

ಗದಗ: ಸಂಗೀತ ಮನಸ್ಸಿಗೆ ಸಂತೋಷ ನೀಡುವ ಕಲೆಯಾಗಿದ್ದು ನಿವೃತ್ತಿ ನಂತರ ಸಂಗೀತವನ್ನು ಒಂದು ಹವ್ಯಾಸವಾಗಿ ಹಾಡುವ ರುಡಿಯನ್ನು ಬೆಳೆಸಿಕೊಂಡಿರುತ್ತೇನೆ ಎಂದು ಹವ್ಯಾಸಿ ಸಂಗೀತಗಾರ ಜಿ ಎಸ್ ಸಜ್ಜನ್ ಅವರು ಹೇಳಿದರು. ವಿವೇಕಾನಂದ ಬಡಾವಣೆಯ ಹಾಗೂ ನಿಸರ್ಗ ಬಣಾವಣೆಯ ವಾಯು ವಿಹಾರ ಬಳಗದಿಂದ ಏರ್ಪಡಿಸಿದ್ದ ಉದ್ಯಾನವನದಲ್ಲಿ ಉದಯ ಸಂಗೀತ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಹಾಡಿ ಅವರು ಮಾತನಾಡುತ್ತಾ ಸಂಗೀತವು ದ್ವೇಷ ಅಸೂಯೆ ವೈಶಮ್ಯವನ್ನು ಹೋಗಲಾಡಿಸಿ ಪ್ರೀತಿ ಪ್ರೇಮ ಮಧುರ ಭಾವನೆಯನ್ನು ಬೆಳೆಸುವ ಶಕ್ತಿಯನ್ನು ಸಂಗೀತ ಹೊಂದಿದೆ ಎಂದು ಅವರು ಹೇಳಿದರು.