ಮಧು ಮಕ್ಕಳಂತೆ ವೇಷಭೂಷಣ ತೊಟ್ಟು ಸಿಂಗಾರಗೊಂಡ ಪ್ರಶಿಕ್ಷಣಾರ್ಥಿಗಳು.

1741703321794
Published on
ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ಒಂದು ವಾರದಿಂದ ಹಮ್ಮಿಕೊಂಡ "ಫನ್ ವೀಕ್" ಕಾರ್ಯಕ್ರಮದ ಕೊನೆ ದಿನದಂದು  ಇಂದು ದಿನಾಂಕ: 11-03-2025  ರಂದು ಪ್ರಶಿಕ್ಷಣಾರ್ಥಿಗಳೆಲ್ಲರೂ ಮಧು ಮಕ್ಕಳ ತರಹ ಉಡುಗೆಯನ್ನು ಧರಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ತಂದರು. ಅದರಂತೆಯೇ ಎಲ್ಲಾ ಪ್ರಶಿಕ್ಷಣಾರ್ಥಿಗಳು ಮದುವೆ ಸಮಾರಂಭದಲ್ಲಿ ಮಾಡುವಂತಹ ತರಹ ತರಹದ ಅಡುಗೆಯನ್ನು ಮಾಡಿಕೊಂಡು ಬಂದು ಎಲ್ಲಾ ಅತಿಥಿ ಮಹನೀಯರಿಗೆ ಹಾಗೂ ಕಾಲೇಜಿನ ಮಹಾವಿದ್ಯಾಲಯದ ಸಿಬ್ಬಂದಿ ವರ್ಗದವರಿಗೆ ಉಣ ಬಡಿಸಿದರು.
ಈ ಕಾರ್ಯಕ್ರಮಕ್ಕೆ ವಿದ್ಯಾದಾನ ಸಮಿತಿಯ ಕ್ರಿಯಾಶೀಲ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ರವರ ಉಪಸ್ಥಿತಿ ಪ್ರಶಿಕ್ಷಣಾರ್ಥಿಗಳಿಗೆ ಇನ್ನಷ್ಟು ಸಂತಸ ತಂದಿತು ಮತ್ತು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ರವರು ಹಾಗೂ ಮಹಾವಿದ್ಯಾಲಯದ ಸಮಸ್ತ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು, ವಿದ್ಯಾದಾನ ಸಮಿತಿಯ ಅಂಗ ಸಂಸ್ಥೆಗಳಾದ ಜೆ. ಎನ್. ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಿ. ಎಲ್. ಚವಾಣ್ ಹಾಗೂ ಉಪನ್ಯಾಸಕರು, ವಿ.ಡಿ.ಎಸ್. ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ. ಎಸ್. ರಾಠೋಡ ಹಾಗೂ ಉಪನ್ಯಾಸಕರು, ವಿ . ಡಿ . ಎಸ್. ಬಾಲಕರ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕರಾದ ಶ್ರೀ ಕಿಶೋರಬಾಬು ನಾಗರಕಟ್ಟಿ, ವಿ.ಡಿ.ಎಸ್. ಬಾಲಕಿಯರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಆರ್. ಆರ್. ಜಾಲಿಹಾಳ ಹಾಗೂ ಶಿಕ್ಷಕರು, ವಿ.ಡಿ.ಎಸ್. ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ವಿ. ಹವಾಲ್ದಾರ ಹಾಗೂ ಸಿಬ್ಬಂದಿ ವರ್ಗದವರು, ವಿ.ಡಿ.ಎಸ್ ಕ್ಲಾಸಿಕ್ ಶಾಲೆಯ ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ, ಶ್ರೀಮತಿ ಶಕುಂತಲಾ ಪಾಟೀಲ ನರ್ಸಿಂಗ್ ಕಾಲೇಜಿನ ಚೇರ್ಮನ್ ಶ್ರೀ ಡಿ. ಬಿ. ಪಾಟೀಲ ಹಾಗೂ ಸ್ಪರ್ಶ ನರ್ಸಿಂಗ್ ಕಾಲೇಜಿನ ಆಡಳಿತ ಅಧಿಕಾರಿಗಳಾದ ಶ್ರೀ ರಂಗನಾಥ ಎಂ. ವಿ. ರವರು  ಪ್ರಶಿಕ್ಷಣಾರ್ಥಿಗಳು ಪ್ರೀತಿಯಿಂದ ಬಡಿಸಿದ ಸವಿಯಾದ ಭೋಜನವನ್ನು ಸವಿದು, ನಂತರ ಕಾರ್ಯಕ್ರಮವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿ ಕಾರ್ಯಕ್ರಮದ ರೂವಾರಿಗಳಾದ ಪ್ರಶಿಕ್ಷಣಾರ್ಥಿಗಳಿಗೆ ತಮ್ಮ ಪ್ರಶಂಸೆಯನ್ನು  ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಅತಿಥಿ ಮಹನೀಯರು, ಮಹಾವಿದ್ಯಾಲಯದ ಎಲ್ಲಾ ಉಪನ್ಯಾಸಕರು, ಅಂಗ ಸಂಸ್ಥೆಗಳ ಕೆಲವು ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಮಹಾವಿದ್ಯಾಲಯದ  ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net