ಶಿಕ್ಷಕ ವೃತ್ತಿ ಪವಿತ್ರವಾದದ್ದು - ಡಾ. ಗಂಗೂಬಾಯಿ ಪವಾರ.

IMG-20250908-WA0091
Published on
ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ
ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ನಡೆದ ಶಿಕ್ಷಕರ ದಿನಾಚರಣೆಯನ್ನು  ಅದ್ದೂರಿಯಾಗಿ ಆಚರಿಸಲಾಯಿತು. ಪ್ರಶಿಕ್ಷಣಾರ್ಥಿಗಳು ಮತ್ತು ಎಲ್ಲ ಉಪನ್ಯಾಸಕರು ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಹೂ ಮಾಲೆ ಅರ್ಪಿಸಿ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷರು ಹಾಗು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ಅವರು  ಶಿಕ್ಷಕ ವೃತ್ತಿ ಎಷ್ಟೊಂದು ಪವಿತ್ರವಾದ ಹಾಗೂ ಜವಾಬ್ದಾರಿಯುತ ವೃತ್ತಿ ಎಂಬುದನ್ನು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು. ಭಾರತದ ದ್ವಿತೀಯ ರಾಷ್ಟ್ರಪತಿ, ತತ್ವಜ್ಞಾನಿ, ಶಿಕ್ಷಣ ತಜ್ಞರು ಹಾಗೂ ಮಹಾನ್ ಗುರುಗಳಾದ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಸರಳ ಜೀವನ, ಅವರು ಶಿಕ್ಷಣದ ಮೇಲೆ ಇಟ್ಟ ಅಪಾರ ಪ್ರೀತಿಯನ್ನು ಸ್ಮರಿಸಿದರು. ಇಂದು ನಾವು ನಮಗೆ ಕಲಿಸಿದ ಎಲ್ಲ ಗುರುಗಳನ್ನು ಸ್ಮರಿಸುವ, ಗೌರವಿಸುವ, ಕೃತಜ್ಞತೆ ಸಲ್ಲಿಸುವ ದಿನವಾಗಿದೆ.
 ಶಿಕ್ಷಕರನ್ನು ತಯಾರಿಸುವ ನಮ್ಮ ಬಿ. ಎಡ್. ಮಹಾವಿದ್ಯಾಲಯದ ಜವಾಬ್ದಾರಿ ಅತ್ಯಂತ ಮಹತ್ವಪೂರ್ಣವಾಗಿರುತ್ತದೆ ಆದ್ದರಿಂದ ಒಮ್ಮೆ ನಮಗೆ ಹೆಮ್ಮೆ ಎನಿಸುತ್ತದೆ, ಒಮ್ಮೊಮ್ಮೆ ಉತ್ತಮ ಶಿಕ್ಷಕರನ್ನು ನಿರ್ಮಾಣ ಮಾಡುವ ಇಂದಿನ ಸ್ಪರ್ಧಾತ್ಮಕ ಹಾಗೂ ಒತ್ತಡದ ಸ್ಥಿತಿಯಲ್ಲಿದ್ದ ಇಂದಿನ ವಾತಾವರಣದಲ್ಲಿ ಅದು ಸಾಧ್ಯವೇ ಎಂಬ ಪ್ರಶ್ನೆಯು ಕಾಡುತ್ತದೆ.
 ಆದ್ದರಿಂದ ತಾವೆಲ್ಲರೂ ಅಧ್ಯಯನಶೀಲರಾಗಿ ಸಮಯಪ್ರಜ್ಞೆಯಿಂದ ತಮ್ಮ ಶಿಕ್ಷಕ ವೃತ್ತಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಮನಸ್ಪೂರ್ವಕವಾಗಿ ಕೈಗೊಳ್ಳಬೇಕೆಂದು ಉತ್ತಮ ಸಂಸ್ಕಾರ ನೀಡುವುದರೊಂದಿಗೆ ವಿದ್ಯಾರ್ಥಿಗಳ ಅಂಧಕಾರದ ಕತ್ತಲೆಯನ್ನು ಕಳೆದು ದೀಪದಂತೆ ಪ್ರಜ್ವಲಿಸುವ ಜೀವನ ನಿರ್ಮಾಣ ಮಾಡಬೇಕೆಂದು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ಶ್ರೀ ವಿ. ಬಿ. ತಾಳಿ ಅವರು ಮಾತನಾಡಿ ಒಳ್ಳೆಯ ಶಿಕ್ಷಕ ಆಗುವುದು ಹೇಗೆ, ವಿದ್ಯಾರ್ಥಿಗಳಿಗೆ ಯಾವ ರೀತಿ ಪಾಠವನ್ನು ಬೋಧಿಸಬೇಕು, ಗುರುಗಳು ದೇವರಿಗೆ ಸಮಾನ, ಶಿಕ್ಷಕರು ಕೇವಲ ಪಾಠ ಮಾಡಲು ಬಂದವರಲ್ಲ. ಅವರು ನಮ್ಮ ಜೀವನದ ದಾರಿದೀಪ ಎಂದು ಹೇಳಿದರು. ಶ್ರೀ ವಿ. ಪಿ. ಪಾಟೀಲ ಅವರು ಸಂಸ್ಕೃತದ ಶ್ಲೋಕದ ಮೂಲಕ ಗುರುವಿನ ಮಹತ್ವವನ್ನು, ಗುರುಗಳು  ನಮಗೆ ತೋಚದ ದಾರಿಯನ್ನು ತೋರಿಸುತ್ತಾರೆ, ಶಿಷ್ಯನಿಗೆ ಜ್ಞಾನ ಮತ್ತು ಶ್ರದ್ಧೆಯನ್ನು ಬೆಳೆಸುತ್ತಾರೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರೊ. ಎನ್. ಜಿ. ಚನ್ನಪ್ಪಗೌಡರ ಅವರು ಮನದಲ್ಲಿ ಗದುಗಿನ ಬೀ. ಜಿ.ಅಣ್ಣಿಗೇರಿ ಗುರುಗಳನ್ನು ನೆನೆಯುತ್ತಾ ಅವರು ಮಕ್ಕಳ ಮೇಲೆ ಇಟ್ಟ ಪ್ರೀತಿ, ಅವರು ಬೋಧನೆ ಮಾಡುತ್ತಿದ್ದ ರೀತಿಯನ್ನು ಹೇಳಿದರು ಹಾಗೂ ಗುರುಗಳ ಶ್ರೇಷ್ಠತೆಯನ್ನು ಮತ್ತು ಅವರು ವಿದ್ಯಾರ್ಥಿಗಳ ಜೀವನದಲ್ಲಿ ಮಾಡುವ ಅಮೂಲ್ಯ ಪಾತ್ರವನ್ನು ಪ್ರಶಿಕ್ಷಣಾರ್ಥಿಗಳಿಗೆ ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಈ  ಸಂದರ್ಭದಲ್ಲಿ  ಹಲವಾರು ಪ್ರಶಿಕ್ಷಣಾರ್ಥಿಗಳು ಶಿಕ್ಷಕರ ದಿನಾಚರಣೆಯ ಕುರಿತು ಮಾತನಾಡಿದರು, ಪ್ರಶಿಕ್ಷಣಾರ್ಥಿಗಳಾದ ವೈಷ್ಣವಿ ಪ್ರಾರ್ಥನಾ ಗೀತೆ ಹಾಡಿದರು, ವೀಣಾ ವಿಜಾಪುರ ಸ್ವಾಗತಿಸಿದರು, ಲಕ್ಷ್ಮಿಬಾಯಿ ನಿರೂಪಿಸಿದರು, ಬಸವರಾಜ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net