ಗದಗ ಉತ್ಸವದಲ್ಲಿ ಉದ್ಯಮಶೀಲತೆಯ ಕುರಿತು ಸಂವಾದ

12GDG04
Published on

ವಿಜಯವಾಣಿ ಸುದ್ದಿಜಾಲ ಗದಗ
ಯುವಕರು, ಯುವತಿಯರು ಅದರಲ್ಲೂ ವಿಶೇಷವಾಗಿ ಕೃಷಿ ಅಧ್ಯಯನ ಮಾಡಿದವರು, ಉನ್ನತ ಪದವಿ ಹೊಂದಿದವರು ಕೃಷಿಯ ಬಗ್ಗೆ ಆಸಕ್ತಿ ಹೊಂದಬೇಕು ಎಂದು ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಹೇಳಿದರು.
ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಸಯೋಗದಲ್ಲಿ ಮಂಗಳವಾರ ನಡೆದಿರುವ ಕೈಗಾರಿಕಾ ವಸ್ತು ಪ್ರದರ್ಶನ, ಗದಗ ಉತ್ಸವದಲ್ಲಿ ಮಹಿಳಾ ಟಕ ಏರ್ಪಡಿಸಿದ್ದ ಉದ್ಯಮಶೀಲತೆಯ ಕುರಿತು ಸಂವಾದವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಯಲ್ಲಿ ಹಲವು ನಷ್ಟ ಅನುಭವಿಸಿದ್ದೇನೆ. ಆತ್ಮಹತ್ಯೆಯ ಪ್ರಯತ್ನವೂ ವಿಲಗೊಂಡಿತು. ಕೊನೆಗೆ ಮಣ್ಣನ್ನು ನಂಬಿದೆ. ಭೂಮಿತಾಯಿ ಕೈಹಿಡಿದಳು. ಕೃಷಿ ಉತ್ಪನ್ನವನ್ನು ಈಗ ಹೊರ ರಾಜ್ಯಕ್ಕೂ ಮಾರಾಟ ಮಾಡುತ್ತಿದ್ದೇನೆ. ಲಾಬದಾಯಕವಾಗಿ ನಡಿದಿದೆ. ಕೃಷಿ ಕೈಬಿಡುವುದಿಲ್ಲ ಎಂಬುದಕ್ಕೆ ನಾನೇ ಸಾ ಎಂದರು.
ಅಧ್ಯತೆ ವಹಿಸಿದ್ದ ಜಯಶ್ರೀ ತಾತನಗೌಡ ಪಾಟೀಲ ಮಾತನಾಡಿ, ಸಾಧಕ ಮಹಿಳೆ ಕವಿತಾ ಮಿಶ್ರಾ ನಮಗಿಂದು ಆದರ್ಶ ಮತ್ತು ಸ್ಪೂತಿರ್ಯಾಗಿದ್ದಾರೆ. ನಮ್ಮ ಮಹಿಳೆಯರೂ ಸಹ ಇದೇ ರೀತಿಯ ಸಾಧನೆ ಮಾಡಲಿ ಎಂದರು.
ಪ್ರಕಾಶ ಹುಲಕೋಟಿ, ಪಂಚಾರಿ ಹೊಸಮನಿ, ಸಿ.ಎಚ್​.ಅಂಗಡಿ, ಶಿವಪುತ್ರಪ್ಪ ಹರಿಜನ, ಮದುಸೂಧನ ಪುಣೇಕರ, ಚಂದ್ರು ಬಾಳಿಹಳ್ಳಿಮಠ, ಶೋಭಾ ಸಂಶಿಮಠ, ನೀಲಾಂಬಿಕಾ ತೋಟದ, ವೀಣಾ ಪೂತ್ನೀಸ್​ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net