

ನಿಯಮ ಬಾಹಿರ ಕಟ್ಟಡಕ್ಕೆ ತಾಂತ್ರಿಕ ಅನುಮತಿ ವಿತರಣೆ
ಅಕ್ರಮ ಕಟ್ಟಡ ಪರವಾಣಿಗೆಗಳನ್ನು ಅಮಾನತ್ತಿನಲ್ಲಿ ಇಡಲು ಪತ್ರ.
ಶಿವಾನಂದ ಹಿರೇಮಠ ಗದಗ
ಅನಧಿಕೃತ ಬಡವಾಣೆಗಳಿಗೆ ಸಿಸಿ (ಕ್ಲಿಯರೆನ್ಸ್ ಸಟಿರ್ಫಿಕೇಟ್), ಾರ್ಮ ನಂ 3 ವಿತರಣೆ ಮಾಡಿ ಕೊಟ್ಯಂತರ ರೂ. ಅವ್ಯವಹಾರಕ್ಕೆ ಕಾರಣವಾಗಿದ್ದ ಗದಗ ನಗರಸಭೆ ಮತ್ತು ನಗರಾಭಿವೃದ್ದಿ ಇಲಾಖೆಯಲ್ಲಿ ಈಗ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ಇಲಾಖೆಯ ತಂತ್ರಾಂಶ ನಿರ್ಮಾಣ 2 ಲಾಗಿನ್ ಹ್ಯಾಕ್ ಮಾಡಿರುವ ಅನಾಮಿಕರು ನಿಯಮ ಬಾಹಿರ ಕಟ್ಟಡಗಳಿಗೆ ತಾಂತ್ರಿಕ ಪರವಾಣಿಗೆ ಪಡೆಯುತ್ತಿದ್ದಾರೆ. ರಾಜ್ಯ ಹೆದ್ದಾರಿ ನಿಯಮ ಉಲ್ಲಂಘಿಸಿ ಪಟ್ಟಣದಲ್ಲಿ ನಿರ್ಮಾಣ ಆಗುತ್ತಿರುವ ಕಟ್ಟಡಗಳಿಗೆ ತಾಂತ್ರಿಕ ಅಭಿಪ್ರಾಯ ಅನುಮತಿ ನೀಡುತ್ತಿರುವ ಪ್ರಕರಣ ಇದಾಗಿದ್ದು, ಈ ಕೃತ್ಯದಲ್ಲಿ ನಗರಸಭೆ ಮತ್ತು ನಗರಾಭಿವೃದ್ಧಿ ಸಿಬ್ಬಂದಿಗಳು ಕೈಜೋಡಿಸಿದ್ದಾರೆ ಎಂಬ ಅನುಮಾನಗಳು ಮೂಡುತ್ತಿವೆ. ಇಲಾಖೆ ಆವರಣದಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ನಗರಸಭೆಗೆ ಪತ್ರ ಬರೆದು ಇಂತಹ ಅಕ್ರಮ ಕಟ್ಟಡದ ಪರವಾಣಿಗೆಯನ್ನು ಅಮಾನತ್ತಿನಲ್ಲಿ ಇಡಲು ಸೂಚಿಸಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ವಾರ್ಡ್ ನಂ 33ರಲ್ಲಿನ ನಗರದ ಮುಳಗುಂದ ನಾಕಾ ಬಳಿಯ ಸಿಟಿಎಸ್ನಂ 3855/7/1ಎ್/2 ರಿಂದ 3855/7/2 ವರೆಗಿನ ನಿವೇಶನಗಳಲ್ಲಿ (ನಗರಾಭಿವೃದ್ಧಿ ಇಲಾಖೆಯಲ್ಲಿನ ಡೋರ್ ನಂ 33/12/8ಎ ಹಾಗೂ 33/3/12/8ಸಿ) ರಾಜ್ಯ ಹೆದ್ದಾರಿ ನಿಯಮಗಳನ್ನು ಮೀರಿ ಕಟ್ಟಡ ನಿಮಿರ್ಸಲಾಗುತ್ತಿದೆ. ಮುಳಗುಂದ ನಾಕಾದಿಂದ ದೋಭಿಗಾಟ್ ವರೆಗೂ 30 ಮೀಟರ್ ರಸ್ತೆ ಇದ್ದರೂ ನೀಲ ನೆಯಲ್ಲಿ 18 ಮೀಟರ್ ಎಂದು ನೆ ಸಿದ್ಧಪಡಿಸಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಇದೇ ರಸ್ತೆಯಲ್ಲಿ ಇಂತಹ ಅನೇಕ ಕಟ್ಟಡಗಳು ನಿಯಮ ಉಲ್ಲಂಘಿಸಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ತೋಂದರೆ ಆಗುತ್ತಿದೆ. ಹೆದ್ದಾರಿ ನಿಯಮಗಳನ್ನು ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಕಟ್ಟಡ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಪಾಕಿರ್ಂಗ್ ವ್ಯವಸ್ಥೆ ಮತ್ತು ಇತರೆ ಉಲ್ಲಂನೆಗಳು ಬೆಳಕಿಗೆ ಬಂದಿವೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ನಿಯಮನುಸಾರ ಕಟ್ಟಡ ನಿಮಿರ್ಸಲು ಸೂಚಿಸಬೇಕು ಎಂದು ಜಾಗತಿಕ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ರಾಷ್ಟ್ರೀಯ ಪ್ರಧಾನ ಕಾರ್ಯದಶಿರ್ ಶಾಂತಯ್ಯ ವಿ. ಎಂ. ಎಂಬುವರು ನಗರಸಭೆಗೆ ಪತ್ರ ಬರೆದಿದ್ದಾರೆ. ಆರಂಭದಲ್ಲಿ ನಗರಸಭೆ ಅಧಿಕಾರಿಗಳು ನಿರ್ಲಕ್ಷ$್ಯ ವಹಿಸಿದ್ದಾರೆ. ಆದರೆ, ಇದೇ ದೂರು ಅಜಿರ್ಯನ್ನು ಶಾಂತಯ್ಯ ಎಂಬುವರು ಲೋಕಾಯುಕ್ತರಿಗೆ ಸಲ್ಲಿಸಿದ್ದರು. ಇದರಿಂದ ಭಯಬೀತಗೊಂಡ ನಗರಸಭೆ ಅಧಿಕಾರಿಗಳು ನೆಯನ್ನು ಮಾರ್ಪಡಿಸಲು ಸೂಚಿಸಿ ಮಾಲೀಕರಿಗೆ ಪತ್ರ ಬರೆದಿದ್ದಾರೆ. ನೆಯನ್ನು ಮಾರ್ಪಡಿಸಲು ಕೋಟಿ ಮಾಲೀಕರು ನಗರಾಭಿವೃದ್ಧಿ ಇಲಾಖೆಗೆ ತೆರಳಿದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಅಧಿಕಾರಿಗಳು ಗಾಭರಿ:
ನೆ ಮಾರ್ಪಡಿಸಲು ಆಸ್ತಿ ಮಾಲೀಕರು ನಗರಾಭಿವೃದ್ಧಿ ಇಲಾಖೆಗೆ ಮನವಿ ಮಾಡಿದ ಸಂದರ್ಭದಲ್ಲಿ ನಗರಾಭಿವೃದ್ಧಿ ಅಧಿಕಾರಿಗಳಿಗೆ ಈ ಹಿಂದಿನ ನಿಯಮ ಬಾಹಿರ ನೆಗೆ ತಾಂತ್ರಿಕ ಅಭಿಪ್ರಾಯದ ಪರವಾಣಿಗೆ ಮತ್ತು ದಾಖಲೆ ಪರಿಶೀಲನೆ ಇಲ್ಲದೇ ನಿರ್ಮಾಣ&2 ತಂತ್ರಾಂಶದಿಂದ ಅನುಮತಿ ನೀಡಿರುವುದು ಗೊತ್ತಾಗಿದೆ. ಈ ಸಂದರ್ಭದಲ್ಲಿ ತಂತ್ರಾಂಶ ಹ್ಯಾಕ್ ಮಾಡಿ ಅನುಮತಿ ಪಡೆಯುತ್ತಿರುವ ಪ್ರಕರಣಗಳು ಗೊತ್ತಾಗಿದೆ. ಈ ಹಿನ್ನೆಲೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಮುಳಗುಂದ ನಾಕಾ ಬಳಿಯ ಡೋರ್ ನಂ 33/12/8ಎ ಹಾಗೂ 33/3/12/8ಸಿ ಕಟ್ಟಡ ಪರವಾಣಿಗೆ ಅಮಾನತ್ತಿನಲ್ಲಿ ಇಡಲು ಸೂಚಿಸಿ ಮಾ. 19, 2025ರಂದು ಪತ್ರ ಬರೆದಿದೆ. ಮತ್ತು ಅಕ್ರಮ ಪರವಾನಿಗೆ ಪ್ರಕರಣಗಳ ಮಾಹಿತಿಯನ್ನು ಕಚೇರಿಗೆ ಸಲ್ಲಿಸಲು ಸೂಚಿಸಿದೆ.
ಎಲ್ಲ ಪರವಾಣಿಗೆಗಳ ಪರಿಶೀಲನೆ:
ಪ್ರಕರಣ ಬೆಳಕಿಗೆ ಬಂದ ನಂತರ ನಗರಾಭಿವೃದ್ದಿ ಇಲಾಖೆಯ ನಿರ್ಮಾಣ&2 ತಂತ್ರಾಶದಿಂದ ಇತ್ತಿಚೆಗೆ ತಾಂತ್ರಿಕ ಅಭಿಪ್ರಾಯ ಪರವಾಣಿಗೆ ಮತ್ತು ತಂತ್ರಾಂಶದ ಮೂಲಕ ದಾಖಲೆ ಪರಿಶೀಲನೆ ಆಗಿರುವ ಎಲ್ಲ ಆಸ್ತಿ ದಾಖಲೆಗಳನ್ನು ನಗರಾಭಿವೃದ್ದಿ ಇಲಾಖೆ ಮತ್ತೊಮ್ಮೆ ಪರಿಶೀಲನೆ ನಡೆಸಿದೆ. ಮೂಲಗಳ ಪ್ರಕಾರ ನಗರದ ಪಾಲಾ ಬಾದಾಮಿ ರಸ್ತೆ, ಮುಳಗುಂದ ರಸ್ತೆ, ಮುಖ್ಯ ರಾಜ್ಯ ಹೆದ್ದಾರಿಯಲ್ಲಿ ಇಂತಹ ಅನೇಕ ನಿಯಮ ಬಾಹಿರ ಕಟ್ಟಡಗಳಿಗೆ ಲಾಗಿನ್ ಹ್ಯಾಕ್ ಮಾಡಿ ಪರವಾನಿಗೆ ಪಡೆದುಕೊಂಡಿರುವ ಮಾಹಿತಿಯನ್ನು ಇಲಾಖೆಯ ಮೂಲಗಳು ತಿಳಿಸಿದ್ದು, ಎಲ್ಲ ಅಕ್ರಮ ಕಟ್ಟಡ ಪರವಾನಿಗೆ ಕುರಿತು ಎೈಆರ್ ದಾಖಲಿಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಕೋಟ್:
ಪ್ರಕರಣ ಗಂಭೀರವಾಗಿದೆ. ಈ ಕುರಿತು ಠಾಣೆಯಲ್ಲಿ ಎೈಆರ್ ದಾಖಲಿಸಲಾಗಿದೆ. ಲಾಗಿನ್ ಹ್ಯಾಕ್ ಮಾಡಿ ಇನ್ನಿತರೆ ಕಟ್ಟಡಗಳಿಗೆ ತಾಂತ್ರಿಕ ಅಭಿಪ್ರಾಯ ಪಡೆಯಲಾಗಿದೆಯೇ ಎಂಬುದುರ ಕುರಿತು ಇಲಾಖೆವಾರು ತನಿಖೆ ನಡೆಸಲಾಗುತ್ತಿದೆ.
ಸಿದ್ದಪ್ಪ ಬೇವೂರು, ಆಯುಕ್ತರು. ನಗರಾಭಿವೃದ್ಧಿ