ಭಾರತ ಸರ್ವಧರ್ಮಗಳ ಸಮನ್ವಯದ ತಾಣ: ಡಾ. ತೋಂಟದ ಸಿದ್ಧರಾಮ ಶ್ರೀಗಳು

21GDG05
ಗದಗ ತೋಂಟದಾರ್ಯ ಮಠದಲ್ಲಿ ಜರುಗಿದ ಶಿವಾನುಭ ಕಾರ್ಯಕ್ರಮದಲ್ಲಿ ಡಿಜಿಎಂ ಆಯುರ್ವೇದ ಕಾಲೇಜಿನ ಡಾ. ಎಂ. ಡಿ. ಸಮುದ್ರಿಯವರು ಉಪನ್ಯಾಸ ನೀಡಿದರು. ತೋಂಟದಾರ್ಯ ಶ್ರೀಗಳು, ಶಿವಣ್ಣ ಯರಾಸಿ, ಸಿದ್ರಾಮಯ್ಯ ಕಾಶಿಮಠ, ಬಾಲಚಂದ್ರ ಭರಮಗೌಡ್ರ, ಉಮೇಶ ಪುರದ, ವಿದ್ಯಾವತಿ ಪ್ರಭು ಗಂಜಿಹಾಳ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಭಾರತ ಸರ್ವಧರ್ಮಗಳ ಸಮನ್ವಯದ ತಾಣವಾಗಿದೆ. ಇಲ್ಲಿ ಸರ್ವಧರ್ಮಗಳ ಧಮೀರ್ಯರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ನಮ್ಮ ನಮ್ಮ ಧರ್ಮದ ಬಗ್ಗೆ ಪರಿರ್ಪೂಣವಾಗಿ ತಿಳಿಯಬೆಕೆಂದರೆ ಭಾರತದಲ್ಲಿರುವ ಅನ್ಯ ಧರ್ಮಗಳ ಅಧ್ಯಯನವು ಬಹಳ ಅವಶ್ಯ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೋಂಟದಾರ್ಯಮಠದಲ್ಲಿ ಇತ್ತೀಚೆಗೆ ಜರುಗಿದ ಶಿವಾನುಭ ಕಾರ್ಯಕ್ರಮದಲ್ಲಿ ನಮ್ಮ ಧರ್ಮದ ಬಗ್ಗೆ ಅಭಿಮಾನ ಮೂಡಬೇಕಾದರೆ ಬೇರೆ ಬೇರೆ ಧರ್ಮಗ್ರಂಥಗಳ ಅಧ್ಯಯನ ಮಾಡಬೇಕು. ಧರ್ಮಸಹಿಷ್ಣುತೆ ಬರೀ ಮಾತುಗಳಲ್ಲಿ ಸೀಮಿತವಾದರೆ ಸಾಲದು. ಧರ್ಮಸಹಿಷ್ಣುತೆ ಭಾವ ಮೂಡಬೇಕಾದರೆ, ಬೆಳೆಯಬೇಕಾದರೆ, ಬದುಕಬೇಕಾದರೆ ಪ್ರತಿಯೊಬ್ಬರು ಶಾಂತಿ, ಸಮಾನತೆ, ಸೌಹಾರ್ದತೆಯಿಂದ ನಡೆದುಕೊಳ್ಳಬೇಕು ಎಂದರು.
ಡಿ.ಜಿ.ಎಂ. ಆಯುರ್ವೇದ ಕಾಲೇಜಿನ ಡಾ. ಎಂ. ಡಿ. ಸಮುದ್ರಿ ಉಪನ್ಯಾಸ ನೀಡಿ ಮಾತನಾಡಿ, ಮಾನವ ಹಲವಾರು ಧರ್ಮಗಳ ಗೊಂದಲದಲ್ಲಿ ಇದ್ದಾನೆ. ನನ್ನ ಧರ್ಮವೇ ಶ್ರೇಷ್ಠ ಎಂಬ ಭಾವನೆಯಲ್ಲಿ ಇರದೆ, ಸರ್ವಧರ್ಮಗಳಲ್ಲಿ ಏಕತೆ ಕಾಣಬೇಕು. ಅನೇಕ ಮಹಾತ್ಮರು ಸಾರಿದ ಸಂದೇಶಗಳನ್ನು ಅರಿತು ನಡೆಯಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯ ಅಕ್ಬರ್​ಸಾಬ್​ ಬಬಚಿರ್, ರಾಜ್ಯಮಟ್ಟದ ಉತ್ತಮ ಶಿಕಿ ಪ್ರಶಸ್ತಿ ಪಡೆದ ರತ್ನಾಬಾಯಿ ಬದಿ ಇವರನ್ನು ಸನ್ಮಾನಿಸಲಾಯಿತು.
ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ, ಪ್ರಶಾಂತ ಜಡಗೊಂಡ, ಮಂಜುನಾಥ ಅಸ್ಕಿ, ಶಿವಣ್ಣ ಯರಾಸಿ, ಸಿದ್ರಾಮಯ್ಯ ಕಾಶಿಮಠ, ಬಾಲಚಂದ್ರ ಭರಮಗೌಡ್ರ, ಉಮೇಶ ಪುರದ, ವಿದ್ಯಾವತಿ ಪ್ರಭು ಗಂಜಿಹಾಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net