ಲಿಂ ತೋಂಟದ ಸಿದ್ಧಲಿಂಗ ಶ್ರೀಗಳ ಪಟ್ಟಾಧಿಕಾರ ಸುವರ್ಣ ಮಹೋತ್ಸವ ಹಾಗೂ ಪುರಸ್ಕಾರ ಪ್ರದಾನ ಸಮಾರಂಭ

30GDG07
ಗದಗ ತೊಂಟದಾರ್ಯ ಮಠದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪತ್ರಕರ್ತ ವಿಲಾಸ ನಾಂದೋಡ್ಕರ ಹಾಗೂ ರುನಾಥ ಸಿ.ಎಚ್​ ಅವರಿಗೆ ಡಾ.ತೋಂಟದ ಸಿದ್ಧಲಿಂಗ ಶ್ರೀ ಪುರಸ್ಕಾರ ಪ್ರದಾನ ಮಾಡಲಾಯಿತು. ತೋಂಟದ ಸಿದ್ಧರಾಮ ಶ್ರೀಗಳು, ಎಸ್​. ಎಸ್​. ಪಟ್ಟಣಶೆಟ್ಟರ, ಶಾಂತವೀರ ಮುರುರಾಜೇಂದ್ರ ಶ್ರೀಗಳು, ಪಂಚಮ ಸಿದ್ಧಲಿಂಗೇಶ್ವರ ಶ್ರೀಗಳು, ಶಿವರಾಜ ಪಾಟೀಲ, ಮಲ್ಲಿಕಾರ್ಜುನ ಶೆಲ್ಲಿಕೇರಿ ಇತರರು ಇದ್ದರು.
Published on

- ತೋಂಟದ ಸಿದ್ಧಲಿಂಗ ಶ್ರೀಗಳು ತೋಂಟದಾರ್ಯಮಠವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಿದರು: ಡಾ. ವೀರಣ್ಣ ರಾಜೂರ

ಗದಗ: ಎಪ್ಪತರ ದಶಕದಲ್ಲಿ ನಾನು ಗದುಗಿನಲ್ಲಿ ಅಧ್ಯಯನ ಮಾಡುವಾಗ ನಗರದಲ್ಲಿ ತೋಂಟದಾರ್ಯ ಮಠ ಇದೆ ಎಂಬ ಸಂಗತಿಯೇ ಅನೇಕರಿಗೆ ಗೊತ್ತಿರಲಿಲ್ಲ, ಆದರೆ, ಲಿಂ. ಸಿದ್ಧಲಿಂಗ ಶ್ರೀಗಳ ಪಾದಾರ್ಪಣೆ ನಂತರ ಈ ಮಠದ ಕೀತಿರ್ ದೇಶದ ಉದ್ದಗಲಕ್ಕೂ ಹರಡಿತು. ಕೇವಲ ಧಾಮಿರ್ಕತೆಗೆ ಸೀಮಿತವಾಗಿದ್ದ ಈ ಮಠವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಿದರು ಎಂದು ಸಾಹಿತಿ ಡಾ. ವೀರಣ್ಣ ರಾಜೂರ ಹೇಳಿದರು.
ಸೋಮವಾರ ತೋಂಟದಾರ್ಯ ಮಠದಲ್ಲಿ ಏರ್ಪಡಿಸಿದ್ದ ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳ ಪೀಠಾರೋಹಣದ ರಜತಮಹೋತ್ಸವ ಹಾಗೂ ತೋಂಟದ ಸಿದ್ಧಲಿಂಗ ಶ್ರೀ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಬಾಗವಹಿಸಿ ಅವರು ಮಾತನಾಡಿದರು.
ಸಿದ್ಧಲಿಂಗ ಶ್ರೀಗಳು ಪೀಠಾಧಿಪತಿಗಳಾಗಿ ತಮ್ಮ 44 ವರ್ಷಗಳಲ್ಲಿ ನೂರು ವರ್ಷಗಳಿಗೆ ಆಗುವಷ್ಟು ಸಾಧನೆ ಮಾಡಿದ್ದಾರೆ. ಸಮಾಜಸೇವೆ, ಸಾಹಿತ್ಯ, ಸಂಸತಿ ಶಿಣ ಅನೇಕ ೇತ್ರಗಳಲ್ಲಿ ಮಹತ್ವದ ಬದಲಾವಣೆ ತಂದಿದ್ದಾರೆ. ಅವರು ಲಿಂಗೈಕ್ಯರಾದ ನಂತರ ಅವರ ಕುರಿತು 60ಕ್ಕೂ ಹೆಚ್ಚು ಪುಸ್ತಕಗಳು ಬಿಡುಗಡೆ ಆಗಿರುವುದು ಅವರ ಶಕ್ತಿಗೆ ಸಾಯಾಗಿದೆ ಎಂದರು.
ಪತ್ರಕರ್ತ ವಿಲಾಸ ನಾಂದೋಡ್ಕರ ಮಾತನಾಡಿ, ಮಠಗಳು ಎಂದ ತಣ ನಮಗೆ ಮೊದಲು ನೆನಪಾಗುವುದೇ ತೋಂಟದಾರ್ಯ ಮಠ. ಲಿಂಗೈಕ್ಯ ಗುರುಗಳು ಈ ಮಠವನ್ನು ಇತರೆ ಮಠಗಳಿಗೆ ಮಾದರಿಯಾಗುವಂತೆ ಬೆಳೆಸಿದ್ದಾರೆ. ಕಪ್ಪತಗುಡ್ಡವನ್ನು ಭೂದಾಹಿಗಳು ಕಬಳಿಸಲು ಯತ್ನಿಸಿದಾಗ ಅದರ ರಣೆ ಬಯಸಿದ್ದ ನಮಗೆಲ್ಲ ಪ್ರೇರಕಶಕ್ತಿಯಾಗಿದ್ದವರೇ ತೋಂಟದ ಸಿದ್ಧಲಿಂಗ ಶ್ರೀಗಳು. ಅವರ 50ನೇ ವರ್ಷದ ಪಟ್ಟಾ-ಕಾರ ಸಂದರ್ಭದಲ್ಲಿ ಅವರ ಹೆಸರಿನ ಪುರಸ್ಕಾರ ದೊರೆತಿರುವುದು ನನ್ನ ಪುಣ್ಯ ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ವಿಲಾಸ ನಾಂದೋಡ್ಕರ ಹಾಗೂ ರುನಾಥ ಸಿ.ಎಚ್​ ಅವರಿಗೆ ಡಾ.ತೋಂಟದ ಸಿದ್ಧಲಿಂಗ ಶ್ರೀ ಪುರಸ್ಕಾರ ಪ್ರದಾನ ಮಾಡಲಾಯಿತು.
ಡಾ.ತೋಂಟದ ಸಿದ್ಧರಾಮ ಶ್ರೀಗಳು ಆಶೀರ್ವಚನ ನೀಡಿದರು. ಎಸ್​. ಎಸ್​. ಪಟ್ಟಣಶೆಟ್ಟರ, ಗುರುಮಠಕಲ್​ ಶಾಂತವೀರ ಮುರುರಾಜೇಂದ್ರ ಶ್ರೀಗಳು, ನೇರಡಗಂಬಾ ಸಿದ್ಧಲಿಂಗೇಶ್ವರ ಮಠದ ಪಂಚಮ ಸಿದ್ಧಲಿಂಗೇಶ್ವರ ಶ್ರೀಗಳು, ಶಿವರಾಜ ಪಾಟೀಲ, ಮಲ್ಲಿಕಾರ್ಜುನ ಶೆಲ್ಲಿಕೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net