ಕರಕುಶಲ ಕಲೆಗಳು ಪ್ರಯೋಜನ ಮೂಲ ಕಲಿಗಳಾಗಿದ್ದು ಇವು ಉಪ ಜೀವನಕ್ಕೆ ಆಧಾರವಾಗಿವೆ: ಪಿ. ಆರ್. ಅಡವಿ.

Oplus_131072
Oplus_131072
Published on
ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಭವನದಲ್ಲಿ ಭಾರತ ಸರ್ಕಾರ ಹ್ಯಾಂಡಿಕ್ರಾಫ್ಟ್ ಕಮಿಷನ್ , ಹ್ಯಾಂಡಿಕ್ರಾಫ್ಟ್ ಸರ್ವಿಸ್ ಸೆಂಟರ್, ಮಂಗಳೂರು ಹಾಗೂ ಆದರ್ಶ ಶಿಕ್ಷಣ ಸಂಸ್ಥೆಯ  ಶ್ರೀ ವಿ ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದಲ್ಲಿ ಮೂರು ದಿನಗಳ ಕ್ರಾಫ್ಟ್ ಡೆಮೊ ಸ್ಟೇಷನ್ ಹಾಗೂ ಅವೇರ್ನೆಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಪಿ  ಆರ್ ಅಡವಿಯವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯಲ್ಲಿ ಕರಕುಶಲ ಕಲೆಗಳಿಗೆ ವಿಶಿಷ್ಟ ಸ್ಥಾನವಿದೆ. ಕರಕುಶಲ ಎಂದರೆ ಮನುಷ್ಯನ ಹೃದಯ, ಬುದ್ಧಿ ಮತ್ತು ಕೈಗಳು ಏಕೀಭವಿಸಿ ತನ್ಮಯತೆಯಿಂದ ಕಾರ್ಯ ನಿರ್ವಹಿಸುವ ಅಪೂರ್ವ ಶ್ರಮದ ಪ್ರತಿಫಲ  ಕರಕುಶಲ ಕಲೆಯೆಂದರೆ ಮಕ್ಕಳ ಆಟಿಕೆ ಅಥವಾ ಮನರಂಜನೆಯ ವಸ್ತುಗಳ ತಯಾರಿಕೆ ಮಾತ್ರವಲ್ಲ ಮನುಷ್ಯನ ಅಗತ್ಯಗಳಿಗೆ ತಕ್ಕಂತೆ ರೂಪುಗೊಂಡ ಹಲವು ಬಗೆಯ ವಸ್ತುಗಳಿಗೆ ಕಲಾತ್ಮಕ ಮೆರುಗು ನೀಡುವ ಒಂದು ರೀತಿಯ ಧ್ಯಾನ ಅಂತಹ ಪರಿಪೂರ್ಣ ಜ್ಞಾನವಿರುವ ಸಂಪನ್ಮೂಲ ವ್ಯಕ್ತಿಗಳು ಇಂದು ಕಾರ್ಯಗಾರದಲ್ಲಿ ತರಬೇತಿ ನೀಡಲು ಆಗಮಿಸಿದ್ದಾರೆ ಅವರಿಗೆ ಸಂಸ್ಥೆ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು ಯುವಕರು ಇಂತಹ ಕಲೆಗಳನ್ನು ಹೆಚ್ಚು ತಮ್ಮ ಜೀವನದಲ್ಲಿ ಕಲಿಕೆಯೊಂದಿಗೆ ಅಳವಡಿಸಿಕೊಂಡು ಕಲಿಕೆಯೊಂದಿಗೆ ಗಳಿಕೆ ಕೂಡ ರೂಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತಿನಲ್ಲಿ ತಿಳಿಸಿ ಪ್ರತಿಯೊಬ್ಬರ ಉಪ ಜೀವನಕ್ಕೆ ಈ ಕಲೆಗಳು ಆಧಾರವಾಗಿವೆ ಎಂದು ತಮ್ಮ ಉದ್ಘಾಟನಾ ನುಡಿಗಳಲ್ಲಿ ಹಂಚಿಕೊಂಡರು.
  ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಆಗಮಿಸಿದ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ವೀರಯ್ಯಸ್ವಾಮಿ ಅವರು ಮಾತನಾಡಿ  ಕರಕುಶಲ ಕಲೆಗಳಲ್ಲಿ ಚಿತ್ರಕಲೆ, ಕುಂಭಕಲೆ, ಮರದ ಕೆತ್ತನೆ, ಕಲ್ಲು ಕೆತ್ತನೆ, ಲೋಹ ಶಿಲ್ಪ, ಆಭರಣಗಳ ತಯಾರಿಕೆ, ಮಣ್ಣಿನ ಮೂರ್ತಿ, ಮಡಕೆ-ಕುಡಿಕೆಗಳ ತಯಾರಿಕೆ, ದಂತ ಕೆತ್ತನೆ, ಹುದುಗು ಕಲೆ, ಜಾನಪದ ಗೊಂಬೆ, ಕೈಮಗ್ಗ, ಜವಳಿ, ಕಸೂತಿ ಕೆಲಸ, ಆಟಿಕೆ, ಕಂಬಳಿ ಮತ್ತು ಗುಡಾರಗಳ ನೇಯ್ಕೆ, ಬುಟ್ಟಿ, ಚಾಪೆಗಳ ಹೆಣಿಗೆ ಮೊದಲಾದ ನೂರಾರು ಕಲೆಗಳ ಬರುತ್ತವೆ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಅನೇಕ ಕರಕುಶಲ ಕಲೆಗಳು ಇದ್ದು ಈ ತರಬೇತಿಯ ಮೂಲಕ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಮ್ಮ ಮಾತುಗಳಲ್ಲಿ ಹಂಚಿಕೊಂಡರು.
    ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಧಾರವಾಡದ ಹ್ಯಾಂಡಿಕ್ರಾಫ್ಟ್ ಸರ್ವಿಸ್ ಸೆಂಟರ್ ಇನ್ ಮುಖ್ಯಸ್ಥರಾದ ಶ್ರೀ ಸುಶಾಂತ್ ಭೋನಿ ರವರು ಮಾತನಾಡಿ ಒಟ್ಟು ಮೂರು ದಿನಗಳ ಕಾಲ  ತರಬೇತಿ ಕಾರ್ಯಗಾರ ನಡೆಯುತ್ತಿದ್ದು ರಾಜ್ಯದ ವಿವಿಧ ಮೂಲೆಗಳಿಂದ ಸಂಪನ್ಮೂಲ ವ್ಯಕ್ತಿಗಳು ಈ ಒಂದು ಕಾರ್ಯಗಾರದಲ್ಲಿ ಭಾಗವಹಿಸುತ್ತಾಯಿದ್ದು ತಾವು ಇದರ ಉಪಯೋಗವನ್ನು ಪಡೆದುಕೊಳ್ಳಿ ಎಂದು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದರು.
      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಉಪ ಪ್ರಾಚಾರ್ಯರು ಹಾಗೂ ಐಕ್ಯೂ ಏ ಸಿ ಕೋ ಆರ್ಡಿನೇಟರ್ ಡಾ. ವಿ. ಟಿ ನಾಯ್ಕರ್ ವಹಿಸಿಕೊಂಡಿದ್ದರು. ವೇದಿಕೆ ಮೇಲೆ ಸಂಸ್ಥೆಯ ಬಿ.ಬಿ.ಎ ಹಾಗೂ ಬಿ.ಸಿ.ಎ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ ಲಿಂಗರಾಜ್ ರಶ್ಮಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಬಿ.ಪಿ ಜೈನರ್, ವಿದ್ಯಾರ್ಥಿ ಮುಖಂಡನಾದ ಕು ಜನಕ ರೆಡ್ಡಿ ಎಚ್, ಕು ಮನೋಜ್ ದ ದಳಬಂಜನ್, ಕು. ಆದರ್ಶ್ ಅಕ್ಕಿ, ಕು ಅಭಿಷೇಕ್ ಮಾಗಡಿ  ಎನ್ ಎಸ್ ಎಸ್  ವಿಭಾಗದ ಸ್ವಯಂ ಸೇವಕ ಸೇವಕರು ಮಹಾವಿದ್ಯಾಲಯದ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net