

ವಿಜಯವಾಣಿ ಸುದ್ದಿಜಾಲ ಗದಗ
ಲಿಂಗೈಕ್ ತೋಂಟದ ಸಿದ್ಧಲಿಂಗ ಶ್ರೀಗಳು ಪುಸ್ತಕದ ಬಗ್ಗೆ ಬಹಳಷ್ಟು ಪ್ರೀತಿ ಮತ್ತು ಅಭಿಮಾನ ಹೊಂದಿದ್ದರು. ಹಾಗಾಗಿ ಪುಸ್ತಕದ ಸ್ವಾಮೀಜಿ, ಕನ್ನಡದ ಸ್ವಾಮೀಜಿ ಎಂದೇ ಪ್ರಸಿದ್ಧರಾಗಿದ್ದರು. 650 ಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಮಾಜದಲ್ಲಿ ಪುಸ್ತಕ ಸಂಸತಿ ಬೆಳೆಯಬೇಕು. ಓದದುವವರ ಸಂಖ್ಯೆ ಹೆಚ್ಚಾಗಬೇಕು ಎಂದು ತೋಂಟದ ಸಿದ್ಧಲಿಂಗ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ಜರುಗಿದ ಶಿವಾನುಬವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಲಿಂಗೈಕ್ಯ ತೊಂಟದ ಸಿದ್ಧಲಿಂಗ ಶ್ರೀಗಳು ಅನ್ನ ದಾಸೋಹ, ಜ್ಞಾನ ದಾಸೋಹ, ಪುಸ್ತಕ ದಾಸೋಹದ ಜೊತೆಗೆ ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ನಾಡು ನುಡಿಗೆ ಅವರು ಸಲ್ಲಿಸಿದ ಸೇವೆ ಅನನ್ಯ ಮತ್ತು ಅನುಪಮವಾಗಿದೆ. ಒಂದು ವಿಶ್ವವಿದ್ಯಾಲಯಕ್ಕಿಂತಲೂ ಹೆಚ್ಚಿನ ಪುಸ್ತಕಗಳು ಶ್ರೀಮಠದ ಪ್ರಕಾಶನ ಸಂಸ್ಥೆಯಿಂದ ಮುದ್ರಣಗೊಂಡಿವೆ. ಶ್ರೀಮಠದ ಪ್ರಕಾಶನ ಸಂಸ್ಥೆ ಅತ್ಯುತ್ತಮ ಪ್ರಕಾಶನ ಸಂಸ್ಥೆ ಪ್ರಶಸ್ತಿಗೆ ಭಾಜನವಾಗಿದೆ ಎಂದರು.
"ತೋಂಟದಾರ್ಯ ಮಠದ ಗ್ರಂಥ ಪ್ರಕಟಣೆಗಳು' ವಿಷಯ ಕುರಿತು ಧಾರವಾಡದ ಜಿ ಎಂ ಹೆಗಡೆಯವರು ಉಪನ್ಯಾಸ ನೀಡಿದರು. ಶಿವಶರಣೆಯರ ವಚನಾನುಭವ ಕುರಿತು ಶರಣೆ ಗಿರಿಜಕ್ಕ ಧರ್ಮರೆಡ್ಡಿ ಪ್ರವಚನ ನೀಡಿದರು.
ಶಾಂತರಾಜು ಮಾಗನೂರ, ಶಂಕರ ಚಳ್ಳಮರದ, ಬಾಲಚಂದ್ರ ಭರಮಗೌಡ್ರ, ಐ. ಬಿ. ಬೆನಕೊಪ್ಪ, ಉಮೇಶ ಪುರದ, ವಿದ್ಯಾವತಿ ಪ್ರಭು ಗಂಜಿಹಾಳ ಇತರರು ಇದ್ದರು.