ಕಾಯಕ ಸತ್ಯ, ಶುದ್ಧತೆಯಿಂದ ಇರಬೇಕು: ಪ್ರೊ. ಸಜ್ಜನಶೆಟ್ಟರ

25GDG01
Published on

ವಿಜಯವಾಣಿ ಸುದ್ದಿಜಾಲ ಗದಗ
ಬಸವಾದಿ ಶರಣರು ಹಾಕಿಕೊಟ್ಟಂತ ದಾರಿಯಲ್ಲಿ ವಿದ್ಯಾಥಿರ್ಗಳು ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಸಿದ್ಧಲಿಂಗೇಶ ಸಜ್ಜನಶೆಟ್ಟರ ಹೇಳಿದರು.
ನಗರದ ತೋಂಟದ ಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶ್ರಾವಣ ಮಾಸದ ಪ್ರಯಕ್ತ ಏರ್ಪಡಿಸಿದ್ದ ಬಸವಾದಿ ಶರಣರ ವಚನಗಳ ಾನಾಮೃತ ವಿಷಯ ಕುರಿತು ಪಿಯುಸಿ ವಿದ್ಯಾಥಿರ್ಗಳಿಗಾಗಿ ಉಪನ್ಯಾಸ ನೀಡಿ ಮಾತನಾಡಿದರು.
ಶರಣರ ವಚನಗಳು ಅಮೃತ ಮತ್ತು ಬದುಕಿಗೆ ದಾರಿ ದೀಪದಂತೆ. ವಿದ್ಯಾಥಿರ್ಗಳು ಜೀವನದಲ್ಲಿ ನಯ ವಿನಯದಿಂದ ನಡೆದುಕೊಳ್ಳಬೇಕು. ನಡೆ ನುಡಿಗಳು ನವಿಲು ಗರಿಬಿಚ್ಚಿ ಕುಣಿಯುವಂತೆ ಇರಬೇಕು. ಶರಣರಂತೆ ರ್ಪೂಣ ಪ್ರಮಾಣದಲ್ಲಿ ಬದುಕಲು ಸಾಧ್ಯವಿಲ್ಲ. ಎಷ್ಟು ಸಾಧ್ಯವೋ ಅಷ್ಟು ಶರಣ ಮಾರ್ಗದಲ್ಲಿ ನಡೆಯಬೇಕು. ಕಾಯಕದಲ್ಲಿ ನಿರತರಾಗಬೇಕು. ಎಲ್ಲವನ್ನು ಸಾಧಿಸುವಚಲ ವಿದ್ಯಾಥಿರ್ಗಳಲ್ಲಿ ಇರುತ್ತದೆ. ನಿಮ್ಮಲ್ಲಿ ಒಳ್ಳೆ ಚಿಂತನೆ, ಒಳ್ಳೆ ಛಲಗಳಿರಬೇಕು. ನೀವು ಏನನ್ನು ಸಾಧಿಸಬೇಕಾದರೂ ಶರಣರ ಅನುಭವದ ನುಡಿ ಮುತ್ತುಗಳಾದ ವಚನಗಳ ಅಧ್ಯಯನ ಮಾಡುವುದರಿಂದ ಮತ್ತು ಅವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವುದರಿಂದ ನಿಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.
ತೋಂಟದ ಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಸುರೇಶ ಭಜಂತ್ರಿ ಮಾತನಾಡಿ, ತಂತ್ರಾನಗಳ ಅಭಿವೃದ್ಧಿಯಿಂದ ವಿದ್ಯಾವಂತರಾಗಿ ಮಾತ್ರ ಬೆಳೆದರೆ ಸಾಲದು. ವಚನ ಚಿಂತನೆಗಳೊಂದಿಗೆ ವೈಚಾರಿಕ ಭಾವನೆಗಳೊಂದಿಗೆ ಬೆಳೆಯಬೇಕು ಎಂದರು. ಕಾರ್ಯಕ್ರಮದಲ್ಲಿ ಪ್ರೊ. ಸಿದ್ಧಲಿಂಗೇಶ ಸಜ್ಜನಶೆಟ್ಟರ ಅವರನ್ನು ಸನ್ಮಾನಿಸಲಾಯಿತು.
ಮಂಜುಳಾ ಅಕ್ಕಿ, ಕಲಾವತಿ ಸಂಕನಗೌಡರ, ರೇಣುಕಾ ಕರೇಗೌಡ್ರ, ಎಂ. ವಿ. ಐಹೊಳ್ಳಿ, ಪ್ರೇಮಾ ಮೇಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net