

ಗದಗ : ಮಾಜಿ ಪ್ರಧಾನಿ, ಆಥಿರ್ಕ ತ, ಮುತ್ಸದ್ಧಿ ರಾಜಕಾರಣಿ ಡಾ. ಮನಮೋಹನ ಸಿಂಗ ಅವರ ಅಗಲುವಿಕೆಯಿಂದ ದೇಶವು ಒಬ್ಬ ಶ್ರೇಷ್ಠ, ಅನುಭವಿ ಆಥಿರ್ಕ ತನನ್ನು ಕಳೆದುಕೊಂಡಂತಾಗಿದೆ ಎಮದು ತೋಂಟದಸಿದ್ಧರಾಮ ಶ್ರೀ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ತಿಳೀಸಿರುವಅವರು, ಮನಮೋಹನಸಿಂಗ್ ಅವರು ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ, ಭಾರತೀಯ ರಿಸರ್ವಬ್ಯಾಂಕಿನ ಗವರ್ನರ್ ಆಗಿ, ಯೋಜನಾ ಆಯೋಗದ ಉಪಾಧ್ಯರಾಗಿ, ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇದೆಲ್ಲಕ್ಕೂ ಮಿಗಿಲಾಗಿ ದೇಶದ ನೆಚ್ಚಿನ ಪ್ರಧಾನಿಯಾಗಿ ಅವರು ಸಲ್ಲಿಸಿದ ಸೇವೆ ಅಪೂರ್ವ ಹಾಗೂ ಅನುಪಮ. ದೇಶದ ಅರ್ಥವ್ಯವಸ್ಥೆಗೆ ಭದ್ರಬುನಾದಿ ಒದಗಿಸಿದ ಶ್ರೇಯಸ್ಸು ಡಾ. ಮನಮೋಹನಸಿಂಗ ಅವರಿಗೆ ಸಲ್ಲುತ್ತದೆ. ಮೌನ ಬಂಗಾರ ಮಾತು ಬೆಳ್ಳಿ ಎಂಬಂತೆ ಬದುಕಿದ ಡಾ. ಮನಮೋಹನಸಿಂಗ ಅವರು ಮಾತಿಗಿಂತಲೂ ಕೃತಿಗೆ ಅತ್ಯಂತ ಮಹತ್ವ ನೀಡಿದವರು. ನಿಷ್ಕಳಂಕ ಚಾರಿತ್ರ್ಯದ ಅವರ ಆದರ್ಶದ ಬದುಕು ಎಲ್ಲರಿಗೂ ಮಾದರಿ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲಿ ಎಂದು ಶ್ರೀಗಳು ಪ್ರಾಥಿರ್ಸಿದ್ದಾರೆ.