

ಗದಗ: ಬುಧವಾರ ಬೆಳಗ್ಗಿನ ಜಾವ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕರ 9 ನೆಲೆಗಳನ್ನು ಭಾರತದ ಸೇನೆ ಧ್ವಂಸಗೊಳಿಸಿವ ಮೂಲಕ ಪಾಪಿ ಪಾಕಿಸ್ತಾನದ ಉಗ್ರರಿಗೆ ನಮ್ಮ ಹೆಮ್ಮೆಯ ಭಾರತೀಯ ತಕ್ಕ ಪಾಠ ಕಲಿಸಿದ್ದಾರೆ. ಭಾರತೀತರೆಲ್ಲರೂ ಯೋಧರ ಬೆಂಬಲವಾಗಿ ನಿಲ್ಲುತ್ತಾರೆ ಎಂದು ಬಿಜೆಪಿ ಮುಖಂಡ ವಸಂತ ಪಡಗದ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ತಿಂಗಳ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯದಿಂದ ತೆರಳಿದ್ದ ಕಾಶ್ಮೀರದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಡಿನ ದಾಳಿ ನಡೆಸಿ ಅಮಾಯಾಕ ನಾಗರಿಕರನ್ನು ಹತ್ಯೆಗೈದ ಉಗ್ರರಿಗೆ ಇಂದು ನಮ್ಮ ಯೋಧರು ನಡೆಸಿದ ಸಿಂದೂರ ಕಾರ್ಯಾಚರಣೆ ತಕ್ಕಪಾಠವಾಗಿದೆ. 9 ಉಗ್ರರ ಶಿಬಿರಗಳ ಧ್ವಂಸದಿಂದ 70 ಉಗ್ರರರನ್ನು ಸೆದೆಬಡೆಯಲಾಗಿದೆ. ಸರ್ಕಾರ ನಮ್ಮ ಯೋಧರಿಗೆ ಪಕ್ಷ ಭೇದ ಮರೆತು ಬೆಂಬಲ ನೀಡಬೇಕು ಎಂದು ಆಗ್ರಹಿಸಿದ್ದಾರೆ.