ನಾಡಿನ ಅಪರೂಪದ ರಾಜಕಾರಣಿ ಬಸವರಾಜ ಹೊರಟ್ಟಿ: ಡಾ. ತೋಂಟದ ಸಿದ್ಧರಾಮ ಶ್ರೀಗಳು

08GDG02
Published on

ವಿಜಯವಾಣಿ ಸುದ್ದಿಜಾಲ ಗದಗ

ಕಳೆದ 5 ದಶಕಗಳಿಂದ ಸಾರ್ವಜನಿಕ ಬದುಕಿನಲ್ಲಿದ್ದು, ವಿಧಾನ ಪರಿಷತ್​ ಸದಸ್ಯರಾಗಿ 45 ವರ್ಷಗಳನ್ನು ಪೂರೈಸಿದ ಸಭಾಪತಿ ಬಸವರಾಜ ಹೊರಟ್ಟಿಯವರ ಜೀವಮಾನದ ಸಾಧನೆಗಳು ಬೆರಗುಗೊಳಿಸುವಂಥದ್ದಾಗಿದೆ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ತೋಂಟದಾರ್ಯಮಠದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಬಸವರಾಜ ಹೊರಟ್ಟಿಯವರ ಬದುಕು, ಸಂಟನೆ, ಹೋರಾಟ, ಜೀವಮಾನದ ಸಾಧನೆ, ಸನ್ಮಾನ ಜೊತೆಗೆ ಅವರ ನಡೆದು ಬಂದ ದಾರಿ ಕುರಿತು ಅವಲೋಕನ, ವಚನ ಸಾಹಿತ್ಯ ಪಿತಾಮಹ .ಗು. ಹಳಕಟ್ಟಿ ಹಾಗೂ ಲಿಂಗಾನಂದ ಮಹಾಸ್ವಾಮಿಗಳ ಕುರಿತು ಏರ್ಪಡಿಸಿದ ವಿಶೇಷ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಹುಶಃ ಇಂತಹ ಸಾಧನೆಯನ್ನು ದೇಶದ ರಾಜಕೀಯ ಇತಿಹಾಸದಲ್ಲಿ ಹಿಂದೆ ಯಾರೂ ಮಾಡಿಲ್ಲ. ಮುಂದೆಯೂ ಯಾರೂ ಮಾಡಲಾರರು. ಯಡಹಳ್ಳಿ ಎಂಬ ಸಣ್ಣ ಗ್ರಾಮದಿಂದ ಬಂದ ಬಸವರಾಜ ಹೊರಟ್ಟಿಯವರು 8 ಬಾರಿ ಶಾಸಕರಾಗಿ, ಸಚಿವರಾಗಿ, ಸಭಾಪತಿಗಳಾಗಿ ಕಾರ್ಯ ನಿರ್ವಹಿಸುತ್ತಿರುವದು ದೇಶದ ಇತಿಹಾಸದಲ್ಲಿ ಮೊದಲು ಹಾಗೂ ಏಕೈಕ ಕನ್ನಡಿಗ ಎಂಬ ಹೆಮ್ಮೆ ಸಹ ನಮಗಿದೆ. ಶಿಕರೊಬ್ಬರು ಇಷ್ಟೊಂದು ಜೀವಮಾನದ ಸಾಧನೆ ಮಾಡಿದ್ದು, ಶಿಕ ಸಮೂಹಕ್ಕೆ ಗೌರವ ತಂದಿದೆ. ಶಿಕರ ಪ್ರಾಣವೇ ಹೊರಟ್ಟಿಯವರಾಗಿದ್ದಾರೆ. ಸಾವಿರಾರು ಶಿಕರ ಬದುಕಿಗೆ ಬೆಳಕು ತಂದು ಅವರ ಬದುಕನ್ನು ಹಸನು ಮಾಡಿದ್ದಾರೆ. ಹೊರಟ್ಟಿ ಅವರು ಮಠದೊಂದಿಗೆ ಕಳೆದ 5 ದಶಕಗಳಿಂದ ಒಡನಾಟವನ್ನು ಇಟ್ಟುಕೊಂಡು ಬಂದಿದ್ದಾರೆ. ಹಿಂದಿನ ಶ್ರೀಗಳ ಆಶೀರ್ವಾದವಿಲ್ಲದೆ ಯಾವೊಂದು ಕೆಲಸ ಮಾಡಿದ ನಿದರ್ಶನವಿಲ್ಲ. ಇಂದಿಗೂ ಅದೇ ವಿಶ್ವಾಸ, ಪ್ರೀತಿ, ಗೌರವವನ್ನು ನಮ್ಮ ಜೊತೆ ಹಾಗೂ ಮಠದ ಜೊತೆ ಇಟ್ಟುಕೊಂಡು ಬಂದಿದ್ದಾರೆ ಎಂದರು.

ಪ್ರಾಚಾರ್ಯ ಶಿವಾನಂದ ಪಟ್ಟಣಶೆಟ್ಟಿ ಮಾತನಾಡಿ, ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯವರೆಗಿನ ಎಲ್ಲ ಶಿಕರ ಹಿತ ಕಾಯ್ದುಕೊಂಡು ಬಂದವರು ಹೊರಟ್ಟಿಯವರು. ಅಲ್ಲದೇ ಮಠದ ಅಭಿವೃದ್ಧಿಯಲ್ಲಿಯೂ ಹೊರಟ್ಟಿಯವರ ಮಾರ್ಗದರ್ಶನ ಪಾತ್ರ ಇದೆ. ಹೀಗಾಗಿ ತೋಂಟದಾರ್ಯ ಮಠ ಅವರನ್ನು ಸದಾಕಾಲ ಗೌರವಿಸುತ್ತ ಬಂದಿದೆ ಎಂದರು.

ವಚನ ಪಿತಾಮಹ .ಗು. ಹಳಕಟ್ಟಿ ಹಾಗೂ ಲಿಂಗಾನಂದ ಮಹಾಸ್ವಾಮಿಗಳ ಕುರಿತು ಪ್ರಾಚಾರ್ಯ ರಮೇಶ ಕಲ್ಲನಗೌಡ್ರ ಉಪನ್ಯಾಸ ನೀಡಿ, ವಚನ ಸಾಹಿತ್ಯ ಇಂದು ಜೀವಂತವಾಗಿ ಉಳಿದಿದ್ದರೆ ಅದಕ್ಕೆ ಕಾರಣೀಭೂತರು .ಗು. ಹಳಕಟ್ಟಿಯವರು. ತಮ್ಮ ಎಲ್ಲ ಆಸ್ತಿಯನ್ನು ಮಾರಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ, ವಚನ ಸಾಹಿತ್ಯವನ್ನು ಮುದ್ರಣ ಮಾಡುವ ಮೂಲಕ ನಾಡಿಗೆ ಅತ್ಯಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೆ, ಲಿಂಗಾನಂದರು ಕೂಡಾ ವಚನ ಸಾಹಿತ್ಯ, ಶರಣ ಸಾಹಿತ್ಯಕ್ಕೆ ಹೊಸತನ ತರುವ ಮೂಲಕ ಈ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಇವರು ಸದಾಕಾಲ ಸ್ಮರಣೀಯರೆಂದು ಹೇಳಿದರು.

ಡಾ. ಬಸವರಾಜ ಧಾರವಾಡ ಮಾತನಾಡಿ, ಬಸವರಾಜ ಹೊರಟ್ಟಿಯವರು ಶಿಕ ಸಮೂಹದ ಅತ್ಯಂತ ನಂಬಿಗಸ್ಥ ನಾಯಕರು. ಇಂತಹ ನಾಯಕರು ಕರ್ನಾಟಕದ ಶಿಕರ ಪಾಲಿಗೆ ಸಿಕ್ಕಿದ್ದು ಭಾಗ್ಯವೇ ಸರಿ. ಇಂದು ಸಾವಿರಾರು ಶಿಕರು ನೆಮ್ಮದಿಯಿಂದ ತಮ್ಮ ಬದುಕನ್ನು ಕಟ್ಟಿಕೊಂಡಿದ್ದರೆ ಅದಕ್ಕೆ ಕಾರಣ ಬಸವರಾಜ ಹೊರಟ್ಟಿಯವರು. ಇವರೊಬ್ಬ ನಾಡಿನ ಅಪರೂಪದ ನಾಯಕ ಹಾಗೂ ಇತರ ಜನಪ್ರತಿನಿಧಿಗಳಿಗೆ ಮಾದರಿಯಾದ ರಾಜಕಾರಣಿ ಎಂದರು.

ಸನ್ಮಾನ ಸ್ವೀಕರಿಸಿದ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನನ್ನೆಲ್ಲ ಶ್ರೇಯಸ್ಸು ನಾನು ನಂಬಿಕೊಂಡು ಬಂದ ಶಿಕರ ಸಮೂಹಕ್ಕೆ ಸಲ್ಲಬೇಕು. ನಾ ಇಂದು ಏನೇ ಆಗಿದ್ದರೂ ಅದಕ್ಕೆ ಕಾರಣ ಶಿಕರು. ನನ್ನ ತಾಯಿಯ ಆಶೀರ್ವಾದ, ನಮ್ಮ ತಂದೆಯ ಆದರ್ಶಗಳು, ಮಠದ ಸಹಕಾರದಿಂದ ಸಾಧ್ಯವಾಗಿದೆ ಎಂದರು.

ಮಹಾಂತೇಶ ಗಂಗಾಧರ ಹೂಗಾರ, ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ, ವಿದ್ಯಾ ಪ್ರಭು ಗಂಜಾಳ, ರವಿ ದಂಡಿನ, ಅಶೋಕ ಜೈನ, ಎಸ್​.ಎಂ. ಅಗಡಿ, ಕೊಟ್ರೇಶ ಅಂಗಡಿ, ಎಸ್​. ಎಸ್​. ಗಡ್ಡದ, ಎಚ್​. ಡಿ. ಪೂಜಾರ, ರವಿ ಕೊಣ್ಣೂರು, ಎಂ. ಎಚ್​. ಪೂಜಾರ, ಎಸ್​. ಜಿ. ಕೋಲ್ಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net