

ಗದಗ: ಇತ್ತೀಚೆಗೆ ನಡೆದ 2025-26ನೇ ಸಾಲಿನ ಗದಗ ತಾಲೂಕಾ ಮಟ್ಟದ ‘ಬಿ’ ವಲಯದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವು ಹೊಸಳ್ಳಿಯ ಬೂದಿಶ್ವರ ಮಹಾಸ್ವಾಮಿಗಳವರ ಪ.ಪೂ. ಕಾಲೇಜಿನಲ್ಲಿ ನೆರವೇರಿತು. ಇದರಲ್ಲಿ ವಯಕ್ತಿಕ ಹಾಗೂ ಗುಂಪು ಆಟೋಟಗಳಲ್ಲಿ ವಿದ್ಯಾದಾನ ಸಮಿತಿ ಬಾಲಕಿಯರ ಪ.ಪೂ ಕಾಲೇಜಿನ ವಿದ್ಯಾರ್ಥಿನಿಯರು ಉತ್ತಮ ಸಾಧನೆ ತೋರಿದ್ದಾರೆ. ಹಾಗೂ ಹಲವಾರು ಕ್ರೀಡಾಪಟುಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಕ್ಕುಬಾಯಿ ಲಮಾಣಿ ಶಾಟ್ ಪೂಟ್‌ನಲ್ಲಿ ಪ್ರಥಮ ಸ್ಥಾನ, ಹಾಗೂ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ, ಸಮರಿನ್ ನದಾಫ 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಹಾಗೂ ಹೈಜಂಪ್‌ನಲ್ಲಿ ಪ್ರಥಮ ಸ್ಥಾನ, ಶೈಲಾ ಲಮಾಣಿ ಲಾಂಗ್‌ಜAಪ್‌ನಲ್ಲಿ ದ್ವಿತೀಯ ಸ್ಥಾನ, ಆಫೀನ್ ಬಾಬುಖಾನವರ 800 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಈ ಕ್ರೀಡಾಪಟುಗಳು ಉತ್ತಮಸಾಧನೆ ತೋರಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ವಿಭಾಗದ ಗುಂಪು ಆಟಗಳಲ್ಲಿ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇದರಲ್ಲಿ ತಂಡದ ಕ್ಯಾಪ್ಟನ್ ಸಕ್ಕುಬಾಯಿ ಲಮಾಣಿ, ಕ್ರೀಡಾಪಟುಗಳಾದ ತನುಜಾ ಹುಚ್ಚನಗೌಡರ, ಪೂಜಾ ಲಮಾಣಿ, ವಿಮಲಾ ಪವಾರ, ಸಮರಿನ್ ನದಾಫ, ಮನ್ಸೂರಾ ಒಂಟಿ, ಭಾಗೀರತಿ ಪುರದ, ರಕ್ಷಿತಾ ಲಮಾಣಿ, ಸುಜಾತಾ ಲಮಾಣಿ, ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು.
ಜೈಬುನಬಿ ರೋಣದ 3000 ಮೀಟರ್ ಓಟದಲ್ಲಿ ತೃತೀಯ ಸ್ಥಾನ, ವಂದನಾ ಕಮ್ಮಾರ ಜಾವಲಿನ್ ಥ್ರೋ ದಲ್ಲಿ ತೃತೀಯ ಸ್ಥಾನ, ಹಾಗೂ 4*100ಮೀಟರ್ ರಿಲೇ ಓಟದಲ್ಲಿ ತೃತೀಯ ಸ್ಥಾನ ಪಡೆದು ತಾಲೂಕಾ ಮಟ್ಟದ ಸ್ಪರ್ಧೇಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ತಾಲೂಕಾ ಮಟ್ಟದಲ್ಲಿ ಉತ್ತಮ ಸಾಧನೆ ತೋರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಈ ಎಲ್ಲ ಕ್ರೀಡಾಪಟುಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ಕ್ರೀಡಾ ವಿಭಾಗದ ಸಂಚಾಲಕರಾದ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕಿರಾದ ಅಶ್ವಿನಿ ಜಾಡರ, ಇವರಿಗೆ ವಿದ್ಯಾದಾನ ಸಮಿತಿಯ ಅಧ್ಯಕ್ಷರಾದ ಡಿ.ಬಿ.ಹುಯಿಲಗೋಳ ಕಾರ್ಯದರ್ಶಿಗಳಾದ ಶ್ರೀನಿವಾಸ ಹುಯಿಲಗೋಳ, ಪ.ಪೂ ಕಾಲೇಜಿನ ಪ್ರಾಚಾರ್ಯರಾದ ಡಾ.ಬಿ.ಎಸ್. ರಾಠೋಡ, ಉಪನ್ಯಾಸಕರಾದ ಡಾ.ದತ್ತಪ್ರಸನ್ನ ಪಾಟೀಲ, ಬಿ.ಬಿ.ಮಿರ್ಜಿ, ಪ್ರಶಾಂತ ಪಾಟೀಲ, ತೆಹಮೀಮ ನದಾಫ, ಹೇಮಂತ ದಳವಾಯಿ ಸಿಬ್ಬಂದಿ ವರ್ಗದವರಾದ ಸಮೀರ ಹಂದಿಗೋಳ, ಬಸವರಾಜ ಬಾರಕೇರ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.