ಗದಗ : ತಾಲೂಕಿನ ಶಿರುಂಜ ಗ್ರಾಮದಲ್ಲಿ ೯ನೇ ತರಗತಿ ವಿದ್ಯಾರ್ಥಿ ಆಸಿಫ್ ಶೇಖ್ ಸಾಬ್ ನದಾಫ್ ಇತ್ತೀಚೆಗೆ ಕೋಲಾರದಲ್ಲಿ ಜರುಗಿದ ಪ್ರೌಢಶಾಲಾ ವಿಭಾಗದ ಅಥ್ಲೆಟಿಕ್ಸ್ ನಲ್ಲಿ ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಆಯ್ಕೆ ಆದ ವಿದ್ಯಾರ್ಥಿನಿಗೆ ನಗರದ ಉಸಿರು ಫೌಂಡೇಶನ್ ಅಧ್ಯಕ್ಷ, ಬಿಜೆಪಿ ಮುಖಂಡ ಶರಣ್ ಪಾಟೀಲ ಅವರು ಇತ್ತೀಚೆಗೆ ಶಿರುಂಜ ಗ್ರಾಮದಲ್ಲಿ ಅಭಿನಂದಿಸಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಅವರು, ಗದಗ ಜಿಲ್ಲೆ ಅಸ್ತಿತ್ವಕ್ಕೆ ಬಂದು ೨೫ ವರ್ಷಗಳಾದರೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಈ ವರೆಗೂ ಯಾರೂ ರಾಷ್ಟೀಯ ಮಟ್ಟಕ್ಕೆ ಆಯ್ಕೆಯಾದ ನಿದರ್ಶನಗಳು ಇರಲಿಲ್ಲ, ಆದರೆ ಈ ಪುಟ್ಟಗ್ರಾಮದ ಬಾಲಕ ಆಸಿಫ್ ಶೇಖ್ ಸಾಬ್ ತ್ರಿವಿಧ ಜಿಗಿತದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಯಾಗುವ ಮೂಲಕ ಗದಗ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಗದಗ ಜಿಲ್ಲೆಯ ಸಂಘ-ಸಂಸ್ಥೆಗಳು ಹಾಗೂ ಇಲ್ಲಿನ ಜನಪ್ರತಿನಿಧಿಗಳು ಇಂಥ ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಸುಭಾಷಚಂದ್ರ ಗುಡ್ಡದ, ಬಸವಣ್ಣಪ್ಪ ಹುಡೇದ, ಬಸವರಾಜ ಬೆಂತೂರ, ಮಲ್ಲಪ್ಪ ಉಂಡಾಡಿ, ನಾಗಪ್ಪ ಹುಡೇದ, ಚಂದ್ರಕಾಂತ ಕಪ್ಪತನವರ, ಚನ್ನವೀರಪ್ಪ ಹಡಪದ, ಮಹದೇವಪ್ಪ ಪ್ಯಾಟಿ, ಮಂಜುನಾಥ ಗುಡ್ಡಣ್ಣವರ, ಶಿವಪ್ಪ ಹುಡೇದ, ಅಜಯ್ ಗುಡ್ಡದ, ಶರಣಪ್ಪ ಡಂಬ್ರಳ್ಳಿ, ನವೀನ ಹುಯಿಲಗೋಳ, ಮೈಲಾರಪ್ಪ ಹುಯಿಲಗೋಳ, ನೀಲಪ್ಪ ಮಹಾಲಿಂಗಪುರ, ಶಿವು ಕೋಳಿವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.