ತುಳಸಿ ಗಿಡಗಳು ಪರಿಶುದ್ಧ ಆಮ್ಲಜನಕ ನೀಡುತ್ತವೆ: ವೀರೇಶ್ವರ ಸ್ವಾಮೀಜಿ

11GDG02
Published on

ವಿಜಯವಾಣಿ ಸುದ್ದಿಜಾಲ ಗದಗ

ತುಳಸಿ ಸಸ್ಯ ಅತ್ಯಂತ ಪವಿತ್ರವಾದ ಗಿಡ. ತುಳಸಿ ಗಿಡಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಅಪಾರ ಔಷಧೀಯ ಗುಣಗಳನ್ನು ಒಳ ಗೊಂಡಿರುವುದರಿಂದ ನಮ್ಮ ಪೂರ್ವಜರು ತುಳಸಿ ಗಿಡಕ್ಕೆ ಪೂಜ್ಯನಿಯ ಸ್ಥಾನಮಾನ ನೀಡಿ, ಆರಾಧಿಸುತ್ತ ಬಂದಿದ್ದಾರೆ ಎಂದು ನರಸಾಪೂರ ಅನ್ನದಾನೀಶ್ವರ ಶಾಖಾ ಮಠದ ವೀರೇಶ್ವರ ಸ್ವಾಮೀಜಿ ಹೇಳಿದರು.

ನಗರದ ಟೆಂಗಿನಕಾಯಿ ಬಜಾರದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೃ ಭಾರತಿ ಸೇವಾ ಸಮಿತಿಯಿಂದ ಸೋಮವಾರ ಏರ್ಪಡಿಸಿದ್ದ ತುಳಸಿ ಸಸಿಗಳ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ತುಳಸಿ ಗಿಡಗಳು ಪರಿಶುದ್ಧ ಆಮ್ಲಜನಕ ನೀಡುತ್ತವೆ. ಬದಲಾದ ಸನ್ನಿವೇಶದಲ್ಲಿ ಪರಿಸರ ಹಾಳಾಗುತ್ತಿದೆ. ಅರಣ್ಯ ನಾಶದಿಂದ ಮನುಷ್ಯನ ಜೀವನ ಆತಂತ್ರವಾಗಿದೆ. ಪ್ರತಿಯೊಬ್ಬರೂ ಪರಿಸರದ ಕಾಳಜಿ ಬೆಳೆಸಿಕೊಳ್ಳಬೇಕು. ಗಿಡ, ಮರ ಬೆಳೆಸುವ ಕಾರ್ಯ ಮಾಡಬೇಕು. ಹಲವು ವರ್ಷಗಳಿಂದ ಬೆಟಗೇರಿ ಭಾಗದಲ್ಲಿ ವೃ ಭಾರತಿ ಸೇವಾ ಸಮಿತಿ ಸದಸ್ಯರು ಗಿಡ, ಮರ ಬೆಳೆಸುತ್ತ ಜನರಿಗೆ ತುಳಸಿ ಸಸಿಗಳನ್ನು ಹಂಚಿ, ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಪರಿಸರ ಕಾಳಜಿ ಅಭಿನಂದನೀಯ ಎಂದರು.

ಎಸ್​ಬಿಐ ನಿವೃತ್ತ ನೌಕರ ಶಿವಪ್ಪ ಮಾಗುಂಡ ಮಾತನಾಡಿ, ಪ್ರತಿಯೊಬ್ಬರೂ ಮನೆ ಆವರಣದಲ್ಲಿ ಹತ್ತಾರು ತುಳಸಿ ಸಸಿಗಳನ್ನು ನೆಡಬೇಕು. ಇದರಿಂದ ನಮ್ಮ ಮನೆಗಳಿಗೆ ಬೇಕಾಗುವಷ್ಟು ಪರಿಶುದ್ಧ ಆಮ್ಲಜನಕ ಲಭಿಸುತ್ತದೆ ಎಂದರು.

ಗೌರವ ಅಧ್ಯತೆ ವಹಿಸಿದ್ದ ಡಾ. ಅಯ್ಯನಗೌಡರ ಮಾತನಾಡಿ, ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಏರಿಕೆಗೆ ಪರಿಸರ ಸಂರಣೆ ಒಂದೇ ಪರಿಹಾರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಿತಿಯ ಪರವಾಗಿ 600ಕ್ಕೂ ಹೆಚ್ಚು ತುಳಸಿ ಸಸಿಗಳನ್ನು ವಿತರಿಸಲಾಯಿತು. ಮಂಜುನಾಥ ಪಾಸ್ತೆ, ಯಶವಂತ ಮತ್ತೂರ, ಮಂಜುನಾಥ ಬ್ಯಾಟಿ, ಸೋಮಣ್ಣ ನೆಗಳೂರ, ಕಿರಣ ವೆರ್ಣೆಕರ, ಮಹೇಶ ನಾಗರಾಳ, ರಾವೇಂದ್ರ ಜಿತೂರಿ, ಗೋಪಾಲ ಮಳೇಕರ, ಗೋಪಾಲ ಹೆಗಡೆ, ಅರ್ಚಕ ವಿನಯ ಗಣಾಚಾರಿ, ತಮ್ಮಣ್ಣ ಮಾಗುಂಡ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net