ಪ್ರಶಿಕ್ಷಣಾರ್ಥಿಗಳ ನಿಕಟ ಸೇವಾ ತರಬೇತಿ ಮುಕ್ತಾಯ ಸಮಾರಂಭ.

IMG-20250731-WA0037
Published on
ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ  ಶಾಲೆಯಲ್ಲಿ ಬಿ. ಎಡ್. ಪ್ರಶಿಕ್ಷಣಾರ್ಥಿಗಳ 45 ದಿನಗಳ ನಿಕಟ ಸೇವಾ ಪೂರ್ವ ತರಬೇತಿ ಮುಕ್ತಾಯ ಸಮಾರಂಭವನ್ನು ಆಯೋಜಿಸಲಾಯಿತು.
 ಶಾಲೆಯ ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಮಾತನಾಡಿ ಬಿ. ಈಡಿ. ಪ್ರಶಿಕ್ಷಣಾರ್ಥಿಗಳಿಗೆ ಶಾಲೆಯ ಉಪ ಪ್ರಾಚಾರ್ಯರು, ಸಹಶಿಕ್ಷಕರು ಉತ್ತಮವಾದ  ಮಾರ್ಗದರ್ಶನ ಹಾಗೂ ಸಲಹೆ ಸೂಚನೆ ನೀಡಿದ್ದಾರೆ. ಇಲ್ಲಿಯ ಮಕ್ಕಳು ಕೂಡ ಅಭ್ಯಾಸದ ಜೊತೆ ಸಹಕಾರ ನೀಡಿದ್ದಾರೆ, ಪ್ರಶಿಕ್ಷಣಾರ್ಥಿಗಳಿಂದ 45 ದಿನಗಳ ಕಾಲ ನಮ್ಮ ಮಕ್ಕಳಿಗೆ ಉತ್ತಮ ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ಕೈಗೊಂಡು ಕಲಿಕಾ ಬಲವರ್ಧನೆಗೆ ಶಕ್ತಿ ತುಂಬಿದ್ದಾರೆ. ಹೀಗಾಗಿ ನಮ್ಮ ಪ್ರಶಿಕ್ಷಣಾರ್ಥಿಗಳಿಗೆ  ಉತ್ತಮವಾದ ತರಬೇತಿಯಾಗಿದೆ ಎಂದು ಹೇಳಿದರು.
 ಶಾಲೆಯ ಉಪ ಪ್ರಾಚಾರ್ಯರಾದ ಶ್ರೀ ಅಕ್ಷಯ್. ಜಿ ರವರು ಮಾತನಾಡಿ ಪ್ರಶಿಕ್ಷಣಾರ್ಥಿಗಳು  ತಮ್ಮ ಬಿ. ಎಡ್ ಅಭ್ಯಾಸದ ಜೊತೆ TET ಮತ್ತು CET ಕುರಿತು ಅಭ್ಯಾಸವನ್ನು ಕೂಡ ಕೈಗೊಂಡು ತಮ್ಮ ಮುಂದಿನ ಉತ್ತಮ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕೆಂದು ಆಶಿಸಿದರು. ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಕವಿತಾ ಹೊಸಕೇರಿ ಹಾಗೂ ವಿದ್ಯಾರ್ಥಿನಿ ಅಮೃತಾ ತಡಸದ  ರವರು  ಪ್ರಶಿಕ್ಷಣಾರ್ಥಿಗಳ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ವಿಡಿಎಸ್ ಶ್ರೀಮತಿ ಎಂ. ಭೀ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿ ಶ್ರೀಮತಿ ಅನಿತಾ ಅಂಗಡಿ ರವರು  ತಮ್ಮ ಸೇವಾ ತರಬೇತಿಯ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕರಾದ ಶ್ರೀ ಪಂಪಣ್ಣ ರೊಡ್ಡನವರ ನಿರೂಪಿಸಿ  ವಂದಿಸಿದರು. ಈ ಸಂದರ್ಭದಲ್ಲಿ  ಸಮಸ್ತ ಶಿಕ್ಷಕ/ಕಿಯರು, ಸಿಬ್ಬಂದಿ ವರ್ಗದವರು, ಪ್ರಶಿಕ್ಷಣಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net