಇದೆ. ವೀರಶೈವ ಲಿಂಗಾಯತ ಸಮುದಾಯದಕ್ಕೆ ಗಣತಿ ಸಮೀಕ್ಷೆ ಅನ್ಯಾಯವಾಗಿದೆ ಮಹಾಸಭಾ ಮುಖಂಡರು ವಿಷಯ ಪ್ರಸ್ತಾಪಿಸಿದರು.
ಹಾವನೂರು ಮತ್ತು ಚಿನ್ನಪ್ಪರೆಡ್ಡಿ ಸಮೀಕ್ಷೆಯಲ್ಲಿ ನಮ್ಮನ್ನು ಜಾತಿ ಎಂದು ಪರಿಗಣಿಸಿ ಅನ್ಯಾಯ ಮಾಡಲಾಗಿದೆ. ಹೀಗಾಗಿ ಅದೇ ಅನ್ಯಾಯವನ್ನು ಮುಂದುವರೆಸಬೇಡಿ ಎಂದು ಸರ್ಕಾರಕ್ಕೆ ಸೂಚಿಸಬೇಕು ಎಂದು ಮಲ್ಲಿಕಾರ್ಜುನ ಅವರಲ್ಲಿ ವಿನಂತಿಸಲಾಯಿತು.
ಸಮಾರಂಭದಲ್ಲಿ ರಂಭಾಪುರಿ‌ ಪೀಠದ ಜ.ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು, ಉಜ್ಜಯಿನಿ ಪೀಠದ ಜ. ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠದ ಜ.ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಕಾಶಿ ಪೀಠದ ಜ.ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ  ಸ್ವಾಮೀಜಿ, ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕೋಟ್: 
ವೀರಶೈವ ಎಂಬುದು ಸೈದ್ಧಾಂತಿಕ ಪದ. ಲಿಂಗಾಯತ ಎಂಬುದ ರೂಢಿಪದ. ಹೀಗಾಗಿ ಗೊಂದಲ ಸೃಷ್ಟಿ ಆಗುತ್ತಿದೆ. ಕೆಲವರು ಲಿಂಗಾಯತ ಉಳಿಸಿಕೊಂಡು ವೀರಶೈವ ಪದ ಬಿಡಬೇಕು ಎಂಬ ಪ್ರಸ್ತಾಗಳಿಂದ ನೋವು ಆಗುತ್ತಿದೆ. ವೀರಶೈವ ಲಿಂಗಾಯತ ಸಮುದಾಯ ಎಲ್ಲ ಜಾತಿ, ಸಮುದಾಯದಕ್ಕೆ ಸಮಾನ ಗೌರವ ನೀಡುತ್ತ ಬಂದಿದೆ. ಸಾಮಾಜಿಕ ಅನ್ಯಾಯ ಆದವರು ಹೋರಾಟ ಮಾಡಿದರೆ ತಪ್ಪಿಲ್ಳ. ಆದರೆ ರಾಜಕೀಯ ದುರುದ್ದೇಶದಿಂದ ಸಮುದಾಯದ ಒಡೆಯುವುದು ಸರಿಯಲ್ಲ. ಬಸವಣ್ಣ ವಚನಗಳಲ್ಲಿ ಎಲ್ಳ ಸಮುದಾಯದ ಗೌರವವನ್ನು ನೋಡಿದ್ದೇವೆ. ಬಸವಣ್ಣ ಎಲ್ಲರನ್ನೂ ವೀರಶೈವ ಲಿಂಗಾಯತ ಸಮುದಾಯಕ್ಕೆ ಕರೆತರಲು ಪ್ರಯತ್ನಿಸಿದ್ದಾರೆ. ಆದರೆ. ಕೆಲವರು ವೀರಶೈವವೇ ಬೇರೆ, ಲಿಂಗಾಯತರೇ ಬೇರೆ ಎಂದು ಸಾಧಿಸುತ್ತಿರುವುದು ಸರಿಯಲ್ಲ.
* ರಂಭಾಪುರಿ ಜ.ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net