Gadag: ಭಾರತೀಯ ಸಂಸ್ಕೃತಿಯ ಮೇಲೆ ರಾಮಾಯಣ ಮಹಾಕಾವ್ಯ ರಚಿಸಿದ ಮಹರ್ಷಿ ಶ್ರೀ ವಾಲ್ಮೀಕಿ ಅವರ ಪ್ರಭಾವ ಅಪಾರವಾಗಿದೆ ಎಂದು ಗದಗ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಅಧಿಕಾರಿಗಳಾದ ಶ್ಯಾಮ ಲಾಂಡ ಹೇಳಿದರು.
ಅವರು ವಿದ್ಯಾದಾನ ಸಮಿತಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗ ಸಂಯುಕ್ತ ಆಶ್ರಯದಲ್ಲಿ ನಡೆದ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ವಾಲ್ಮೀಕಿ ವಿರಾಚಿತ ರಾಮಾಯಣವು ಮುಂದೆ ಭಾರತದ ಅನೇಕ ಭಾಷೆಗಳಿಗೆ ಭಾಷಾಂತರಗೊಂಡು,ರೂಪ ತರಗೊಂಡು ಭಾರತೀಯ ಸಾಹಿತ್ಯ ಕಲೆ, ಶಿಲ್ಪ ಸಂಗೀತ ನೃತ್ಯದ ಮೇಲೆ ಅಪಾರ ಪ್ರಭಾವ ಬೀರಿದೆ ಎಂದು ಹೇಳಿದರು.
ಹಿರಿಯ ಉಪನ್ಯಾಸಕರಾದ ಡಾ. ದತ್ತಪ್ರಸನ್ನ ಪಾಟೀಲ ಮಹರ್ಷಿ ವಾಲ್ಮೀಕಿ ಅವರ ಸಾಧನೆ, ಬೋಧನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಆರ್. ಆರ್. ಜಾಲಿಹಾಳ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಪ್ರಶಾಂತ್ ಪಾಟೀಲ ನಿರೂಪಿಸಿ ವಂದಿಸಿದರು.
ಸಮಾರಂಭದಲ್ಲಿ ಉಪನ್ಯಾಸಕರಾದ ಬಿ.ಬಿ. ಮಿರ್ಜಿ, ಶಿಕ್ಷಕಿಯರಾದ ಶ್ರೀಮತಿ ಆರ್. ಎಂ. ಪಟ್ಟಣಶೆಟ್ಟಿ, ಶ್ರೀಮತಿ. ಬೇರಗೇರಿ, ವಾದಿರಾಜ್ ಪುರಾಣಿಕ, ಗಂಜಿ, ರಮೇಶ್ ಲಮಾಣಿ, ಶ್ರೀಮತಿ ದೇಶಪಾಂಡೆ, ಶ್ರೀಮತಿ ಮುರುಗಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.