ರಾಮಪ್ರಸಾತ್ ಮನೋಹರ್ ಅವರಿಂದ  ನಗರದ ವಿವಿಧೆಡೆ ಭೇಟಿ

WhatsApp Image 2024-07-05 at 1.26.23 PM
Published on

ಗದಗ : ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಡಾ. ರಾಮಪ್ರಸಾತ್ ಮನೋಹರ್ ಅವರು ಗುರುವಾರ ಗದಗ ಜಿಲ್ಲೆಯ ನೂತನ ಕಾಮಗಾರಿಯಾದ  ಹೊಸಳ್ಳಿಯ ಬೂದೇಶ್ವರ ಮಠದ ಶಿಲಾ ಮಂಟಪ ನಿರ್ಮಾಣ ಕಾಮಗಾರಿ,  ತ್ರಿಸ್ಟಾರ್ ಹೋಟೆಲ್ ಸ್ಥಳ ಪರಿಶೀಲನೆ ಬಿಂಕದಕಟ್ಟೆಯ ಪ್ರಾಣಿ ಸಂಗ್ರಹಾಲಯ ಮತ್ತು ಸಾಲುಮರದ ತಿಮ್ಮಕ್ಕ ಪಾರ್ಕ್  ಮತ್ತು ಬಸವೇಶ್ವರ ಮೂರ್ತಿ ಭೇಟಿ ನೀಡಿದರು.  ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಪ್ರವಾಸಿ ಗೈಡ್ ತರಬೇತಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ್ವರ ವಿಭೂತಿ ಸೇರಿದಂತೆ ವಿವಿಧ ಅಧಿಕಾರಿಗಳು  ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net