ವಿಡಿಎಸ್​ ಶಾಲೆಯಲ್ಲಿ ಯೋಗ ದಿನಾಚರಣೆ.

21GDG05
Published on

ಗದಗ: ನಗರದ ವಿದ್ಯಾದಾನ ಸಮಿತಿಯ ಕ್ಲಾಸಿಕ್​ ಆಂಗ್ಲ ಮಾಧ್ಯಮ ಸಿಬಿಎಸ್​ಇ ಶಾಲೆಯಲ್ಲಿ 11 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

ಸಂಸ್ಥೆಯ ಕಾರ್ಯದಶಿರ್ ಶ್ರೀನಿವಾಸ ಹುಯಿಲಗೋಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಗವು ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಏಕಾಗ್ರತೆ ಹೆಚ್ಚಾಗುವುದರ ಜತೆಗೆ ದೇಹಕ್ಕೆ ಒಳ್ಳೆಯ ಶಕ್ತಿ ಬರುತ್ತದೆ. ದಿನಕ್ಕೆ ಒಂದು ಬಾರಿ ಯೋಗ, ಇರುವೆವು ರೋಗದಿಂದ ದೂರ ಎಂಬಂತೆ ನಾವೆಲ್ಲರೂ ಪ್ರತಿನಿತ್ಯ ಯೋಗ, ಧ್ಯಾನ ಹಾಗೂ ಓಂಕಾರವನ್ನು ಮಾಡಬೇಕು. ಯೋಗದಿಂದ ಅನೇಕ ರೋಗಗಳು ನಿವಾರಣೆ ಆಗುವುದರ ಜೊತೆಗೆ ಸದೃಢ ದೇಹದಲ್ಲಿ ಸದೃಢ ಮನಸ್ಸು ನಿರ್ಮಾಣವಾಗುತ್ತದೆ ಎಂದರು.

ಆಡಳಿತ ಮಂಡಳಿಯ ಸದಸ್ಯ ಡಾ. ಪವನ ಹುಯಿಲಗೋಳ ಮಾತನಾಡಿ, ಯೋಗಾಭ್ಯಾಸವೇ ಯೋಗ್ಯ ಆರೋಗ್ಯವೇ ಭಾಗ್ಯ ಎಂಬಂತೆ ಯೋಗವು ನಮ್ಮ ಶರೀರಕ್ಕೆ, ಆರೋಗ್ಯಕರ ಜೀವನಕ್ಕೆ, ಮಕ್ಕಳ ಬೆಳವಣಿಗೆಗೆ, ಮಾನಸಿಕ ಸಮತೋಲನಕ್ಕೆ, ಬೌದ್ಧಿಕ ವಿಕಾಸಕ್ಕೆ ಪ್ರಕೃತಿಯಿಂದ ಉಚಿತವಾಗಿ ಸಿಗುವ ಏಕೈಕ ದಿವ್ಯೌಷಧ ಆಗಿದೆ. ಯೋಗಾಭ್ಯಾಸವು ಎಲ್ಲ ಪ್ರಾಯದವರೂ ಮಾಡುವಂತದ್ದಾಗಿದೆ. ಅದುದರಿಂದ ಸ್ವಸ್ಥ ಸಮಾಜ ನಿರ್ಮಾಣ ಆಗಬೇಕಾದರೆ ಎಲ್ಲರೂ ಯೋಗಾಭ್ಯಾಸ ಮಾಡಿ ಆರೋಗ್ಯವಂತ ಸಮಾಜವನ್ನು ನಿಮಿರ್ಸಿ, ಭವ್ಯ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಸೂರ್ಯ ನಮಸ್ಕಾರ, ತಾಡಾಸನ, ಉತ್ಕಟಾಸನ, ಪಾದಹಸ್ತಾಸನ, ತ್ರಿಕೋನಾಸನ, ಭದ್ರಾಸನ, ಭುಜಂಗಾಸನ, ವಜ್ರಾಸನ ಹಾಗೂ ಶವಾಸನಗಳನ್ನು ತಿಳಿಸಿಕೊಡಲಾಯಿತು.

ಶಾಲೆಯ ಪ್ರಾಚಾರ್ಯ ಎಂ. ಆರ್​. ಡೊಳ್ಳಿನ, ಉಪ ಪ್ರಾಚಾರ್ಯ ಅಕ್ಷಯ್​. ಜಿ., ಸುಶ್ಮಿತಾ ಯಕಜನವರ, ಪಂಪಣ್ಣ ರೊಡ್ಡಣ್ಣವರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net