
ಗದಗ:
ರಾಜಕೀಯ ದೃವೀಕರಣ, ಪ್ರವಾಸೋದ್ಯಮ ಅಭಿವೃದ್ಧಿ, ಅಪಘಾತ ಪ್ರಕಣಗಳ ಹಿನ್ನೆಲೆ 2024ನೇ ವರ್ಷ ಜಿಲ್ಲೆಯಲ್ಲಿ ಹಲವು ಟನೆಗಳು ಸಂಭವಿಸಿವೆ. ಲೋಕಸಭಾ ಚುನಾವಣೆಯಲ್ಲಿ ಸಮೀೆಗಳು ತಲೆಕಳೆಗಾದವು. ರೈಲ್ವೆ ಯೋಜನೆಗಳಿಗೆ ಅನುದಾನ ದೊರಕಿತು. ಎಚ್.ಕೆ. ಪಾಟೀಲ ಅವರು ಪ್ರವಾಸೋದ್ಯಮ ಸಚಿವರಾದ ಹಿನ್ನೆಲೆ ಜಿಲ್ಲೆಯ ಪ್ರವಾಸೋದ್ಯಮ ಸ್ಥಳಗಳಿಗೆ ಮೆರಗು ಬಂದಿದೆ. ಕಪ್ಪತಗುಡ್ಡ ಸಂಕರ್ಷಣೆ ವಿಷಯವಾಗಿ ಮತ್ತೆ ಜನಾಂದೋಲನ ಆರಂಭವಾಗಿದೆ. ಬಾಕಳೆ ಕುಟುಂಬದಲ್ಲಿ ನಾಲ್ವರ ಹತ್ಯೆ ಜಿಲ್ಲೆಯನ್ನೇ ಬೆಚ್ಚುಬಿಳುವಂತೆ ಮಾಡಿತು. ಈ ಎಲ್ಲ ಟನೆಗಳು 2024ರಲ್ಲಿ ಅಚ್ಚೋತ್ತಿವೆ.
ಕಪ್ಪತಗುಡ್ಡ ರಕ್ಷಣೆಗೆ ಜನಾಂದೋಲನ ಆರಂಭ:
ಆಯುರ್ವೇದ ಸಸ್ಯ ಕಾಶಿ, ದೇಶದಲ್ಲೇ ಅತ್ಯಂತ ಶ್ರೇಷ್ಠ ಮ್ಯಾಂಗನೀಸ್ ಕಚ್ಚಾವಸ್ತು ಲಭಿಸುವ, 18ಕ್ಕೂ ಹೆಚ್ಚು ಖನಿಜಾಂಶ ಮತ್ತು ಪ್ರಾಣಿ ಸಂಕಲವನ್ನು ಹೊಂದಿರುವ ಜಿಲ್ಲೆಯ ಕಪ್ಪತಗುಡ್ಡ ವನ್ಯ ಸಂಪತ್ತನ್ನು ರಸುವ ಜನಾಂದೋಲನ ಮತ್ತೆ ಆರಂಭವಾಗಿದೆ. ವನ್ಯಜಿವಿ ಧಾಮ ವ್ಯಾಪ್ತಿಯಿಂದ 10 ಕೀಮಿ ವರೆಗೆ ಗಣಿಗಾರಿಕೆಗೆ ಅವಕಾಶ ನೀಡದಂತೆ ಈ ಮೊದಲಿದ್ದ ಆದೇಶವನ್ನು ಮಾರ್ಪಡಿಸಿ 1 ಕೀಮಿ ವ್ಯಾಪ್ತಿಗೆ ಇಳಿಸಿ ಕೇಂದ್ರ ಸರ್ಕಾರ ಹೊರಡಿಸಿದ ಗೆಜೆಟ್ ವಿಷಯವಾಗಿ ಮತ್ತು ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ವನ್ಯಜಿವ ಮಂಡಳಿ ಸಭೆಯಲ್ಲಿ ಗಣಿಗಾರಿಕೆ ಅನುಮತಿ ನೀಡುವ 28 ಪ್ರಸ್ತಾವನೆಗಳನ್ನು ತಿರಸ್ಕರಿಸದೇ ಮುಂದೂಡಿದ್ದರಿಂದ ವಿವಾದ ಬುಗಿಲೆದ್ದಿತು. ಈ ವಿಷಯವಾಗಿ ಜಿಲ್ಲೆಯಲ್ಲಿ ಪ್ರತಿಭಟನೆಗಳು ಜರುಗುತ್ತಿವೆ.
ಪ್ರವಾಸೋದ್ಯಮಕ್ಕೆ ಶುಕ್ರದೆಸೆ:
ಸಚಿವ ಎಚ್.ಕೆ. ಪಾಟೀಲ ಪ್ರವಾಸೋದ್ಯಮ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಶುಕ್ರದೆಸೆ ಶುರುವಾಗಿದೆ. ಲಕ್ಕುಂಡಿ ಗ್ರಾಮದ 13 ಐತಿಹಾಸಿಕ ಪುರಾತತ್ವ ಸ್ಥಳಗಳ ಜೀಣೋರ್ದ್ದಾರಕ್ಕೆ ಸರ್ಕಾರ 5 ಕೋಟಿ ರೂ.ಬಿಡುಗಡೆ ಆಗಿದ್ದು, ಕಾಮಗಾರಿಗಳು ಆರಂಭಗೊಂಡಿದೆ. ಲಕ್ಕುಂಡಿಯನ್ನು ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಪ್ರಕ್ರಿಯೂ ಜಾರಿಯಲ್ಲಿದೆ. ನಗರದ ವೀರನಾರಾಯಣ ದೇವಸ್ಥಾನವನ್ನು ಮೂಲಸ್ವರೂಪಕ್ಕೆ ಬದಲಾಯಿಸುವ ಕಾಮಗಾರಿ ಆರಂಭಗೊಂಡಿದೆ ಮತ್ತು ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮ ಶಿಬಿರ ಕಾಮಗಾರಿ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದ್ದು, 7 ಕೋಟಿ ವೆಚ್ಚದಲ್ಲಿ ಈ ಯೋಜನೆಯಲ್ಲಿ ಮೊದಲ ಹಂತದಲ್ಲಿ 2.33 ಕೋಟಿ ರೂ. ಬಿಡುಗಡೆ ಆಗಿದೆ. ಟೆಂಡರ್ ಪ್ರಕ್ರಿಯೆ ನಂತರ ಕಾಮಗಾರಿ ಆರಂಭಗೊಳ್ಳಲಿದೆ. 2026ರ ವೇಳೆಗೆ ಜಿಲ್ಲೆಯ ಮತ್ತು ರಾಜ್ಯದ ಪ್ರವಾಸಿಗರಿಗೆ ಕಪ್ಪತಗುಡ್ಡದಲ್ಲಿ ಅತ್ಯಧ್ಬುತ ಶಿಬಿರದ ಸದುಪಯೋಗ ಕೈಗೆಟುಕಲಿದೆ.
42 ಡಿಗ್ರಿ ಉಷ್ಣಾಂಶ ದಾಖಲು:
ಕಳೆದೊಂದು ದಶಕದಲ್ಲಿ ಅತೀ ಹೆಚ್ಚು 40 ರಿಂದ 42 ಡಿಗ್ರಿ ಸೆಲ್ಸಿ ಉಷ್ಣಾಂಶ ದಾಖಲಾಗಿದ್ದು 2024ರಲ್ಲಿ. ಬಿಸಿಲ ಪ್ರಕರತೆಗೆ ಹಸುಗೂಸು, ಚಿಕ್ಕಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಪ್ರಕರಣ ಹೆಚ್ಚಾಗಿದ್ದವು. ಚಿಕ್ಕಮಕ್ಕಳ ಪ್ರಕರಣಗಳು ಶೇ. 30ರಷ್ಟು ಅಧಿಕವಾಗಿದ್ದವು. ಬಿಸಿಲ ಪ್ರಕರತೆಗೆ ಮಕ್ಕಳಲ್ಲಿ ಜ್ವರ, ತಲೆ ಸುತ್ತವುದು ಮತ್ತು ನಿಶಕ್ತಿಗೊಳ್ಳುವ ಪ್ರಕರಣಗಳು ಜಿಲ್ಲೆಯಲ್ಲಿ 2024ರಲ್ಲಿ ಅತೀಹೆಚ್ಚು ದಾಖಲಾಗಿವೆ.
ಪಡಿತರ ಅಕ್ಕಿ ಅಕ್ರಮ ಮಾರಾಟ:
ಅಧಿಕಾರಿಗಳ ನಿರ್ಲಕ್ಷ ಹಾಗೂ ರಾಜಕಾರಣಿಗಳ ಹಿಂಬಾಲಕರ ಸಹಕಾರ ಮತ್ತು ವ್ಯವಸ್ಥೆಯ ದುರಪಯೋಗ ಪಡಿಸಿಕೊಂಡಿರುವ ಸ್ಥಳಿಯ ಪುಡಾರಿಗಳು ಜಿಲ್ಲೆಯ ಲಕ್ಷಾಂತರ ರೂ. ಮೌಲ್ಯದ ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಪರರಾಜ್ಯಗಳಿಗೆ ರವಾನಿಸಿದ್ದಾರೆ. ಅಕ್ರಮದ ಬಗ್ಗೆ ಅಧಿಕಾರಿಗಳಿಗೆ ಸಮಗ್ರ ಮಾಹಿತಿಯಿದ್ದರೂ ಅಧಿಕಾರಿಗಳು ಜಾಣ ಕುರುಡು ನೀತಿ ಅನುಸರಿಸುವ ಮೂಲಕ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಎಂಬ ಆರೋಪ ಗದಗ ನಗರದಾದ್ಯಂತ ಕೇಳಿಬಂದಿತ್ತು. ಆಕ್ರಮ ಅಕ್ಕಿ ದಂಧೆ ಎಂಬುದು ಅಧಿಕಾರಿಗಳಿಗೆ ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿದೆ. ಅಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಗಾಗ ಆಕ್ಷೇಪಗಳು ಕೇಳಿ ಬರುವ ಸಂದರ್ಭದಲ್ಲಿ ಆಗೊಮ್ಮೆ ಈಗೊಮ್ಮೆ ಎಂಬಂತೆ ಪ್ರಕರಣ ದಾಖಲಿಸಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆಯುವ ಪ್ರಯತ್ನವನ್ನು ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ.
ರೈಲ್ವೆ ಯೋಜನೆ:
ಬಜೆಟ್ ಘೋಷಣೆಯಂತೆ ಕೇಂದ್ರ ಸರ್ಕಾರ ಗದಗ ಜಿಲ್ಲೆಯ ಎರಡು ರೈಲ್ವೆ ಯೋಜನೆಗಳಿಗೆ ಮೊದಲ ಕಂತಿನ ಅನುದಾನ ಬಿಡುಗಡೆ ಆಗಿದ್ದು, ಗದಗ&ಯಲವಗಿ&ಕುಷ್ಟಗಿ&ವಾಡಿ ಮಾರ್ಗದ ಡಬ್ಲಿಂಗ್ ಯೋಜನೆಗೆ 200 ಕೋಟಿ ಮತ್ತು ಗದಗ& ಯಲವಗಿ ಮಾರ್ಗದ ರೈಲ್ವೆ ಯೋಜನೆಗೆ 150 ಕೋಟಿ ಸೇರಿ ಒಟ್ಟು 350 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಸಂಸದ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಸಂದರ್ಭದಲ್ಲಿ ಗದಗ ಯಲವಗಿ ಯೋಜನೆಗೆ 640 ಕೋಟಿ ಅನುದಾನ ಬೆಜೆಟ್ನಲ್ಲಿ ಮೀಸಲಿಟ್ಟಿದ್ದರು. ಈಗ ಸಂಸದಾರ ನಂತರ ಕೇಂದ್ರದ ಅನುದಾನ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿ ಆಗಿದ್ದಾರೆ. ಗದಗ ಜಿಲ್ಲಾ ರೈಲ್ವೆ ನಿಲ್ದಾಣ ಉನ್ನತಿಕರಿಸಲಾಗುತ್ತಿದೆ.
ಸರ್ಕಾರದಲ್ಲಿ ಆರ್ಥೊಕ ಕೊರತೆ:
ಗ್ಯಾರಂಟಿ ಯೋಜನೆಗಳಿಂದಾಗಿ ಪ್ರಸಕ್ತ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ ಆಥಿರ್ಕ ಕೊರತೆ ಕಂಡುಬಂದಿತು. 2021- & 22ರ ಅವಧಿಯಿಂದಲೂ ಈ ವರೆಗೆ ಅತಿವೃಷ್ಟಿಯಿಂದ ಹಾಳಾದ ರಸ್ತೆ, ಮೇಲ್ಸೇತುವೆ ಸೇರಿ ಇತರ ಕಾಮಗಾರಿಗಳ ಅಭಿವೃದ್ಧಿಗೆ ಜಿಲ್ಲೆಯಿಂದ 687 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆ ಆಗಿತ್ತು. ಬಿಡುಗಡೆ ಆಗಿದ್ದು ಕೇವಲ 65 ಕೋಟಿ ಮಾತ್ರ. ಪ್ರಸಕ್ತ ವರ್ಷ ರಸ್ತೆ, ಸೇತುವೆ ದುರಸ್ತಿಗೆ ಇಲಾಖೆಯೂ 19 ಕೋಟಿ ರೂ. ಗೆ ಬೇಡಿಕೆ ಇಡಲಾಗಿತ್ತು. ಆದರೆ, ರಸ್ತೆ ದುರಸ್ತಿಗೆ ಹಣ ನೀಡದ ರಾಜ್ಯ ಸರ್ಕಾರ ಶಿರಹಟ್ಟಿ ಕ್ಷೇತ್ರದ 2 ಸೇತುವೆ ದುರಸ್ತಿಗೆ 80 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಇನ್ನೂ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಬಿಲ್ಗಳು ಕೋಟಿ ಲೆಕ್ಕದಲ್ಲಿ ಬಾಕಿ ಇದ್ದು, ಅನುದಾನ ಕೊರತೆಯಿಂದ ಬಿಡುಗಡೆ ಆಗಿಲ್ಲ.
ವಿವೇಕ ಶಾಲಾ ಕೊಠಡಿಗಳು ಪೂರ್ಣ:
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಮಂಜೂರಾಗಿದ್ದ 120 "ವಿವೇಕ' ಶಾಲಾ ಕೊಠಡಿಗಳಲ್ಲಿ 113 ಶಾಲಾ ಕೊಠಡಿಗಳು ಪೂರ್ಣಗೊಂಡಿವೆ. ಶಾಲಾ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಯಾ ಜಿಲ್ಲೆಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಅಂದಿನ ರಾಜ್ಯ ಸರ್ಕಾರ ಕೊಠಡಿಗಳನ್ನು ಮಂಜೂರು ಮಾಡಿತ್ತು. ಬಿ. ಸಿ. ನಾಗೇಶ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಈ ಯೋಜನೆ ಜಾರಿ ಮಾಡಲಾಗಿತ್ತು. "ವಿವೇಕ ಶಾಲಾ ಕೊಠಡಿ' ಎಂದು ನಾಮಕರಣ ಮಾಡಿ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಯೋಜನೆ ಪೂರ್ಣಗೊಳ್ಳುವ ಪೂರ್ವದಲ್ಲಿ ಸಂಪೂರ್ಣ ಅನುದಾನವನ್ನು ಆಯಾ ಜಿಲ್ಲಾ ಶಿಕ್ಷಣ ಇಲಾಖೆಗೆ ಬಿಡುಗಡೆ ಮಾಡಿತ್ತು. ಕಾಮಗಾರಿ ಪೂರ್ವದಲ್ಲೇ ಅನುದಾನ ಒದಗಿದ್ದರಿಂದ ಯಾವುದೇ ಅತಡೆಗಳಿಲ್ಲದೇ ಕೊಠಡಿಗಳು ಪೂರ್ಣಗೊಂಡಿವೆ.
ಬರಗಾಲ ಕಂಡ ಜಿಲ್ಲೆ ಜಿಲ್ಲೆಯು ಈ ವರ್ಷ ತೀವ್ರ ಬರಗಾಲ ಮತ್ತು ಅತೀವೃಷ್ಟಿ ಎರಡನ್ನು ಕಂಡಿದೆ. ಕುಡಿಯುವ ನೀರು ಪೂರೈಸಲು ಜಿಲ್ಲಾಡಳಿತ ಹರಸಾಹಸ ಪಟ್ಟಿತ್ತು. ಮಾರ್ಚ ಏಪ್ರಿಲ್ ತಿಂಗಳಲ್ಲಿ ಮಳೆ ಕೊರತೆ ಹಿನ್ನೆಲೆ ತುಂಗಭದ್ರ ಜಲಾಶಯ ಬರಿದಾದ ಹಿನ್ನೆಲೆ, ಮುಂಡರಗಿ ತಾಲೂಕಿನ ಹಮ್ಮಗಿ ಬ್ಯಾರೇಜ್ ನಲ್ಲಿ ನೀರು ಪೂರ್ಣ ಪ್ರಮಾಣದಲ್ಲಿ ಖಾಲಿ ಆಗಿತ್ತು. ಮುಂಡರಗಿ ಮತ್ತು ಗದಗ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಸೃಷ್ಟಿ ಆಗಿತ್ತು. ಏಪ್ರಿಲ್ ತಿಂಗಳಲ್ಲಿ ಸರಾಸರಿ ಒಂದು ತಿಂಗಳು ನಗರಕ್ಕೆ ನೀರು ಸರಬರಾಜು ಇರಲಿಲ್ಲ. ಬೀಸಿಲಿಗೆ ಬಸವಳಿದ ಜನರು ನೀರಿಗಾಗಿ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಮುಂದೆ, ಬೀದಿಗಳಲ್ಲಿ, ಪ್ರಮುಖ ವೃತ್ತಗಳಲ್ಲಿ ಹಗಲೆನ್ನದೇ ರಾತ್ರಿ ಎನ್ನದೇ ಪ್ರತಿಭಟನೆ ನಡೆಸಿದರು.
ತುಂಗಭದ್ರ ನದಿ ನೀರು?
ಕಳೆದ ಮಾರ್ಚ ಏಪ್ರಿಲ್ ನಲ್ಲಿ ತುಂಗಭದ್ರಾ ಒಡಲು ಸಂಪೂರ್ಣ ಖಾಲಿ ಆಗಿತ್ತು. ಮುಂಡರಗಿ ಬ್ಯಾರೇಜ್ ಡೆಡ್ ಸ್ಟೋರೇಜ್ ತಲುಪಿದ ಹಿನ್ನೆಲೆ ಮಾ.29 ರಂದು ತುಂಗಭದ್ರಾ ಜಲಾಶಯದಿಂದ 2 ಟಿಎಂಸಿ ನೀರು ಹರಿಸಲಾಗಿತ್ತು. ಆದರೆ, ಬಿಸಿಲ ತಾಪಕ್ಕೆ ಮತ್ತು ಮಧ್ಯದಲ್ಲಿ ನೀರು ಪೋಲಾಗುವ ಕಾರಣದಿಂದ ಹಮ್ಮಗಿ ಬ್ಯಾರೇಜ್ ಗೆ 1 ಟಿಎಂಸಿ ಗೂ ಕಡಿಮೆ ನೀರು ಬಂದು ತಲುಪಿತ್ತು. ಲೆ$್ಮಶ್ವರಕ್ಕೆ ತುಂಗಭದ್ರ ನದಿಯಿಂದ ನೀರು ಪೂರೈಸಲು ನೀರು ಸಂಗ್ರಹ ವ್ಯವಸ್ಥೆ ಇಲ್ಲ. ಹಾಗಾಗಿ, ಹರಿಯುವ ನದಿ ನೀರಿನಲ್ಲೇ ಪಂಪಹೌಸ್ ನಿಮಿರ್ಸಿ ಲೆ$್ಮಶ್ವರ ಪಟ್ಟಣಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲಾಯಿತು. ನೀರಿನಸಂಗ್ರಹ ಸಂಪೂರ್ಣ ಖಾಲಿ ಆದ ಸಂಸದರ್ಭದಲ್ಲಿ ಕೊನೆ ಹಂತದ ಡೆಡ್ ಸ್ಟೋರೇಜ್ ನೀರನ್ನು ಶುದ್ಧೀಕರಿಸಿ ಗದಗ ಮುಂಡರಗಿಗೆ ಹರಿಸಲಾದ ಪರಿಣಾಮ ಮಾರ್ಚ , ಎಪ್ರಿಲ್ ತಿಂಗಳಲ್ಲಿ ಜನರು ಅನಾರೋಗ್ಯದಿಂದ ಬಳಲಿದ ಪ್ರಕರಣ ಸಂಖ್ಯೆ ಅಧಿಕವಾಗಿತ್ತು.
ಮಲಪ್ರಭೆ ನದಿ ನಿರು:
ಸವದತ್ತಿ ಬಳಿಯ ಮಲಪ್ರಭೆಗೆ ಅಡ್ಡಲಾಗಿ ನಿಮಿರ್ಸಲಾದ ರೇಣುಕಾ ಸಾಗರ ಜಲಾಶಯ(ನವೀಲು ತೀರ್ಥ)ದಿಂದ ಕಾಲುವೆ ಮೂಲಕ ಕರೆಗಳಿಗೆ ನೀರು ಹರಿಸಿ ಜಿಲ್ಲೆಯ ನರಗುಂದ, ರೋಣ, ಗಜೇಂದ್ರಡ ಮತ್ತು ನರೇಗಲ್ ಪಟ್ಟಣಗಳಿಗೆ ನೀರು ಪೂರೈಕೆ ಮಾಡಲಾಯಿತು. ನರಗುಂದ ಭಾಗದಲ್ಲಿ ಕೆಲವಡೆ 2 ದಿನಕ್ಕೊಮ್ಮೆ, ಕೆಲವಡೆ ನಾಲ್ಕು ದಿನಕ್ಕೊಮ್ಮೆ ನೀರು, ಕಲೆವಡೆ ಒಮದು ವಾರಕ್ಕೂ ಅಧಿಕ ಕಾಲ ನೀರಿನ ಸಮಸ್ಯೆ ಉಲ್ಭಣಿಸಿತು. ಜಲಜೀವನ್ ಮಿಷನ್ ಕಾಮಗಾರಿ ಅಪೂರ್ಣಗೊಂಡ ಹಿನ್ನೆಲೆ ನರಗುಂದ ಪಟ್ಟಣದಲ್ಲಿ ಕೆಲವಡೆ ಅಸಪರ್ಮಕ ನೀರು ಪೂರೈಕೆಯಾಯಿತು.
