

ಗದಗ: ಇತ್ತೀಚೆಗೆ ಹುಲಕೋಟಿಯ ರಾಜರಾಜೇಶ್ವರಿ ವಿದ್ಯಾನಿಕೇತನದಲ್ಲಿ ನಡೆದ ಎನ್.ಸಿ.ಸಿ. ಎ.ಟಿ.ಸಿ.ಕ್ಯಾಂಪ್‌ನಲ್ಲಿ ಕೆಡೆಟ್‌ಗಳಿಗಾಗಿ ನಡೆದ ಗುಂಪು ಆಟಗಳ ವಿಭಾಗದಲ್ಲಿ ಖೋ ಖೋ ಆಟದಲ್ಲಿ ವಿದ್ಯಾದಾನ ಸಮಿತಿ ಬಾಲಕರ ಪ.ಪೂ.ಕಾಲೇಜಿನ ಕೆಡೆಟ್‌ಗಳು ದ್ವಿತೀಯ ಸ್ಥಾನ ಪಡೆದು ಸಾಧನೆ ಗೈದು ಉತ್ತಮ ಪ್ರದರ್ಶನ ನೀಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಹಾಗೂ ಸಾಮೂಹಿಕ ಗಾಯನ, ಸಾಮೂಹಿಕ ನೃತ್ಯ, ಫೈರಿಂಗ್, ಮ್ಯಾಪ್ ರೀಡಿಂಗ್, ವಾಲಿಬಾಲ್ ಮುಂತಾದ ಸ್ಪರ್ಧೇಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಉತ್ತಮ ಸಾಧನೆ ತೋರಿದ ಕೆಡೆಟ್‌ಗಳಿಗೆ ಹಾಗೂ ಈ ಎಲ್ಲ ಕ್ರೀಡಾಪಟುಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿದ ಕ್ಯಾಪ್ಟನ್ ಪ್ರಾ. ಡಾ.ಬಿ.ಎಸ್.ರಾಠೋಡ, ವಿದ್ಯಾದಾನ ಸಮಿತಿಯ ಅಧ್ಯಕ್ಷರಾದ ಡಿ.ಬಿ.ಹುಯಿಲಗೋಳ ಕಾರ್ಯದರ್ಶಿಗಳಾದ ಶ್ರೀನಿವಾಸ ಹುಯಿಲಗೋಳ, ಕೋಶಾಧ್ಯಕ್ಷರಾದ ಎನ್.ಬಿ.ಕಳಸಾಪೂರ, ಬಾಲಕರ ಪ.ಪೂ. ಕಾಲೇಜು ಪ್ರಾಚಾರ್ಯರಾದ ಎಂ.ಸಿ. ಕಟ್ಟಿಮನಿ ಹಾಗೂ ವಿ.ದಾ.ಸ ಬಾಲಕರ ಹಾಗೂ ಬಾಲಕಿಯರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.