ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ರವರು ಕನ್ನಡ ಮಾತೆ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಹೂ ಮಾಲೆ ಅರ್ಪಿಸಿ, ಪೂಜೆ ಸಲ್ಲಿಸಿ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರ ಮೂಲಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ರವರು ಕರ್ನಾಟಕ ಏಕೀಕರಣದ ಚಳುವಳಿಯಲ್ಲಿ ಭಾಗವಹಿಸಿದ ಮಹನೀಯರ ಹೋರಾಟದ ಇತಿಹಾಸವನ್ನು ತಿಳಿಯುತ್ತಾ ಅವರ ಆದರ್ಶ ಗುಣಗಳನ್ನು ಹಾಗೂ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಕರ್ನಾಟಕ ಏಕೀಕರಣ ನೆಲ, ಜಲ, ಸಂಸ್ಕೃತಿ, ಸಾಹಿತ್ಯ, ಸಂಗೀತ, ಕಲೆ ಹಾಗೂ ಭಾಷೆಯ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ತಮ್ಮ ಅನಿಸಿಕೆಯಲ್ಲಿ ವ್ಯಕ್ತಪಡಿಸಿದರು.
ಶಾಲೆಯ ಶಿಕ್ಷಕಿರಾದ ಶ್ರೀಮತಿ ಪಾರ್ವತಿ ಕಟ್ಟಿಮನಿ ರವರು ಕನ್ನಡ ರಾಜ್ಯೋತ್ಸವದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಾದ ಕು. ಅನುಶ್ರೀ ಹಿರೇಮಠ, ತನುಶ್ರೀ ಹಾದಿ ಹಾಗೂ ಶ್ರೇಯಾ ತಿಪ್ಪನ್ನವರ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕು. ವೈಭವ್ ತಿಪ್ಪನ್ನವರ್ ಹಾಗೂ ಸಂಗಡಿಗರು, ಫಾತೀಮಾಲು ಬಾನು ಸಂಗಂಕರ್ ಹಾಗೂ ಸಂಗಡಿಗರು ಕನ್ನಡ ನಾಡು ನುಡಿಯ ಕುರಿತು ಹಾಡಗಳನ್ನು ಹಾಡಿದರು.
ಶಾಲೆಯ ಕನ್ನಡ ಶಿಕ್ಷಕಿಯರಾದ ಶ್ರೀಮತಿ ರೇಣುಕಾ ವೆಂಕಟಾಪುರ ನಿರೂಪಿಸಿದರು, ಶ್ರೀಮತಿ ವೀಣಾ ಹುಬ್ಬಳ್ಳಿ ಸ್ವಾಗತಿಸಿದರು. ಅಂಜುಮ್ ತಹಶೀಲ್ದಾರ ವಂದಿಸಿದರು. ಈ ಸಂದರ್ಭದಲ್ಲಿ ಶಾಲೆಯ ಹಿರಿಯ ಶಿಕ್ಷಕಿಯರಾದ ಶ್ರೀಮತಿ ಅಫೀಜಾ ಬೇಗಂ ಬಾಗಲಕೋಟೆ, ಶ್ರೀಮತಿ ಅರ್ಚನಾ ಗಿರಿತಿಮ್ಮಣ್ಣನ್ನವರ್, ಸಮಸ್ತ ಶಿಕ್ಷಕ/ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.