

ವಿಜಯವಾಣಿ ಸುದ್ದಿಜಾಲ ಗದಗ
ಜಗತ್ತಿನಲ್ಲಿ ತಾಯಿಗಿಂತ ಮಿಗಿಲಾದವರು ಯಾರು ಇಲ್ಲ. ತಾಯಿ ದೇವರಿಗಿಂಲೂ ಶ್ರೇಷ್ಠ. ತಾಯಿಯೇ ದೇವರು ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ಲಿಂಗಾಯತ ಪ್ರಗತಿಶೀಲ ಸಂದ 2745 ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತಾಯಿಗೆ ಮಾತೃದೇವೂಭವ ಎನ್ನುತ್ತೇವೆ. ತಾಯಿಯನ್ನು ಪ್ರೀತಿ ಗೌರವ ಸಂತೋಷದಿಂದ ನೋಡಿಕೊಳ್ಳಬೇಕು. ತಾಯಿಯೆಂದರೆ ಭೂಮಿಯ ರೂಪ. ಆಕೆ ಭೂಮಿಯಷ್ಟೆ ಸಹನೆ ತಾಳ್ಮೆ ಕರುಣೆ ಹೊಂದಿರುತ್ತಾರೆ. ತಾಯಿಯ ಪ್ರೀತಿಯನ್ನು ಅಳೆಯಲು ಸಾಧ್ಯವಿಲ್ಲ. ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳಿದರು.
ಶಿರಹಟ್ಟಿಯ ಎ್.ಎಂ. ಡಬಾಲಿ ಕಾಲೇಜಿನ ಉಪನ್ಯಾಸಕಿ ಸುಧಾ ಹುಚ್ಚಣ್ಣವರ ತಾಯಿ ಮತ್ತು ಸಂಸತಿ ವಿಷಯ ಕುರಿತು ಉಪನ್ಯಾಸ ನೀಡಿ, ಭಾರತ ವೈವಿಧ್ಯತೆಯಲ್ಲಿ ಸಂಸ್ಕಾರ ಕಂಡ ದೇಶ. ಇಲ್ಲಿ ಸಾಂಸತಿಕ ಶ್ರೀಮಂತಿಕೆ ಇದೆ. ತಾಯಿ ಸಂಸ್ಕಾರದ ಪ್ರತಿಕ. ತಾಯಿಯ ಸಂಸ್ಕಾರದಿಂದ ಮಕ್ಕಳು ಒಳ್ಳೆಯವರಾಗುತ್ತಾರೆ. ಆಧುನಿಕ ಜಗತ್ತಿನಲ್ಲಿ ತಾಯಿಯ ಸಂಸ್ಕಾರ ಮುಖ್ಯ. ವೃದ್ದಾಶ್ರಮಗಳು ನಶಿಸಿ ಮತ್ತೆ ಮಾತೃದೇವೋಭವ ಮೊಳಗಬೇಕಾಗಿದೆ. ಮದರ್ ತೆರೇಸಾ, ಸಾಲುಮರದ ತಿಮ್ಮಕ್ಕ ಮುಂತಾದ ಮಹಿಳೆಯರ ಆದರ್ಶಗಳು ಪಾಲನೆ ಆಗಬೇಕು ಎಂದು ತಿಳಿಸಿದರು.
ರೇವಣಸಿದ್ದಪ್ಪ ಪಟ್ಟಣಶೆಟ್ಟರ, ಶೀಲಾ ಸುರೇಶ ಸಗರದ, ಶ್ರೀಧರ ಪಾಟೀಲ, ಬಾಲಚಂದ್ರ ಭರಮಗೌಡ್ರ, ಡಾ.ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ವೀರಣ್ಣ ಗೋಟಡಕಿ, ಸೋಮನಾಥ ಪುರಾಣಿಕ ನಾಗರಾಜ ಹಿರೇಮಠ ಇತರರು ಇದ್ದರು.