ಸಮ ಸಮಾಜದ ನಿರ್ಮಾಣಕ್ಕಾಗಿ ಶಿಕ್ಷಕರು ದೀಪ ಸ್ತಂಭವಾಗಬೇಕು : ಡಾ. ನಿಜಲಿಂಗಪ್ಪ ಮಟ್ಟಿಹಾಳ

05GDG03
Published on

ವಿಜಯವಾಣಿ ಸುದ್ದಿಜಾಲ, ಗದಗ
ಸಮಾಜದಲ್ಲಿ ಇರುವ ಮೇಲು-ಕೀಳು, ಶ್ರೀಮಂತ- ಬಡವ, ಸ್ತ್ರೀ ಪುರುಷ ಎನ್ನುವ ತಾರತಮ್ಯವನ್ನು ಹೋಗಲಾಡಿಸಿ ಸಮ ಸಮಾಜವನ್ನು ಕಟ್ಟುವ ಕಾರ್ಯವನ್ನು ಶಿಕ್ಷಕರು ದೀಪ ಸ್ತಂಭಗಳಾಗಿ ಮಾಡುವುದು ಪ್ರಸ್ತುತ ಸಮಾಜಕ್ಕೆ ಅವಶ್ಯಕತೆ ಇದೆ ಎಂದು ಕವಿವಿ ಮೌಲ್ಯಮಾಪನ ವಿಭಾಗದ ಕುಲಸಚಿ ಡಾ. ನಿಜಲಿಂಗಪ್ಪ ಮಟ್ಟಿಹಾಳ ಹೇಳಿದರು.
ನಗರದ ವಿಡಿಎಸ್​ ಶಿಕ್ಷಣ ಸಂಸ್ಥೆಯಲ್ಲಿ ವಾಷಿರ್ಕ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ದೇಶ ಅನೇಕ ವಿಚಾರದಲ್ಲಿ ಒಡೆದು ಹೋಗಿದೆ. ಅದನ್ನು ಒಂದುಗೂಡಿಸಿ ಒಂದೇ ಭಾರತವನ್ನು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಪಿ. ಎಚ್​. ಕಡಿವಾಳ ಹಾಗೂ ರಾಷ್ಟ್ರಮಟ್ಟದ ದೃಶ್ಯಕಲಾ ಚಿಂತನಕಾರ ಪುರಸ್ಕಾರ ಪಡೆದ ವಿಡಿಎಸ್​ ಕ್ಲಾಸಿಕ್​ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಎಂ. ಆರ್​. ಡೊಳ್ಳಿನ ಅವರನ್ನು ಸನ್ಮಾನಿಸಲಾಯಿತು.
ಶ್ರೀನಿವಾಸ ಹುಯೀಲಗೊಳ, ಡಾ. ಗಂಗೂಬಾಯಿ ಪವಾರ, ದತ್ತಪ್ರಸನ್ನ ಪಾಟೀಲ, ವಿ. ಪಿ. ಪಾಟೀಲ, ಬಿ. ಬಿ. ಹೊಳಗುಂದಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net