ಪರಿವರ್ತನೆ ಪ್ರತಿಯೊಬ್ಬರಲ್ಲೂ ಅತ್ಯಾವಶ್ಯಕ" - ಡಾ. ಗಂಗೂಬಾಯಿ ಪವಾರ.

19GDG03
Published on

ಗದಗ:  ನಗರದ ಪ್ರತಿಷ್ಠಿತ ವಿದ್ಯಾದಾನ ಸಮಿತಿಯ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ: 17-10-2024 ರಂದು ಭಾರತದ ಮೊಟ್ಟ ಮೊದಲ ಮಹಾಕಾವ್ಯ "ರಾಮಾಯಣ" ರಚಿಸಿದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ರವರು ಮಾತನಾಡಿ,ಮೊದಲನೆಯದಾಗಿ ಎಲ್ಲರಿಗೂ ಮಹರ್ಷಿ ವಾಲ್ಮೀಕಿಯವರ ಜಯಂತಿಯ ಶುಭಾಶಯಗಳನ್ನು ತಿಳಿಸಿದರು. ನಂತರ ಮಹರ್ಷಿ ವಾಲ್ಮೀಕಿ ಅವರ ಜೀವನದಲ್ಲಿ ಆದ ಬದಲಾವಣೆ ಎಲ್ಲರಿಗೂ ಸ್ಪೂರ್ತಿಯಾಗಬೇಕು ಮತ್ತು ಪರಿವರ್ತನೆ ಪ್ರತಿಯೊಬ್ಬರಲ್ಲೂ ಅತಿ ಅವಶ್ಯಕ.

ಸತ್ಯ, ಶಾಂತಿ, ಸಹನೆ, ಇವು ಪರಿವರ್ತನೆಯ ಹಂತದಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಮತ್ತು ನಾವು ಮಾಡಿದ ಪಾಪ ಪುಣ್ಯಗಳಿಗೆ ನಾವೇ ಹೊಣೆಗಾರರು ಎಂದು ತಿಳಿಸಿದರು. ಮತ್ತು ಮಹರ್ಷಿ ವಾಲ್ಮೀಕಿ ಅವರು ಬರೆದಿರುವ ರಾಮಾಯಣದಲ್ಲಿರುವ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು. 

ಈ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಯಾದ ಬಸವರಾಜ ಮೂದ್ಲಗುಂದಿ ಅವರು ಮಾತನಾಡಿ ಮಹರ್ಷಿ ವಾಲ್ಮೀಕಿ ಅವರು "ರತ್ನಾಕರನಿಂದ ವಾಲ್ಮೀಕಿಯಾದ" ಕಥೆಯನ್ನು ಸವಿವರವಾಗಿ ತಿಳಿಸಿದರು. ಅದೇ ರೀತಿಯಾಗಿ ಪ್ರಶಿಕ್ಷಣಾರ್ಥಿಯಾದ ವೀಣಾ ವಿಜಾಪುರ ಅವರು ಮಹರ್ಷಿ ವಾಲ್ಮೀಕಿ ಜಯಂತಿ ಕುರಿತು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ವಿ. ಪಿ. ಪಾಟೀಲ, ಶ್ರೀ ಎನ್. ಜಿ. ಚನ್ನಪ್ಪಗೌಡರ, ಶ್ರೀ ಬಸವರಾಜ ಕರಬಿಷ್ಟಿ, ಶ್ರೀ ಎಸ್. ವೈ. ಕಠಾರಿ ಹಾಗೂ ಶ್ರೀ ಶಶಿಧರ ಹೊಸಳ್ಳಿ ಅವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಪ್ರಶಿಕ್ಷಣಾರ್ಥಿಯಾದ ಆಫ್ರೀನ್ ಹೊಸಳ್ಳಿ ಅವರು ನಿರೂಪಿಸಿದರು ಮತ್ತು ಬೃಂದಾ ಹಾಗೂ ಮೇಘನಾ ಅವರು ಪ್ರಾರ್ಥನಾ ಗೀತೆ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net